ನವದೆಹಲಿ: ಪ್ರಬಲ ಜಾಗತಿಕ ಪ್ರವೃತ್ತಿಯ ಮೇರೆಗೆ ಚಿನ್ನದ ಬೆಲೆ ಸೋಮವಾರದ ವಹಿವಾಟು ಸೇರಿ ಸತತ ನಾಲ್ಕನೇ ದಿನವೂ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಚಿನ್ನದ ಮೇಲೆ 277 ರೂ. ಏರಿಕೆ ಕಂಡು 52,183 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ. ಗೆ 51,906 ರೂ. ಬೆಲೆಯಲ್ಲಿ ಕೊನೆಗೊಂಡಿತ್ತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 65,005 ರೂ. ಇದ್ದದ್ದು 694 ರೂ. ಹೆಚ್ಚಳವಾಗಿದೆ 65,699 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,960 ಡಾಲರ್‌ಗಳಷ್ಟು ಲಾಭದೊಂದಿಗೆ ಖರೀದಿ ಆಗುತ್ತಿದ್ದರೆ, ಬೆಳ್ಳಿ 25.75 ಡಾಲರ್ನಲ್ಲಿ ನಿರತವಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಜಯಗಳಿಸಿದ ನಂತರ ಚಿನ್ನದ ಬೆಲೆಗಳು ಹೆಚ್ಚು ವಹಿವಾಟು ನಡೆಸಿದವು. ಇದು ಕೊರೊನಾ ವೈರಸ್ ನೆರವು ಪ್ಯಾಕೇಜ್‌ನ ಭರವಸೆ ಹೆಚ್ಚಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.