ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಳಿಕೆಯ ನಡೆಯನ್ನು ಅನುಸರಿಸಿದ ದೇಶಿ ಹಳದಿ ಲೋಹದ ಮಾರುಕಟ್ಟೆಯ ಬೆಲೆಗಳು ಸತತ ಇಳಿಕೆಯತ್ತ ಮುಖಮಾಡಿವೆ.
ಜಾಗತಿಕ ಬೆಲೆಗಳ ಕುಸಿತದ ನಂತರ ಚಿನ್ನದ ಬೆಲೆಗಳು ಗುರುವಾರದಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ 774 ರೂ. ಇಳಿಕೆಯಾಗಿ 51,755 ರೂ.ಗೆ ಕುಸಿದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 52,529 ರೂ.ನಲ್ಲಿ ವಹಿವಾಟು ನಡೆಸಿತ್ತು.
ಬೆಳ್ಳಿಯ ಬೆಲೆಯಲ್ಲಿಯೂ ಪ್ರತಿ ಕಿಲೋಗ್ರಾಂ ಮೇಲೆ 1,908 ರೂ. ಕ್ಷೀಣಿಸಿ 69,176 ರೂ.ಗೆ ತಲುಪಿದೆ. ಈ ಹಿಂದಿನ ವಹಿವಾಟಿನಲ್ಲಿ 71,084 ರೂ.ಗಳಲ್ಲಿ ಮಾರಾಟ ಆಗಿತ್ತು.
ಕೊನೆಯ ಮೂರು ಸೇಷನ್ಗಳ ವಹಿವಾಟಿನಲ್ಲಿ 10 ಗ್ರಾಂ. ಚಿನ್ನದಲ್ಲಿ 1,806 ರೂ. ಇಳಿಕೆ ಆಗಿದ್ದರೇ ಕೆ.ಜಿ. ಬೆಳ್ಳಿಯೂ ಎರಡು ಸೇಷನ್ಗಳಲ್ಲಿ 3,707 ರೂ.ನಷ್ಟು ಕುಸಿದು 70 ಸಾವಿರ ಗಡಿಯಿಂದ ಕೆಳಗೆ ಬಂದಿದೆ.
ದೆಹಲಿಯಲ್ಲಿ 24 ಕ್ಯಾರೆಟ್‌ಗಳ ಸ್ಪಾಟ್ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಬೆಲೆಗಳ ಕುಸಿತದೊಂದಿಗೆ 774 ರೂ.ಗೆ ಕುಸಿದಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್ನ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಚಿನ್ನು 1,934 ಡಾಲರ್‌ಗೂ ಕಡಿಮೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 27.24 ಡಾಲರ್‌ಗಳಷ್ಟಾಗಿದೆ.
ಚಿನ್ನದ ಬೆಲೆಗಳು ಪ್ರಮುಖ ಕರೆನ್ಸಿಗಳ ವಿರುದ್ಧ ಬಲವಾದ ಡಾಲರ್ ಚೇತರಿಕೆಯ ಕುಸಿತವನ್ನು ಮುಂದುವರೆಸಿದೆ ಎಂದು ಪಟೇಲ್ ಹೇಳಿದರು.
ಸಕಾರಾತ್ಮಕ ಅಮೆರಿಕದ ಆರ್ಥಿಕ ಮಾಹಿತಿಯು ಅಪಾಯಕಾರಿ ಆಸ್ತಿಗಳ ಬಗ್ಗೆ ಹೂಡಿಕೆದಾರರ ಮನೋಭಾವ ಹೆಚ್ಚಿಸಿದೆ ಎಂದರು.