ETV Bharat / business

ದೇಶದ ಆರ್ಥಿಕತೆ ಕುಂಠಿತ: ಇದಕ್ಕೆ ಕಾರಣಗಳೇನು ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ದೇಶದ ಆರ್ಥಿಕತೆಯೂ ಮಂದಗತಿಯಲ್ಲಿ ಸಾಗುತ್ತಿದೆ. ಈ ಬೆಳವಣಿಗೆಗೆ ಹಲವಾರು ಕಾರಣಗಳನ್ನು ನಾವು ನೋಡಬಹುದಾಗಿದೆ. ಹಲವಾರು ಕ್ಷೇತ್ರಗಳಾದ ಉತ್ಪಾದನೆ, ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಪ್ರಸಾರ, ಕೃಷಿ ಹೀಗೆ ಇತರ ಕ್ಷೇತ್ರಗಳು ಕುಸಿತ ಕಾಣುತ್ತಿವೆ. ಅಲ್ಲದೇ ಜಾಗತಿಗ ಮಟ್ಟದಲ್ಲಿ ಉಂಟಾಗುತ್ತಿರುವ ವ್ಯಾಪಾರ ಯುದ್ಧಗಳು ಕೂಡ ಕಾರಣವೆಂದು ಕೆಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ದೇಶದ ಆರ್ಥಿಕತೆ ಕುಂಠಿತ
author img

By

Published : Sep 9, 2019, 7:57 PM IST

ನವದೆಹಲಿ: ದೇಶದ ಜಿಡಿಪಿಯೂ ಶೇ.8 ರಿಂದ ಶೇ. 5ಕ್ಕೆ ಇಳಿದಿದೆ. ಇಂತಹ ಕ್ಷಿಪ್ರ ಮಂದಗತಿಗೆ ಅನೇಕ ಕಾರಣಗಳನ್ನು ನಾವು ಕಾಣಬಹುದಾಗಿದೆ.

ಮೊದಲನೇಯದಾಗಿ ಹೂಡಿಕೆಯೂ 2011-12ರಲ್ಲಿ ಶೇ. 34 ರಷ್ಟು ಇದ್ದಿದ್ದು, 2017-18ರಲ್ಲಿ ಶೇ. 24ಕ್ಕೆ ಇಳಿದಿದೆ. ಉತ್ಪಾದನಾ ವಲಯದಲ್ಲಿ ತಂದ ಕೆಲವು ಸುಧಾರಣೆಗಳು, ಐಎಲ್​​ ಮತ್ತು ಎಫ್​​ಎಸ್​​​ ನಂತಹ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿನ ಉಂಟಾದ ಕೆಲವು ಸಮಸ್ಯೆಗಳಿಂದಾಗಿ ಜಿಡಿಪಿಯೂ ಶೇ. 5 ರಷ್ಟು ಇಳಿದಿದ್ದು, ಗ್ರಾಮೀಣ ಆರ್ಥಿಕತೆ, ರೈತರ ಆದಾಯ ಇವೆಲ್ಲವೂ ಕೂಡ ಜಿಡಿಪಿ ಇಳಿಕೆಗೆ ಕಾರಣವಾಗಿವೆ.

