ಮುಂಬೈ: ದೇಶದ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಒಂದು ತಿಂಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ ನಿನ್ನೆ 20 ಪೈಸೆ ಇಳಿಕೆ ಮಾಡಲಾಗಿತ್ತು. ಇಂದು ಯಥಾಸ್ಥಿತಿ ಇದೆ.
ದೇಶದಲ್ಲಿ ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ಪರಿಷ್ಕರಣೆ ಮಾಡಲಾಗುತ್ತದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆಗಳು ಏರಿಳಿತವಾದರೆ ಕೆಲವೇ ನಿಮಿಷಗಳಲ್ಲಿ ಅದು ದೇಶದ ತೈಲ ಬಳಕೆ ದಾರರು ಹಾಗೂ ಡೀಲರ್‌ಗಳ ಮೇಲೆ ಪರಿಣಾಮ ಬೀರುತ್ತದೆ.
ಈ ಬೆಲೆಯಲ್ಲಿ ಎಕ್ಸೈಸ್ ಸುಂಕ, ವ್ಯಾಟ್ ಹಾಗೂ ಡೀಲರ್‌ಗಳ ಕಮಿಷನ್ ಸೇರಿರುತ್ತದೆ. ವ್ಯಾಟ್ ದರ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರುತ್ತದೆ.
ಡಾಲರ್ ಎದುರು ರೂಪಾಯಿ ಮೌಲ್ಯ, ಕಚ್ಚಾ ತೈಲದ ಬೆಲೆ, ಜಾಗತಿಕ ಮಟ್ಟದಲ್ಲಿ ತೈಲಕ್ಕೆ ಬೇಡಿಕೆ ಸೇರಿದಂತೆ ಹಲವು ಕಾರಣಗಳಿಂದ ದೇಶದ ತೈಲ ಬೆಲೆಯಲ್ಲಿ ಏರಿಳಿತಗಳು ಆಗುತ್ತದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಹೆಚ್ಚಾದರೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲೂ ಹೆಚ್ಚಳವಾಗುತ್ತದೆ.
- ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 101.64 ರೂಪಾಯಿ ಇದ್ದರೆ, ಡೀಸೆಲ್ 89.07 ರೂಪಾಯಿ ಇದೆ.
- ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 105.13 ರೂಪಾಯಿಗೆ ಮಾರಾಟವಾದರೆ, ಡೀಸೆಲ್ ಲೀಟರ್‌ಗೆ 94.49 ರೂಪಾಯಿ ಇದೆ.