ನವದೆಹಲಿ: ಸಾಲು ಸಾಲು ಹಬ್ಬದ ಋತುವಿಗೂ ಮುಂಚೆಯೇ ಭಾರತದಲ್ಲಿನ ವಾಹನ ತಯಾರಕರು ಪ್ರಯಾಣಿಕ ಕಾರುಗಳ ಮೇಲೆ ವಿಶೇಷ ರಿಯಾಯಿತಿ ಹಾಗೂ ಕೊಡುಗೆಗಳನ್ನು ಘೋಷಿಸಿದ್ದಾರೆ.
ದೇಶಾದ್ಯಂತ ಕಾರು ವಿತರಕರು ನಗದು ರಿಯಾಯಿತಿ, ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು ಇತರ ವಿಶೇಷ ಯೋಜನೆಗಳನ್ನು ಒಳಗೊಂಡಿರುವ ಹೆಚ್ಚಿನ ಮಾದರಿಗಳಲ್ಲಿ ಪ್ರಯೋಜನಗಳನ್ನು ನೀಡುತ್ತಿದ್ದಾರೆ.
ಮಾರುತಿ ಸುಜುಕಿ
ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ವ್ಯಾಗನ್ ಆರ್, ಸ್ವಿಫ್ಟ್, ಬ್ರೆಝಾ, ಬಲೆನೊ, ಸಿಯಾಜ್ ಮತ್ತು ಎಸ್-ಕ್ರಾಸ್ ಸೇರಿದಂತೆ ಆಯ್ದ ಅರೆನಾ ಮತ್ತು ನೆಕ್ಸಾ ಮಾದರಿಗಳಲ್ಲಿ ದೀಪಾವಳಿ-ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಅರೆನಾ ಮಾದರಿಗಳ ಮೇಲಿನ ರಿಯಾಯಿತಿಗಳು ಅಕ್ಟೋಬರ್ 16ರವರೆಗೆ (ಮುಕ್ತಾಯ) ಹಾಗೂ ನೆಕ್ಸಾ ಮಾದರಿಗಳು ಅಕ್ಟೋಬರ್ 20ರವರೆಗೆ ಲಭ್ಯವಿರುತ್ತವೆ.
ಪ್ರಿ-ಫೇಸ್‌ಲಿಫ್ಟ್ ಡಿಜೈರ್ ಮತ್ತು ಎಸ್-ಕ್ರಾಸ್‌ಗೆ 55,000 ರೂ.ಗಳವರೆಗೆ ರಿಯಾಯಿತಿ ಸಿಗುತ್ತದೆ. ಸೆಲೆರಿಯೊ ಮೇಲೆ 53,000 ರೂ. ತನಕ ಸಿಗಲಿದೆ.
ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಾಲೆನೊಗೆ 42,000 ರೂ.ಗಳವರೆಗೆ ಲಾಭ ದೊರೆತರೆ, ಇಗ್ನಿಸ್‌ನ ಮೇಲೆ ಒಟ್ಟು 59,200 ರೂ. ಲಾಭ ಸಿಗಲಿದೆ. ಸಿಯಾಜ್ ಮೇಲೂ ಸಹ 59,200 ರೂ.ಗಳವರೆಗೆ ರಿಯಾಯಿತಿ ಪಡೆಯಬಹುದು. ಆದರೆ ಎಸ್-ಕ್ರಾಸ್ 62,200 ರೂ. ಆಫರ್ ಇದೆ.
ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊ 53,000 ರೂ. ತನಕ ಪ್ರಯೋಜನಗಳೊಂದಿಗೆ ಲಭ್ಯವಿದ್ದರೆ, ಆಲ್ಟೋ 41,000 ರೂ. ರಿಯಾಯಿತಿಯೊಂದಿಗೆ ಪಡೆಯಬಹುದು. ವ್ಯಾಗನ್ ಆರ್ ಮತ್ತು ಸ್ವಿಫ್ಟ್ ಏತನ್ಮಧ್ಯೆ 40,000 ರೂ. ಕೊಡುಗೆ ಸಿಗುತ್ತದೆ.