ಅಲ್ಲದೇ ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ನಡೆಯುತ್ತಿದೆ. ಈ ಯುದ್ಧವೂ 2018 ರ ಜನವರಿ-ಮಾರ್ಚ್ ತಿಂಗಳಿನಲ್ಲಿ ಬಲವಾಗಿ ಬೆಳೆದ ಪರಿಣಾಮ ಜಾಗತಿಕ ಆರ್ಥಿಕತೆಯು ನಿಧಾನವಾಗಲು ಪ್ರಾರಂಭಿಸಿತು. ಹಲವಾರು ಕ್ಷೇತ್ರಗಳಾದ ಉತ್ಪಾದನೆ, ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ ಮತ್ತು ಪ್ರಸಾರ, ಕೃಷಿ ಹೀಗೆ ಇತರ ಕ್ಷೇತ್ರಗಳು ಕುಸಿತ ಕಾಣುತ್ತಿವೆ. ಇನ್ನು ಉತ್ಪಾದನಾ ಬೆಳವಣಿಗೆಯೂ ಹಣಕಾಸು ವರ್ಷ 2020 ರಲ್ಲಿ ಕೇವಲ 0.6% ಆಗಿತ್ತು. ಕಳೆದ 18 ತಿಂಗಳುಗಳಲ್ಲಿ 286 ಕ್ಕೂ ಹೆಚ್ಚು ಮಾರಾಟಗಾರರು ತಮ್ಮ ಮಳಿಗೆಗಳನ್ನು ಮುಚ್ಚಿದ್ದಾರೆ. ಅಲ್ಲದೇ 15,000ಕ್ಕೂ ಹೆಚ್ಚು ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಅರ್ಥಿಕತೆಯ ನಿಧಾನಗತಿಯು ರಚನಾತ್ಮಕ ಅಥವಾ ಆವರ್ತಕ ಅಂಶಗಳಿಂದ ಉಂಟಾಗಿದೆ ಎಂದು ಹಲವಾರು ಅರ್ಥಶಾಸ್ತ್ರಜ್ಞರು ಚರ್ಚಿಸಿದ್ದಾರೆ. ಉದಾಹರಣೆಗೆ, ಆಟೋ ವಲಯದ ಬೇಡಿಕೆ ಕುಸಿತವೂ ರಚನಾತ್ಮಕ ಅಂಶಗಳಿಂದಾಗಿರಬಹುದು. ಕೊಟಕ್ ಮಹೀಂದ್ರಾ ಬ್ಯಾಂಕ್​​​ನ ಎಂಡಿ ಉದಯ್ ಕೊಟಕ್ ಅವರು ಚಿಕ್ಕವರಿದ್ದಾಗ ವಾಹನ ಹೊಂದಿರುವುದು ಪ್ರತಿಷ್ಠೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಆದ್ರೆ ಇದೀಗ ಅವರ ಮಗ ಓಲಾ ಅಥವಾ ಉಬರ್ ಮೂಲಕ ಹೋಗಲು ಆದ್ಯತೆ ನೀಡಿದ್ದರಿಂದ, ಕಾರು ಖರೀದಿಸಲು ಬಯಸುತ್ತಿಲ್ಲ ಎನ್ನುತ್ತಾರೆ. ಟ್ರಾಫಿಕ್ ಮತ್ತು ಪಾರ್ಕಿಂಗ್ ಸಮಸ್ಯೆಗಳಿಂದಾಗಿ ಕೆಲವರು ದೊಡ್ಡ ನಗರಗಳಲ್ಲಿ ಕಾರುಗಳನ್ನು ಹೊಂದಲು ಬಯಸುವುದಿಲ್ಲ. ಈ ರಚನಾತ್ಮಕ ಸಮಸ್ಯೆ ವಾಹನ ಮಾರಾಟದಲ್ಲಿನ ಮಂದಗತಿಗೆ ಕಾರಣವಾಗಿದೆ ಎಂದಿದ್ದಾರೆ.

ಇತ್ತೀಚೆಗೆ, ಆರ್‌ಬಿಐನ ಮಾಜಿ ಗವರ್ನರ್ ಡಾ. ವೈ.ವಿ. ರೆಡ್ಡಿ ಅವರು ಆರ್ಥಿಕತೆ ನಿಧಾನಗತಿಯಲ್ಲಿ ಸಾಗಲು ರಚನಾತ್ಮಕ ಅಂಶಗಳ ಸಂಯೋಜನೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಚೀನಾ-ಅಮೆರಿಕದ ವ್ಯಾಪಾರ ಸಂಘರ್ಷ ಮುಂತಾದ ಜಾಗತಿಕ ಅಂಶಗಳು ಮಂದಗತಿಗೆ ಕಾರಣವಾಗಿವೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳುತ್ತಾರೆ.

