ಕೊಚ್ಚಿ: ಕೇರಳದ ಲಾಟರಿ ಮಾರಾಟಗಾರ್ತಿಯೊಬ್ಬರು ಗ್ರಾಹಕರಿಗೆ ಮಾರಾಟ ಮಾಡಿದ್ದರೂ, ತನ್ನಲ್ಲಿ ಉಳಿದಿದ್ದ ಟಿಕೆಟ್ಗೆ 6 ಕೋಟಿ ರೂ. ಮೌಲ್ಯದ ಬಹುಮಾನ ಬಂದಿತ್ತು. ಆದರೆ ಅವರು ಲಾಟರಿ ಟಿಕೆಟ್ ಅನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗೆ ನೀಡಿದ್ದು ಭಾರೀ ಮೆಚ್ಚುಗೆ ಸಂಪಾದಿಸಿದ್ದಾರೆ.
ಸ್ಮೀಜಾ ಕೆ. ಮೋಹನ್ ಎಂಬವರು ಜಾಕ್‌ಪಾಟ್ ಟಿಕೆಟ್‌ನ್ನು ಚಂದ್ರನ್ ಎಂಬುವರಿಗೆ ಮಾರಾಟ ಮಾಡಿದ್ದರು. ಕೊರೊನಾ ಕಾಲದಲ್ಲಿ ಜನರು ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವ ಈ ಸಮಯದಲ್ಲಿ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸ್ಮೀಜಾ ಅವರು ವಿಜೇತ ಟಿಕೆಟ್ ಅನ್ನು ಗ್ರಾಹಕ ಚಂದ್ರನ್ ಅವರಿಗೆ ನೀಡಿದ್ದಾರೆ.
ಇದನ್ನೂ ಓದಿ: ಮಿಸ್ತ್ರಿ ವಜಾ ಸರಿ- ಸುಪ್ರೀಂ: 'ಇದು ಗೆಲುವು ಅಥವಾ ಸೋಲಿನ ವಿಷಯವಲ್ಲ'- ಕೋರ್ಟ್ಗೆ ರತನ್ ಕೃತಜ್ಞತೆ
37 ವರ್ಷದ ಸ್ಮೀಜಾ ಅವರ ಬಳಿ ಸುಮಾರು 12 ಮಾರಾಟವಾಗದ ಬಂಪರ್ ಟಿಕೆಟ್‌ಗಳು ಉಳಿದಿದ್ದವು. ಲಾಟರಿ ಟಿಕೆಟ್ ಖರೀದಿದಾರರ ವಾಟ್ಸಾಪ್ ಗ್ರೂಪ್ನಲ್ಲಿ ಟಿಕೆಟ್ ಬಗ್ಗೆ ಪೋಸ್ಟ್ ಮಾಡಿದ್ದರು. ಆ 12 ಟಿಕೆಟ್‌ಗಳನ್ನು ಖರೀದಿಸಲು ಯಾರೂ ಸಿದ್ಧರಿರಲಿಲ್ಲ. ಸ್ಮಿಜಾ ಅವರು ಚಂದ್ರನ್ ಚೆಟ್ಟನ್ ಅವರನ್ನು ಸಂಪರ್ಕಿಸಿದ್ದಾರೆ. ಆ ನಂತರ ಆತ ಟಿಕೆಟ್ಗಳ ಫೋಟೋ ಕಳುಹಿಸಲು ಕೇಳಿದ. ಆ ಬಳಿಕ ಲಾಟರಿ ಆಯ್ಕೆಯ ಸಂಖ್ಯೆಗಳನ್ನೂ ಕೇಳಿದ.
ವಿಜೇತ ಸಂಖ್ಯೆಗಳ ಬಗ್ಗೆ ತಿಳಿಯುತ್ತಿದ್ದಂತೆ ಸ್ಮೀಜಾ ಅವರು ಜಾಕ್‌ಪಾಟ್ ಟಿಕೆಟ್‌ನ್ನು ಅದರ ಮಾಲೀಕರಿಗೆ ಆದಷ್ಟು ಬೇಗ ಹಸ್ತಾಂತರಿಸಲು ನಿರ್ಧರಿಸಿ ಆತನಿಗೆ ನೀಡಿದ್ದಾರೆ. 'ಟಿಕೆಟ್‌ಗಳನ್ನು ಗ್ರಾಹಕರು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಖರೀದಿಸುತ್ತಾರೆ. ವ್ಯವಹಾರದಲ್ಲಿ ಗ್ರಾಹಕರಿಗೆ ಟಿಕೆಟ್ ನೀಡುವುದು ಪ್ರಾಮಾಣಿಕವಾದದ್ದು' ಎನ್ನುತ್ತಾರೆ ವರ್ತಕಿ ಸ್ಮೀಜಾ.