ETV Bharat / business

ಕ್ರಿಪ್ಟೋಕರೆನ್ಸಿ ವ್ಯವಹಾರ ಉತ್ತೇಜನಕ್ಕೆ ಎಫ್​ಬಿ ಪ್ಲಾನ್​.. ಸ್ವಂತ ಕರೆನ್ಸಿ ಪರಿಚಯಿಸಿದ ದಿಗ್ಗಜ ಸಂಸ್ಥೆ! - ಎಫ್​ಬಿ

ಪ್ರಸ್ತುತ 28 ಕಂಪನಿಗಳು ಫೇಸ್​ಬುಕ್​ನ ಹೊಸ ಯೋಜನೆಗೆ ಕೈಜೋಡಿಸಿದ್ದು ಲಿಬ್ರಾ ನಾಣ್ಯ ಮುಂದಿನ ವರ್ಷ ಲಾಂಚ್​ ಆಗಲಿದೆ. ಆ ವೇಳೆಗೆ ನೂರು ಪಾಲುದಾರರನ್ನು ಹೊಂದುವ ನಿರೀಕ್ಷೆಯಲ್ಲಿದೆ.

ಕ್ರಿಪ್ಟೋಕರೆನ್ಸಿ
author img

By

Published : Jun 18, 2019, 10:58 PM IST

Updated : Jun 18, 2019, 11:04 PM IST

ವಾಷಿಂಗ್ಟನ್​: ಸರ್ಕಾರಿ ಮತ್ತು ಹಣಕಾಸು ಸಂಸ್ಥೆಗಳ ಅನುಮೋದನೆಯೊಂದಿಗೆ, ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಮುನ್ನೆಲೆಗೆ ತರಲು ದೈತ್ಯ ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್​ಬುಕ್​​ ಯೋಜಿಸಿದೆ.

ಕ್ರಿಪ್ಟೋಕರೆನ್ಸಿ ವ್ಯವಹಾರ ಉತ್ತೇಜನಕ್ಕೆ ಫೇಸ್​ಬುಕ್​​, ಲಿಬ್ರಾ ಎಂಬ ವ್ಯವಸ್ಥೆಯನ್ನು ಅನಾವರಣಗೊಳಿಸಿದೆ. ಜಿನೇವಾ ಮೂಲದ ಲಿಬ್ರಾ ಅಸೋಸಿಯೇಷನ್​​​​ ಜೊತೆಗೆ ಈಗಾಗಲೇ 28 ಸಂಸ್ಥೆಗಳು ಕೈಜೋಡಿಸಿದೆ. ವೀಸಾ, ಮಾಸ್ಟರ್ ಕಾರ್ಡ್, ಸ್ಪಾಟಿಫೈ, ಉಬರ್​, ಇಬೇ​​, ಪೇಪಾಲ್ ಸೇರಿದಂತೆ ಹಲವಾರು ಕಂಪೆನಿಗಳು ಫೇಸ್​ಬುಕ್​​ನ ಈ ನೂತನ ಯೋಜನೆಗೆ ಬೆಂಬಲ ಸೂಚಿಸಿವೆ.

ಪ್ರಸ್ತುತ 28 ಕಂಪೆನಿಗಳು ಫೇಸ್​ಬುಕ್​ನ ಹೊಸ ಯೋಜನೆಗೆ ಕೈಜೋಡಿಸಿದ್ದು ಲಿಬ್ರಾ ನಾಣ್ಯ ಮುಂದಿನ ವರ್ಷ ಲಾಂಚ್​ ಆಗಲಿದ್ದು, ಆ ವೇಳೆಗೆ ನೂರು ಪಾಲುದಾರರನ್ನು ಹೊಂದುವ ನಿರೀಕ್ಷೆಯಲ್ಲಿದೆ.

Libra
ಫೇಸ್​ಬುಕ್ ನೂತನ ಯೋಜನೆಗೆ ಕೈಜೋಡಿಸಿರುವ ಸಂಸ್ಥೆಗಳು

ಲಿಬ್ರಾ ಅಸೋಸಿಯೇಷನ್​ ಜೊತೆಗೆ ಪಾಲುದಾರಿಕೆ ಹೊಂದುವ ಪ್ರತಿಯೊಂದು ಕಂಪನಿಯೂ ಯೋಜನೆಯ ಆರಂಭಿಕ ಹಂತದಲ್ಲಿ ಹತ್ತು ಮಿಲಿಯನ್ ಅಮೆರಿಕನ್ ಡಾಲರ್​ ಹೂಡಿಕೆ ಮಾಡಲಿದೆ. ಲಿಬ್ರಾ ಕರೆನ್ಸಿ ಜೊತೆಗೆ ಡಾಲರ್​​​, ಯುರೋ, ಪೌಂಡ್​ನಂತಹ ಸಾಮಾನ್ಯ ಕರೆನ್ಸಿ ಜೊತೆಗಿನ ವಿನಿಮಯದಲ್ಲಿ ಪ್ರಸ್ತುತ ಯಾವುದೇ ನಿರ್ದಿಷ್ಟ ದರವನ್ನು ನಿಗದಿ ಮಾಡಲಾಗಿಲ್ಲ.

ಏನಿದು ಲಿಬ್ರಾ ನಾಣ್ಯ..?

ಪೇಸ್​ಬುಕ್​ ಸದ್ಯ ತನ್ನದೇ ಆದ ಲಿಬ್ರಾ ನಾಣ್ಯವನ್ನು ಪರಿಚಯಿಸುವ ಮೂಲಕ ತನ್ನ ಬಳಿ ಇರುವ 1.7 ಬಿಲಿಯನ್​​ ಹಿಂಬಾಲಕರು ಯಾವುದೇ ಬ್ಯಾಂಕ್ ಖಾತೆಯ ಅಗತ್ಯವಿಲ್ಲದೆ ಹಣಕಾಸು ವ್ಯವಹಾರ ಮಾಡುವಂತೆ ಪ್ರೇರಣೆ ನೀಡಲಿದೆ.

Intro:Body:Conclusion:
Last Updated : Jun 18, 2019, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.