ಕಳೆದ ಕೆಲವು ದಿನಗಳ ಹಿಂದೆ ಹೂಡಿಕೆಯಲ್ಲಿ ಸುಧಾರಣೆ ತರಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

1. ಈಕ್ವಿಟಿ ಮಾರುಕಟ್ಟೆಗಳಲ್ಲಿ ಬಂಡವಾಳ ಲಾಭದ ಕುರಿತು ವಿದೇಶಿ ಮತ್ತು ದೇಶೀಯ ಬಂಡವಾಳ ಹೂಡಿಕೆದಾರರ ಮೇಲೆ ಸೂಪರ್ ರಿಚ್ ಸರ್ಚಾರ್ಜ್ ನೀಡುವ ವಿವಾದಾತ್ಮಕ ಬಜೆಟ್ ಪ್ರಸ್ತಾಪವನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ಮೂಲಕ ವಿದೇಶಿ ಹೂಡಿಕೆದಾರರಿಗೆ ಬಿಗ್​ ರಿಲೀಫ್​ ನೀಡಿದೆ.

2. ಏಂಜಲ್ ತೆರಿಗೆಯನ್ನು ಹಿಂತೆಗೆದುಕೊಳ್ಳುವುದು.

3. ಬ್ಯಾಂಕುಗಳಿಗೆ 70,000 ಕೋಟಿ ರೂ. ಅನುದಾನ ನೀಡಿ, ಬ್ಯಾಂಕಿಂಗ್​ ಕ್ಷೇತ್ರವನ್ನು ಬೂಸ್ಟ್​ ಮಾಡಿದೆ.

4. ಹೌಸಿಂಗ್ ಫೈನಾನ್ಸ್ ಕಂಪನಿಗಳಿಗೆ ರೂ. 20,000 ಕೋಟಿ. ನೀಡುವುದು.

5. ಬಿಎಸ್ಐವಿ ವಾಹನಗಳ ಬಗ್ಗೆ ಸ್ಪಷ್ಟೀಕರಣ.

6. ಎಂಎಸ್‌ಎಂಇ ವಲಯಕ್ಕೆ 30 ದಿನಗಳಲ್ಲಿ ಮರುಪಾವತಿ ಮಾಡುವ ಭರವಸೆ.

7. 10 ಸಾರ್ವಜನಿಕ ವಲಯದ ಬ್ಯಾಂಕ್​​ಗಳನ್ನು 4ಕ್ಕೆ ವಿಲೀನಗೊಳಿಸುವುದು.

8. ಆರ್‌ಬಿಐ ರೂ.1.76 ಲಕ್ಷ ಕೋಟಿಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಒಪ್ಪಿಗೆ ನೀಡಿದೆ. ಇದಕ್ಕಾಗಿ ಬಿಮಲ್​ ಜಲನ್​ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಈ ಮೂಲಕ ಕೇಂದ್ರ ಸರ್ಕಾರ ಸದ್ಯದ ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಳ್ಳಲು ಮುಂದಾಗಿದೆ.

ಹೂಡಿಕೆಯಲ್ಲಿ ಬೆಳವಣಿಗೆಯನ್ನು ಕಾಣಲು ನಮಗೆ ದೀರ್ಘಾವಧಿಯ ರಚನಾತ್ಮಕ ಸುಧಾರಣೆಗಳು ಬೇಕಾಗುತ್ತವೆ ಎಂದು ಮುಖ್ಯ ಆರ್ಥಿಕ ಸಲಹೆಗಾರರು ಉಲ್ಲೇಖಿಸುತ್ತಾರೆ. ಇತರ ವಿಷಯಗಳ ಜೊತೆಗೆ ಭೌತಿಕ ಮೂಲಸೌಕರ್ಯ ಅಭಿವೃದ್ಧಿ, ಮಾನವ ಬಂಡವಾಳವನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನ ಈ ಮೂರು ವಿಷಯಗಳತ್ತ ಗಮನ ಹರಿಸಬೇಕಾಗಿದೆ ಎಂದಿದ್ದಾರೆ.

