ಹೈದರಾಬಾದ್: ಹೊಸ ವರ್ಷದ ಮೊದಲ ದಿನದಂದು ವಾಣಿಜ್ಯ ಸಿಲಿಂಡರ್ ಗ್ರಾಹಕರಿಗೆ ಉಡುಗೊರೆ ನೀಡಲಾಗಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಂಡಿಯನ್ ಆಯಿಲ್ ಕಡಿತಗೊಳಿಸಿದೆ. 14.2 ಕೆಜಿ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇಂಡಿಯನ್ ಆಯಿಲ್ (IOCL) ಪ್ರಕಾರ, ಜನವರಿ 1, 2022 ರಂದು, ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 102 ರೂ. ಕಡಿತಗೊಳಿಸಲಾಗಿದೆ. ದೆಹಲಿಯಲ್ಲಿ 19 ಕೆಜಿಯ ಸಿಲಿಂಡರ್ 1998 ರೂ. ದೊರೆಯಲಿದೆ. ಚೆನ್ನೈನಲ್ಲಿ ಗ್ರಾಹಕರು 2,131 ರೂ. ಹಾಗೂ ಮುಂಬೈನಲ್ಲಿ 1948.50 ರೂ ಪಾವತಿಸಬೇಕಾಗುತ್ತದೆ. ಇದೇ ಕೋಲ್ಕತ್ತಾ ಗ್ರಾಹಕರಿಗೆ 2076 ರೂ.ಗೆ ಲಭ್ಯವಾಗಲಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 100 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಈ ಬಾರಿಯೂ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು.
ಇಂಡಿಯನ್ ಆಯಿಲ್ ಪ್ರಕಾರ, ಹೊಸ ವರ್ಷದಲ್ಲೂ ದೆಹಲಿ ಮತ್ತು ಮುಂಬೈನಲ್ಲಿ 14.2 ಕೆಜಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 900 ರೂ. ಇದೆ. ಇನ್ನು ಕೋಲ್ಕತ್ತಾದಲ್ಲಿ 926 ರೂ. ಇದ್ದರೆ, ಚೆನ್ನೈನಲ್ಲಿ 916 ರೂ. ಇದೆ.
ಇದನ್ನೂ ಓದಿ:2022ರಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಕೋಟಿ ಕೋಟಿ ಹಣ ಗಳಿಸೋಕೆ ಅತ್ಯುತ್ತಮ ಮಾರ್ಗಗಳಿವು!