ನವದೆಹಲಿ: ಜನವರಿ ಮಾಸಿಕದಲ್ಲಿ ದೇಶಿಯ ವಾಹನ ಮಾರಾಟವು ಶೇ. 6.2ರಷ್ಟು ಕುಸಿತವಾಗಿದೆ ಎಂದು ಭಾರತೀಯ ವಾಹನ ಮಾರಾಟ ಸಂಘಟನೆ (ಸಿಯಾಮ್) ತಿಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 2,80,091 ವಾಹನಗಳು ಮಾರಾಟ ಆಗಿದ್ದರೇ ಈ ವರ್ಷ ಅವುಗಳ ಮಾರಾಟದ ಪ್ರಮಾಣ 262,714 ಯೂನಿಟ್ಗೆ ತಲುಪಿದೆ ಎಂದು ಹೇಳಿದೆ.
ಕಾರುಗಳ ಮಾರಾಟದಲ್ಲಿ ಸಹ ಇಳಿಕೆ ಕಂಡು ಬಂದಿದೆ. ಶೇ 8.1ರಷ್ಟು ಬೆಳವಣಿಗೆ ಕ್ಷೀಣಿಸಿದೆ. ಕಳೆದ ವರ್ಷ ಜನವರಿ ತಿಂಗಳಲ್ಲಿ 1,79,324 ಯೂನಿಟ್ಗಳು ಮಾರಾಟ ಆಗಿದ್ದರೇ 1,64,793 ಯೂನಿಟ್ಗಳು 2020 ಜನವರಿಯಲ್ಲಿ ಮಾರಾಟ ಕಂಡಿವೆ ಎಂದು ಸಿಯಾಮ್ ಇತ್ತೀಚಿನ ದತ್ತಾಂಶಗಳ ಮೂಲಕ ತಿಳಿಸಿದೆ.
ಮೋಟಾರ್ ಸೈಕಲ್ ಬೆಳವಣಿಗೆ ದರ ಸಹ ಶೇ. 15.17ರಷ್ಟು ಇಳಿಕೆ ಕಂಡಿದೆ. 8,71,886 ವಾಹನಗಳು ಮಾರಾಟ ಆಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 10,27,766 ವಾಹನಗಳು ಮಾರಾಟ ಆಗಿದ್ದವು. ದ್ವಿಚಕ್ರ ವಾಹನ ಮಾರಾಟವು ಶೇ. 16.06ರಷ್ಟು ಕ್ಷೀಣಿಸಿದೆ. ಈ ಹಿಂದಿನ ವರ್ಷದಲ್ಲಿ 15,97,528 ಯೂನಿಟ್ಗಳಿಗೆ ಪ್ರತಿಯಾಗಿ 13,41,005 ವಾಹನಗಳು ಮಾರಾಟ ಆಗಿವೆ ಎಂದಿದೆ.
ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ. 14.04ರಷ್ಟು ಕುಸಿತ ಕಂಡು ಬಂದಿದೆ. 75,289 ಯೂನಿಟ್ಗಳು ಮಾರಾಟ ಆಗಿವೆ ಎಂದು ಸಿಯಾಮ್ ತಿಳಿಸಿದೆ.