ಉದ್ಯೋಗ ಸೃಷ್ಟಿಯಲ್ಲಿ ಕೃಷಿ, ಕೈಗಾರಿಕೆ ಮತ್ತು ಸೇವ ವಲಯಗಳು 2017-18ರಲ್ಲಿ ಕ್ರಮವಾಗಿ ಶೇ 44, ಶೇ 25ಮತ್ತು ಶೇ.31 ರಷ್ಟು ಷೇರುಗಳನ್ನು ಹೊಂದಿವೆ. ಆದರೆ, ಉತ್ಪಾದನಾ ವಲಯದ ಪಾಲು ಒಟ್ಟು ಉದ್ಯೋಗದಲ್ಲಿ ಕೇವಲ ಶೇ12 ರಷ್ಟು ಮಾತ್ರ ಇದೆ. ಆರ್ಥಿಕ ಬೆಳವಣಿಗೆ ಕುಂಠಿತಕ್ಕೆ ಒಬ್ಬ ವ್ಯಕ್ತಿಯ ಬಂಡವಾಳವೂ ಕೂಡ ಕಾರಣವಾಗುತ್ತದೆ. ವ್ಯಕ್ತಿಯ ಬಂಡವಾಳವನ್ನು ಹೆಚ್ಚಿಸಲು ಆರೋಗ್ಯ ಮತ್ತು ಶಿಕ್ಷಣದಲ್ಲಿನ ಸಾಧನೆಗಳು ಅತ್ಯಗತ್ಯವಾಗಿವೆ. ನಮ್ಮ ದೇಶದ ಶೇ. 70 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ಇರುವುದರಿಂದ ಅವರ ಆದಾಯ ಮತ್ತು ವೇತನ ಎರಡು ಕಡಿಮೆ ಇದೆ. ಹಾಗಾಗಿ ಗ್ರಾಮೀಣ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ.

ಈ ಎಲ್ಲ ಕಾರಣಗಳಿಂದ ಆರ್ಥಿಕ ಬೆಳವಣಿಗೆ ಸಾಧಿಸಲು ದೀರ್ಘಾವಧಿಯ ಸುಧಾರಣೆಗಳ ಅಗತ್ಯವಿದೆ. ಇನ್ನು ಈ ಬೆಳವಣಿಗೆಗಳನ್ನು ಸಾಧಿಸಲು ಭೌತಿಕ ಮೂಲಸೌಕರ್ಯದ ಅಭಿವೃದ್ಧಿ, ವ್ಯಕ್ತಿಯ ಬಂಡವಾಳದಲ್ಲಿ ಉತ್ತೇಜನ ನೀಡುವುದು ಹಾಗೂ ಗ್ರಾಮೀಣ ಆರ್ಥಿಕತೆಯಲ್ಲಿ ಸುಧಾರಣೆಗಳನ್ನು ತರುವ ಅವಶ್ಯಕತೆ ಇದೆ. ಜಿಎಸ್​ಟಿ ಕೌನ್ಸಿಲ್​​ನಂತೆ ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ಸಮನ್ವಯತೆಯಿಂದ ಇರಬೇಕಾಗಿದೆ.

Intro:ಕಲಬುರಗಿ:ರಿಂಗ್ ರಸ್ತೆಯ ಮಿರ್ಚಿ ಗೋದಾಮಿನ ಬಳಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಾಘವೇಂದ್ರನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮಹ್ಮದ್ ಅಜರ್ ಹಾಗೂ ಸೈಯದ್ ಸಾಜೀದ್ ಎಂದು ಗುರುತಿಸಲಾಗಿದೆ.ಸೆಪ್ಟೆಂಬರ್ 02ರಂದು ಶಫೀಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು.ಹಂತಕರ ಜಾಡು ಹಿಡಿದ ಪೊಲೀಸರು ಕೊನೆಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.ಬಂಧತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೈಟ್-ಕಿಶೋರ್ ಬಾಬು, ಡಿಸಿಪಿ, ಕಲಬುರ್ಗಿ.Body:ಕಲಬುರಗಿ:ರಿಂಗ್ ರಸ್ತೆಯ ಮಿರ್ಚಿ ಗೋದಾಮಿನ ಬಳಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ರಾಘವೇಂದ್ರನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಮಹ್ಮದ್ ಅಜರ್ ಹಾಗೂ ಸೈಯದ್ ಸಾಜೀದ್ ಎಂದು ಗುರುತಿಸಲಾಗಿದೆ.ಸೆಪ್ಟೆಂಬರ್ 02ರಂದು ಶಫೀಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು.ಹಂತಕರ ಜಾಡು ಹಿಡಿದ ಪೊಲೀಸರು ಕೊನೆಗೂ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.ಬಂಧತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೈಟ್-ಕಿಶೋರ್ ಬಾಬು, ಡಿಸಿಪಿ, ಕಲಬುರ್ಗಿ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.