ETV Bharat / business

ಹಣಕಾಸು ಸಚಿವರ ಕ್ರಮ:  ಭಾರತದಲ್ಲಿ ಅವಧಿಗೂ ಮೊದಲೇ ಬಂತು ದೀಪಾವಳಿ!

ದೇಶೀಯ ಕಂಪನಿಗಳು ಮತ್ತು ಹೊಸ ದೇಶೀಯ ಉತ್ಪಾದನಾ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಲಾಗಿದೆ. ಈ ಮೂಲಕ ಸೊರಗುತ್ತಿರುವ ಆರ್ಥಿಕತೆ ಮೇಲೆತ್ತಲು ಹಣಕಾಸು ಸಚಿವರು ನಿರ್ಧರಿಸಿದ್ದಾರೆ.

ನಿರ್ಮಲಾ ಸೀತಾರಾಮನ್
author img

By

Published : Sep 20, 2019, 1:36 PM IST

Updated : Sep 20, 2019, 1:41 PM IST

ಮುಂಬೈ: ದೇಶೀಯ ಕಂಪನಿಗಳಿಗೆ ಎಲ್ಲ ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಂತೆ ಕೇಂದ್ರವು ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 25.17ಕ್ಕೆ ಇಳಿಸಿದ ನಂತರ ಭಾರತಕ್ಕೆ ದೀಪಾವಳಿ ಹಬ್ಬ ಮುಂಚಿತವಾಗಿಯೇ ಬಂದಂತಾಗಿದೆ.

  • Finance Minister Nirmala Sitharaman: The effective tax rate for these companies shall be 25.17 % inclusive of all surcharge and cess. https://t.co/nFJoh5ypch

    — ANI (@ANI) September 20, 2019 ." class="align-text-top noRightClick twitterSection" data=" ."> .

ಏಪ್ರಿಲ್ 1 ರಿಂದ ಪ್ರಾರಂಭವಾಗುವ ಪ್ರಸಕ್ತ ಹಣಕಾಸು ವರ್ಷದಿಂದ ಹೊಸ ತೆರಿಗೆ ದರ ಅನ್ವಯವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ ವಾರ್ಷಿಕವಾಗಿ 1.45 ಲಕ್ಷ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.

ಈ ಕ್ರಮವು ಭಾರತದ ತೆರಿಗೆ ದರವನ್ನು ಏಷ್ಯಾದ ಇತರ ರಾಷ್ಟ್ರಗಳಿಗೆ ಸಮನಾಗಿರುತ್ತದೆ. ಅಲ್ಲದೇ ಅಮೆರಿಕ - ಚೀನಾ ವ್ಯಾಪಾರ ಯುದ್ಧದಿಂದ ಪೂರೈಕೆಗಿರುವ ಅಡೆತಡೆಗಳನ್ನು ನಿವಾರಿಸಲು ಕಂಪನಿಗಳು ಪರ್ಯಾಯ ಸ್ಥಳವನ್ನ ಹುಡುಕುತ್ತಿರುವುದರಿಂದ ಹೂಡಿಕೆಗಳನ್ನ ಆಕರ್ಷಿಸುವ ಪ್ರಯತ್ನಗಳನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸರ್ಕಾರದ ಪ್ರಕಟಣೆಯನ್ನು ಸ್ವಾಗತಿಸಿದ್ದು, ಇದನ್ನು 'ದಿಟ್ಟ ನಡೆ' ಎಂದು ಕರೆದಿದ್ದಾರೆ. ದೇಶೀಯ ಹೂಡಿಕೆದಾರರ ಸಂಪತ್ತು 2.11 ಲಕ್ಷ ಕೋಟಿ ರೂಪಾಯಿ ತಲುಪಿದೆ ಎಂದಿದ್ದಾರೆ.

ಇನ್ನು ಹಣಕಾಸು ಸಚಿವರ ನಿರ್ಧಾರದಿಂದ ಷೇರು ಪೇಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಬಿಎಸ್​ಇ ಸೆನ್ಸೆಕ್ಸ್ ಸೆನ್ಸೆಕ್ಸ್ 1837.52 ಅಂಕಗಳ ಏರಿಕೆ ಕಂಡಿದ್ದು, 37,913.34 ಅಂಕಕ್ಕೆ ತಲುಪಿದೆ. ನಿಫ್ಟಿ ಕೂಡ 500 ಅಂಕಗಳ ಹೆಚ್ಚಳ ದಾಖಲಿಸಿತ್ತು.

Intro:Body:Conclusion:
Last Updated : Sep 20, 2019, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.