ನವದೆಹಲಿ: ದ್ವಿಚಕ್ರ ವಾಹನ ದೈತ್ಯ ಹೀರೋ ಮೊಟೊಕಾರ್ಪ್ 2021ರ ಏಪ್ರಿಲ್ 1ರಿಂದ ತನ್ನ ವಾಹನಗಳ ಬೆಲೆಗಳನ್ನು ಏರಿಕೆ ಮಾಡಲಿದೆ.
ದ್ವಿಚಕ್ರ ವಾಹನಗಳ ವ್ಯಾಪ್ತಿಯಲ್ಲಿ ಬೆಲೆ ಹೆಚ್ಚಳವು 2,500 ರೂ.ಗಳಷ್ಟಾಗಲಿದ್ದು, ಏರಿಕೆಯ ನಿಖರ ಪ್ರಮಾಣವು ಮಾದರಿ ಮತ್ತು ನಿರ್ದಿಷ್ಟ ಮಾರುಕಟ್ಟೆಯ ಆಧಾರದ ಮೇಲೆ ಬದಲಾಗುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
"ಹೀರೋ ಮೊಟೊಕಾರ್ಪ್ ತನ್ನ ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಗಳ ಎಕ್ಸ್‌ಶೋರೂಂ ಬೆಲೆ ಏರಿಕೆಯ ಪರಿಷ್ಕರಣೆ ಮಾಡಲಿದೆ. 2021ರ ಏಪ್ರಿಲ್ 1ರಿಂದ ದರ ಪರಿಷ್ಕರಣೆ ಜಾರಿಗೆ ಬರಲಿದೆ. ಹೆಚ್ಚಾಗುತ್ತಿರುವ ಸರಕು ವೆಚ್ಚಗಳ ಪರಿಣಾಮವನ್ನು ಭಾಗಶಃ ಸರಿದೂಗಿಸಲು ಈ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ." ಎಂದು ಕಂಪನಿ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: 5 ಲಕ್ಷ ರೂ. ತನಕದ ಠೇವಣಿ ಮೇಲಿನ ಪಿಎಫ್‌ಗೆ ತೆರಿಗೆ ವಿನಾಯಿತಿ: ನಿರ್ಮಲಾ ಸೀತಾರಾಮನ್ ಘೋಷಣೆ