ಹ್ಯುಂಡೈ ಮೋಟಾರ್ ಕಂಪನಿ
ವೆನ್ಯೂ, ವೆರ್ನಾ, ಕ್ರಿಟಾ, ಟಕ್ಸನ್ ಮತ್ತು ಕೋನಾ ಇವಿ ಹೊರತುಪಡಿಸಿ ತನ್ನ ಉಳಿದ ಮಾದರಿಗಳಲ್ಲಿ 1 ಲಕ್ಷ ರೂ. ತನಕ ಹಣಕಾಸು ಯೋಜನೆ ನೀಡಲಿದೆ. ವೈದ್ಯಕೀಯ ವೃತ್ತಿಪರರು, ಚಾರ್ಟರ್ಡ್ ಅಕೌಂಟೆಂಟ್, ಎಸ್‌ಎಂಇ, ಶಿಕ್ಷಕರು ಮತ್ತು ಆಯ್ದ ಕಾರ್ಪೊರೇಟ್‌ಗಳಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.
ಹಬ್ಬದ ಪ್ರಯೋಜನಗಳನ್ನು ಪಡೆಯುವ ಮಾದರಿಗಳಲ್ಲಿ ಸ್ಯಾಂಟ್ರೊ, ಗ್ರ್ಯಾಂಡ್ ಐ 10, ಗ್ರ್ಯಾಂಡ್ ಐ 10 ನಿಯೋಸ್, ಎಲೈಟ್ ಐ 20, ಔರಾ ಮತ್ತು ಎಲಾಂಟ್ರಾ ಸೆಡಾನ್ ಕೂಡ ಸೇರಿವೆ. ಅಕ್ಟೋಬರ್ 1 ಮತ್ತು ಅಕ್ಟೋಬರ್ 31ರ ನಡುವಿನ ಖರೀದಿಗಳಿಗೆ ಈ ಕೊಡುಗೆ ಮಾನ್ಯವಾಗಿರುತ್ತದೆ.
ಸ್ಯಾಂಟ್ರೊ ಮೇಲೆ 45,000 ರೂ., ಗ್ರ್ಯಾಂಡ್ ಐ 10 ಬಿಎಸ್ 60,000 ರೂ., ಗ್ರ್ಯಾಂಡ್ ಐ 10 ನಿಯೋಸ್ ಬಿಎಸ್ 6- 25,000 ರೂ., ಎಲೈಟ್ ಐ 20 ಸ್ಪೋರ್ಟ್ಜ್- 75,000 ರೂ., ಔರಾ- 30,000 ರೂ ಹಾಗೂ ಎಲಾಂಟ್ರಾ- 1 ಲಕ್ಷ ರೂ. (ಪೆಟ್ರೋಲ್ ಅಥವಾ ಡೀಸೆಲ್) ವರೆಗೆ ರಿಯಾಯಿತಿ ದೊರೆಯುತ್ತದೆ.
ಟಾಟಾ ಮೋಟಾರ್ಸ್
ಟಾಟಾ ಹ್ಯಾರಿಯರ್ ಡಾರ್ಕ್ ಆವೃತ್ತಿ ಮೇಲೆ 40,000 ರೂ. ತನಕ ವಿನಿಮಯ ಬೋನಸ್ ಮತ್ತು 15,000 ರೂ. ಕಾರ್ಪೊರೇಟ್ ರಿಯಾಯಿತಿ ಇದೆ. ಇತರೆ ಮಾಡಲ್ಗಳ ಮೇಳೆ 25 ಸಾವಿರ ರೂ. ನಗದು ರಿಯಾಯಿತಿ ಹಾಗೂ ಟಿಯಾಗೊ 30,000 ರೂ. ಡಿಸ್ಕೌಂಟ್ ನೀಡಲಾಗಿದೆ.
