ETV Bharat / business

ಒಂದೇ ದಿನ 3,615 ರೂ. ಏರಿಕೆಯಾದ ಬೆಳ್ಳಿ: ಚಿನ್ನದ ದರ ಕೇಳುವಂತಿಲ್ಲ! - Today Gold Rate

ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನದ ಬೆಲೆ 10 ಗ್ರಾಂ. ಮೇಲೆ 743 ರೂ. ಏರಿಕೆಯಾಗಿ, 52,508 ರೂ. ತಲುಪಿದೆ. ಬೆಳ್ಳಿ ಸಹ ಭಾರೀ ಬೇಡಿಕೆಗೆ ಸಾಕ್ಷಿಯಾಗಿದ್ದು, ಪ್ರತಿ ಕೆ.ಜಿ. ಮೇಲೆ 3,615 ರೂ. ಹೆಚ್ಚಳವಾಗಿದೆ ಎಂದು ಹೆಚ್​ಡಿಎಫ್​ಸಿ ಸೆಕ್ಯೂರಿಟೀಸ್ ತಿಳಿಸಿದೆ.

Gold
ಚಿನ್ನ
author img

By

Published : Aug 27, 2020, 7:49 PM IST

ನವದೆಹಲಿ: ಜಾಗತಿಕ ಮಾರುಕಟ್ಟೆಯ ನಡೆಯನ್ನು ಅನುಸರಿಸಿದ ದೇಶಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆ ದಾಖಲಿಸಿವೆ.

ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನದ ಬೆಲೆ 10 ಗ್ರಾಂ. ಮೇಲೆ 743 ರೂ. ಏರಿಕೆಯಾಗಿ, 52,508 ರೂ. ತಲುಪಿದೆ. ಬೆಳ್ಳಿ ಸಹ ಭಾರೀ ಬೇಡಿಕೆಗೆ ಸಾಕ್ಷಿಯಾಗಿದ್ದು, ಪ್ರತಿ ಕೆ.ಜಿ ಮೇಲೆ 3,615 ರೂ. ಹೆಚ್ಚಳವಾಗಿದೆ ಎಂದು ಹೆಚ್​ಡಿಎಫ್​ಸಿ ಸೆಕ್ಯೂರಿಟೀಸ್ ತಿಳಿಸಿದೆ.

ಹಿಂದಿನ ವಹಿವಾಟಿನಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 64,877 ರೂ.ಗಳಿಂದ 68,492 ರೂ.ಗೆ ಏರಿದೆ. ಹಿಂದಿನ ವಹಿವಾಟಿನಲ್ಲಿ ಚಿನ್ನವು 10 ಗ್ರಾಂ.ಗೆ 51,765 ರೂ.ಯಲ್ಲಿ ವಹಿವಾಟು ನಡೆಸುತ್ತಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,946 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 27.38 ಡಾಲರ್‌ಗಳಷ್ಟಿದೆ.

ಆರ್ಥಿಕ ಬೆಳವಣಿಗೆಯ ಆಶಾವಾದದ ಒತ್ತಡದಲ್ಲಿ ಚಿನ್ನದ ಬೆಲೆಗಳು ವಹಿವಾಟು ನಡೆಸುತ್ತಿವೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.

ಅಮೆರಿಕನ್​ ಡಾಲರ್ ಹಿಂದಿನ ವಹಿವಾಟಿನಲ್ಲಿ ದುರ್ಬಲವಾಯಿತು. ಈ ನಂತರ ಚಿನ್ನದ ಬೆಲೆಗಳು ಸ್ಥಿರವಾದವು. ಹೂಡಿಕೆದಾರರು ಫೆಡ್ ಮುಖ್ಯಸ್ಥ ಜೆರೋಮ್ ಪೊವೆಲ್ ಅವರ ಭಾಷಣದ ಬಳಿಕ ಏನಾದರು ಘೋಷಿಸಬಹುದೆಂದು ಎದುರು ನೋಡುತ್ತಿದ್ದಾರೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್​ನ ವಿ.ಪಿ. ಕಮೊಡಿಟೀಸ್ ರಿಸರ್ಚ್ ನವನೀತ್ ದಮಾನಿ ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.