ಮುಂಬೈ: ಜಾಗತಿಕ ಆರ್ಥಿಕ ಮಿಶ್ರ ಪ್ರತಿಕ್ರಿಯೆಯಿಂದಾಗಿ ಭಾರತೀಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಧಾರಣೆಯಲ್ಲಿ ಇಳಿಕೆ ದಾಖಲಾಗಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್), ಅಕ್ಟೋಬರ್ ತಿಂಗಳ ಚಿನ್ನದ ಬೆಲೆಯ ಮುನ್ಸೂಚನೆಯು ಶೇ 0.40ರಷ್ಟು ಇಳಿಕೆ ಆಗಲಿದೆ ಎಂಬ ಸುಳಿವು ನೀಡಿದ ಬಳಿಕ, ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ ₹ 1,000 ಇಳಿಕೆಯಾಗಿದೆ. ಕಳೆದ ವಾರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದ ಚಿನ್ನ, ಇಂದು ₹ 38,747 ದರದಲ್ಲಿ ಮಾರಾಟ ಆಗುತ್ತಿದೆ.
ಎಂಸಿಎಕ್ಸ್, ಬೆಳ್ಳಿಯ ಅಕ್ಟೋಬರ್ ತಿಂಗಳ ಬೆಲೆಯು ಶೇ 1.3ರಷ್ಟು ಕುಸಿಯಲಿದೆ ಎಂದಿದೆ. ಹೀಗಾಗಿ, ಪ್ರತಿ ಕೆಜೆ ಬೆಳ್ಳಿಯಲ್ಲಿ ₹2,500 ಇಳಿಕೆಯಾಗಿ ₹ 48,815ರಲ್ಲಿ ಮಾರಾಟ ಆಗುತ್ತಿದೆ. ಇತ್ತೀಚೆಗೆ ಬೆಳ್ಳಿ ಕೂಡ ಸಾರ್ವಕಾಲಿಕ ಗರಿಷ್ಠ ₹ 51,489ರಲ್ಲಿ ವಹಿವಾಟು ನಡೆಸಿತ್ತು. ಪ್ರಪಂಚದಾದ್ಯಂತ ಹೂಡಿಕೆದಾರರಲ್ಲಿ ಕಂಡುಬಂದಿದ್ದ ಸುಧಾರಿತ ಅಪಾಯದ ಮನೋಭಾವನೆ ಮತ್ತು ಇತ್ತೀಚಿಗೆ ಡಾಲರ್ ಎದುರು ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸಿದ ಭಾರತೀಯ ಕರೆನ್ಸಿ ಮೌಲ್ಯವು ಚಿನ್ನದ ಬೆಲೆ ಏರಿಕೆಯ ಒತ್ತಡಕ್ಕೆ ಕಾರಣವಾಗಿತ್ತು. ಇದರ ಪ್ರಭಾವ ತಗ್ಗಿದ್ದರಿಂದ ಲೋಹದ ದರ ಕೆಳಮುಖವಾಗಿ ಸಾಗುತ್ತಿದೆ.