ETV Bharat / business

ಮತ್ತೆ ಬಂತು ಫ್ಲಿಪ್​ಕಾರ್ಟ್​ನ 'ದಿ ಬಿಗ್​ ಬಿಲಿಯನ್​ ಡೇಸ್​'.. ಗ್ರಾಹಕರಿಗೆ ಏನೆಲ್ಲ ಆಫರ್​, ಯಾವತ್ತು ಸಿಗಲಿವೆ?

ಮೊಬೈಲ್, ಟಿವಿ ಮತ್ತು ಅಪ್ಲೈನ್ಸ್​, ಎಲೆಕ್ಟ್ರಾನಿಕ್ಸ್ ಅಂಡ್​ ಪರಿಕರಗಳು, ಫ್ಯಾಷನ್, ಸೌಂದರ್ಯ ವರ್ಧಕಗಳು, ಆಹಾರ ಸಾಮಗ್ರಿ, ಆಟಿಕೆ, ಬೇಬಿ ಕೇರ್​, ಹೋಮ್​ ಅಂಡ್ ಕಿಚನ್​ ನೀಡ್ಸ್​, ಪೀಠೋಪಕರಣ, ದಿನಸಿ, ಫ್ಲಿಪ್‌ಕಾರ್ಟ್‌ನ ಖಾಸಗಿ ಬ್ರಾಂಡ್‌ಗಳಂತಹ ಉತ್ಪನ್ನಗಳು, ನೇಕಾರರ, ಕರಕುಶಲರು ತಯಾರಿಸಿದ ಸಾಮಗ್ರಿಗಳು ಮಾರಾಟಕ್ಕಿರಲಿವೆ..

Flipkart
ಫ್ಲಿಪ್​ಕಾರ್ಟ್​
author img

By

Published : Oct 3, 2020, 3:35 PM IST

ಬೆಂಗಳೂರು : ಇ-ಕಾಮರ್ಸ್​ ದೈತ್ಯ ಫ್ಲಿಪ್​ಕಾರ್ಟ್​ ಕಂಪನಿಯು ಸಾಲು-ಸಾಲು ಹಬ್ಬಗಳ ಸೀಸನ್​ಗೂ ಮುನ್ನವೇ ತನ್ನ ಗ್ರಾಹಕರಿಗೆ 'ದಿ ಬಿಗ್​ ಬಿಲಿಯನ್ ಡೇಸ್​' (ಟಿಬಿಬಿಡಿ) ಮಾರಾಟದ ಕೊಡುಗೆ ಘೋಷಿಸಿದೆ.

ಹಬ್ಬದ ಋತು ಪ್ರಾರಂಭಿಸಿದ ಫ್ಲಿಪ್‌ಕಾರ್ಟ್ ಶನಿವಾರ ತನ್ನ ಪ್ರಮುಖ, ಆರು ದಿನಗಳ 'ದಿ ಬಿಗ್ ಬಿಲಿಯನ್ ಡೇಸ್' ಮಾರಾಟವನ್ನು ಅಕ್ಟೋಬರ್ 16ರಿಂದ 21ರವರೆಗೆ ಪ್ರಾರಂಭಿಸಲಿದೆ. ಫ್ಲಿಪ್ಕಾರ್ಟ್ ಪ್ಲಸ್ ಗ್ರಾಹಕರು ಅಕ್ಟೋಬರ್ 15ರಂದು ಮಾರಾಟಕ್ಕೆ ಆರಂಭಿಕ ಪ್ರವೇಶ ಪಡೆಯಬಹುದು.

850 ನಗರಗಳಲ್ಲಿ ಗ್ರಾಹಕರಿಗೆ ಹಬ್ಬದ ಮೆರಗು ತರಲು ಇಕಾಮರ್ಸ್ ಮಾರುಕಟ್ಟೆಯು 50,000ಕ್ಕೂ ಹೆಚ್ಚು ಕಿರಾಣಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆರು ದಿನಗಳ ಮಾರಾಟದ ಸಮಯದಲ್ಲಿ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ.10ರಷ್ಟು ತ್ವರಿತ ರಿಯಾಯಿತಿ ನೀಡುತ್ತದೆ.

ಇದಲ್ಲದೆ, ಬಜಾಜ್ ಫಿನ್‌ಸರ್ವ್ ಇಎಂಐ ಕಾರು ಮತ್ತು ಇತರ ಪ್ರಮುಖ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಕೊಡುಗೆಗಳ ಮೂಲಕ ಯಾವುದೇ ವೆಚ್ಚವಿಲ್ಲದ ಇಎಂಐಗಳನ್ನು ಗ್ರಾಹಕರಿಗೆ ಲಭ್ಯವಾಗುವಂತೆ ನೀಡಲಿದೆ. ಪೇಟಿಎಂ ವ್ಯಾಲೆಟ್​ ಮತ್ತು ಪೇಟಿಎಂ ಯುಪಿಐ ಮೂಲಕ ಪಾವತಿಸುವ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ನೀಡಲು ಫ್ಲಿಪ್‌ಕಾರ್ಟ್ ಸಹ ಪೇಟಿಎಂ ಜತೆ ಪಾಲುದಾರಿಕೆ ಹೊಂದಿದೆ.

ಮೊಬೈಲ್, ಟಿವಿ ಮತ್ತು ಅಪ್ಲೈನ್ಸ್​, ಎಲೆಕ್ಟ್ರಾನಿಕ್ಸ್ ಅಂಡ್​ ಪರಿಕರಗಳು, ಫ್ಯಾಷನ್, ಸೌಂದರ್ಯ ವರ್ಧಕಗಳು, ಆಹಾರ ಸಾಮಗ್ರಿ, ಆಟಿಕೆ, ಬೇಬಿ ಕೇರ್​, ಹೋಮ್​ ಅಂಡ್ ಕಿಚನ್​ ನೀಡ್ಸ್​, ಪೀಠೋಪಕರಣ, ದಿನಸಿ, ಫ್ಲಿಪ್‌ಕಾರ್ಟ್‌ನ ಖಾಸಗಿ ಬ್ರಾಂಡ್‌ಗಳಂತಹ ಉತ್ಪನ್ನಗಳು, ನೇಕಾರರ, ಕರಕುಶಲರು ತಯಾರಿಸಿದ ಸಾಮಗ್ರಿಗಳು ಮಾರಾಟಕ್ಕಿರಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.