ನವದೆಹಲಿ: ಜಾಗತಿಕ ಆರ್ಥಿಕ ಕುಸಿತ ಹಾಗೂ ಅಗತ್ಯಕ್ಕಿಂತ ಹೆಚ್ಚುವರಿ ಕಚ್ಚಾ ತೈಲ ಉತ್ಪಾದನೆ ಸೇರಿದಂತೆ ಇತರ ಕಾರಣಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕೊಂಚ ಕುಸಿದಿದೆ.
ಸಾಗರೋತ್ತರ ಇಂಧನ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲ ದರದಲ್ಲಿ 9 ರೂ. ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್ ₹ 4,268ರಲ್ಲಿ ವಹಿವಾಟು ನಡೆಯುತ್ತಿದೆ.
ಬ್ರೆಂಟ್ ಕಚ್ಚಾ ತೈಲವು ಕಳೆದ ಆರು ತಿಂಗಳಲ್ಲಿ ಅತ್ಯಧಿಕ ಬೆಲೆ ಏರಿಕೆ ಕಂಡಿದ್ದು (ಬ್ಯಾರೆಲ್‌ಗೆ 75.60 ಡಾಲರ್) ಇಂದು ಪ್ರತಿ ಬ್ಯಾರೆಲ್‌ಗೆ 70.29 ಡಾಲರ್ನಲ್ಲಿ ವಹಿವಾಟು ನಡೆಸಿತು. ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಶೇ 0.65ರಷ್ಟು ಇಳಿಕೆ ಕಂಡಿದೆ.
ಬಹು ಸರಕು ವಿನಿಮಯ ಒಪ್ಪಂದದ ಮೇಲೆ ಮೇ ಮಾಸಿಕದಲ್ಲಿ ಕಚ್ಚಾ ತೈಲವನ್ನು ₹ 9 ಅಥವಾ ಶೇ 0.21 ಕಡಿಮೆ ದರದಲ್ಲಿ ವಿತರಿಸಲಾಗಿದೆ. ಒಟ್ಟು 20,606 ಬ್ಯಾರೆಲ್ಗಳು ₹ 4,268ಕ್ಕೆ ಮಾರಾಟವಾಗಿವೆ.