ETV Bharat / business

ಇಳಿಮುಖದತ್ತ ಸಾಗಿದ ಬಂಗಾರ: ಬೆಳ್ಳಿ ಬೆಲೆಯಲ್ಲೂ 1,077 ರೂ. ಇಳಿಕೆ! - ಬೆಳ್ಳಿ

ಹಳಿದ ಲೋಹದ ಪ್ರತಿ10 ಗ್ರಾಂ. ಮೇಲೆ 210 ರೂ. ಇಳಿಕೆಯಾಗಿ 51,963 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನ 0 ಗ್ರಾಂ.ಗೆ 52,173 ರೂ. ಮಾರಾಟ ಆಗುತ್ತಿತ್ತು ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ತಿಳಿಸಿದೆ. ಹಿಂದಿನ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 66,255 ರೂ.ಗಳಿಂದ 1,077 ರೂ. ಕ್ಷೀಣಿಸಿ 65,178 ರೂ.ಗೆ ತಲುಪಿದೆ.

Gold
ಚಿನ್ನ
author img

By

Published : Aug 26, 2020, 5:19 PM IST

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿ ಮತ್ತು ಡಾಲರ್​ ವಿರುದ್ಧ ರೂಪಾಯಿ ಮೌಲ್ಯ ಏರಿಕೆ ಹಿನ್ನೆಲೆಯಲ್ಲಿ ಇಂದು ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.

ಹಳಿದ ಲೋಹದ ಪ್ರತಿ10 ಗ್ರಾಂ. ಮೇಲೆ 210 ರೂ. ಇಳಿಕೆಯಾಗಿ 51,963 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನ 10 ಗ್ರಾಂ.ಗೆ 52,173 ರೂ. ಮಾರಾಟ ಆಗುತ್ತಿತ್ತು ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 66,255 ರೂ.ಗಳಿಂದ 1,077 ರೂ. ಕ್ಷೀಣಿಸಿ 65,178 ರೂ.ಗೆ ತಲುಪಿದೆ.

ದೆಹಲಿಯಲ್ಲಿ 24 ಕ್ಯಾರೆಟ್‌ ಸ್ಪಾಟ್ ಚಿನ್ನದ ಬೆಲೆಗಳು ಇಳಿಮುಖವಾಗುತ್ತಿವೆ. ಜಾಗತಿಕ ಬೆಲೆಗಳು ಮತ್ತು ರೂಪಾಯಿ ವೃದ್ಧಿಯಿಂದಾಗಿ 210 ರೂ. ತಗ್ಗಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು 3ಪೈಸೆ ಹೆಚ್ಚಳವಾಗಿ 74.30 (ತಾತ್ಕಾಲಿಕ) ರೂ.ಗೆ ತಲುಪಿತು. ಇದು ಸಕಾರಾತ್ಮಕ ದೇಶಿಯ ಷೇರುಗಳು ಮತ್ತು ನಿರಂತರ ವಿದೇಶಿ ನಿಧಿಯ ಒಳಹರಿವಿನ ಬೆಂಬಲ ಹೊಂದಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್​ ಚಿನ್ನವು 1,918 ಡಾಲರ್‌ಗೂ ಕಡಿಮೆ ಪ್ರಮಾಣದಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 26.45 ಡಾಲರ್‌ನಲ್ಲಿದೆ.

ಕೋವಿಡ್​ ಲಸಿಕೆ ಭರವಸೆಗಳ ಬಗ್ಗೆ ಸಕಾರಾತ್ಮಕ ಭಾವನೆ ಮತ್ತು ಅಮೆರಿಕ - ಚೀನಾ ವ್ಯಾಪಾರದ ಉದ್ವಿಗ್ನತೆಯನ್ನು ಸರಾಗಗೊಳಿಸುವ ಮೂಲಕ ಚಿನ್ನದ ಬೆಲೆಗಳು ಬುಧವಾರ ಕುಸಿತದ ಹಾದಿ ಹಿಡಿದವು.

ಸಂಭಾವ್ಯ ಕೋವಿಡ್​-19 ಲಸಿಕೆ ಮತ್ತು ಯುಎಸ್ - ಚೀನಾ ವಾಣಿಜ್ಯ ಸಮರದ ಸಕಾರಾತ್ಮಕ ಸಂಕೇತಗಳ ಸುತ್ತಲಿನ ಭರವಸೆಗಳು ಅಪಾಯದ ಮನೋಭಾವ ಹೆಚ್ಚಿಸುತ್ತಿರುವುದರಿಂದ ಚಿನ್ನದ ಬೆಲೆಗಳು ಇಳಿಮುಖವಾಗುತ್ತಿವೆ ಎಂದು ವಿ.ಪಿ. ಕಮೊಡಿಟೀಸ್ ರಿಸರ್ಚ್‌, ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್​​ನ ನವೀತ್ ದಮಾನಿ ಪಿಟಿಐಗೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.