ಹೈದರಾಬಾದ್: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಚಿನ್ನಾಭರಣ ಬೆಲೆಯಲ್ಲಿ ಇಂದು ದಿಢೀರ್ ಇಳಿಕೆ ಕಂಡು ಬಂದಿದೆ. 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂ.ಗೆ 300 ರೂ ಕಡಿಮೆ ಯಾಗಿದೆ.
ಬೆಂಗಳೂರು, ಹೈದರಾಬಾದ್, ಕೇರಳ ಹಾಗೂ ವಿಶಾಖಪಟ್ಟಣಂ ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂ ಇಳಿಕೆಯಾಗಿದೆ. ಈ ಮೂಲಕ, 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 44 ಸಾವಿರ ರೂ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 48,000 ರೂ ಆಗಿದೆ.
ಬೆಳ್ಳಿ ಬೆಲೆಯಲ್ಲೂ 155 ರೂ ಕಡಿಮೆಯಾಗಿದೆ. ಸದ್ಯ 1 ಕೆ.ಜಿ ಬೆಳ್ಳಿ ಬೆಲೆ 61,232 ರೂ ಇದೆ.
ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಹೀಗಿದೆ..
- ಚೆನ್ನೈ: ₹44,300 (22 ಕ್ಯಾರಟ್) ₹48,330 (24 ಕ್ಯಾರಟ್)
- ನವದೆಹಲಿ: ₹46,150 (22 ಕ್ಯಾರಟ್), ₹50,350 (24 ಕ್ಯಾರಟ್)
- ಹೈದರಾಬಾದ್: ₹43,400 (22 ಕ್ಯಾರಟ್) ₹47,350 (24 ಕ್ಯಾರಟ್)
- ಕೋಲ್ಕತಾ: ₹46,300 (22 ಕ್ಯಾರಟ್), ₹49,000 (24 ಕ್ಯಾರಟ್)
- ಮಂಗಳೂರು: ₹43,400 (22 ಕ್ಯಾರಟ್) ₹47,350 (24 ಕ್ಯಾರಟ್)
- ಮುಂಬಯಿ: ₹45,780(22 ಕ್ಯಾರಟ್), ₹46,780 (24 ಕ್ಯಾರಟ್
- ನಾಗ್ಪುರ :₹ 45,780(22 ಕ್ಯಾರೆಟ್)
- ಅಹಮದಾಬಾದ್: ₹ 45,480 ರೂ. (22 ಕ್ಯಾರೆಟ್)
ಬರುವ ತಿಂಗಳಲ್ಲಿ ಹಬ್ಬಗಳು ಬರುತ್ತಿರುವ ಕಾರಣ ಆಭರಣಗಳ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿರುವುದು ಚಿನ್ನಾಭರಣ ಪ್ರೀಯರಿಗೆ ಖುಷಿ ತಂದಿದೆ.