ಟಾಟಾ ನೆಕ್ಸಾನ್‌ನ ಎಲ್ಲಾ ಮಾಡಲ್ಗಳ ಮೇಲಿನ ರಿಯಾಯಿತಿಗಳು 5,000 ರೂ. ಕಾರ್ಪೊರೇಟ್ ರಿಯಾಯಿತಿ ಇದ್ದರೇ ಡೀಸೆಲ್ ಮಾಡಲ್ಗೆ ಹೆಚ್ಚುವರಿ ವಿನಿಮಯ ಬೋನಸ್ 15,000 ರೂ. ಲಭ್ಯವಿದೆ. ಟೈಗರ್ 40,000 ರೂ. ವಿನಾಯಿತಿ ಪಡೆಯಬಹುದು. ಆದರೆ, ಆಲ್ಟ್ರೊಜ್ 10,000 ರೂ. ಕಾರ್ಪೊರೇಟ್ ರಿಯಾಯಿತಿ ಸಿಗುತ್ತದೆ.
ಮಹೀಂದ್ರಾ ಆ್ಯಂಡ್ ಮಹೀಂದ್ರಾ
ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿದ ಸೆಕೆಂಡ್ ಜನರೇಷನ್ ಥಾರ್ ಹೊರತುಪಡಿಸಿ ಎಲ್ಲಾ ಮಾದರಿಗಳಲ್ಲಿ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಗಳು ಅಕ್ಟೋಬರ್ 31ರವರೆಗೆ ಮಾನ್ಯವಾಗಿರುತ್ತವೆ. ಮಹೀಂದ್ರಾ ಅಲ್ತುರಾಸ್ ಜಿ 4 3.06 ಲಕ್ಷ ರೂ. ಎಕ್ಸ್‌ಯುವಿ 500 ರೂಪಾಂತರವನ್ನು ಅವಲಂಬಿಸಿ 56,000 ರೂ. ಏತನ್ಮಧ್ಯೆ, ಎಕ್ಸ್‌ಯುವಿ 300 ಅನ್ನು 30,000 ರೂ.ಗಳವರೆಗೆ ಪಡೆಯಬಹುದು.
ಮಹೀಂದ್ರಾ ಮರಾಝೋ ಮೇಲೆ 31,000 ರೂ. ತನಕ ಆಫರ್ ಮತ್ತು 5,000 ರೂ. ಮೌಲ್ಯದ ಆಕ್ಸಸರಿಸ್ ಕೊಡುಗೆ ಸಿಗಲಿದೆ. ಬೊಲೆರೊ ಮೇಲೆ 20,500 ರೂ.ಗಳವರೆಗೆ ರಿಯಾಯಿತಿ ಇದೆ.
ಟೊಯೋಟಾ ಕಿರ್ಲೋಸ್ಕರ್
ಟೊಯೋಟಾ ಮಾರಾಟಗಾರರು ಕೆಲವು ಮಾದರಿಗಳ ಮೇಲಷ್ಟೆ ರಿಯಾಯಿತಿ ನೀಡುತ್ತಿದ್ದಾರೆ. ಗ್ಲಾಜಾ ಬಿಎಸ್ 6 ವಿ ಮಾಡೆಲ್ ಮೇಲೆ 30,000 ರೂ. ನೀಡಿದ್ದು, ಗ್ಲ್ಯಾನ್ಜಾ ಜಿ ಮಾದರಿಯಲ್ಲಿ ಯಾವುದೇ ಕೊಡುಗೆ ಘೋಷಿಸಿಲ್ಲ.
ಟೊಯೋಟಾ ಯಾರಿಸ್ ಬಿಎಸ್ಗೆ 60,000 ರೂ.ಗಳವರೆಗೆ ಲಾಭದಾಯಕ ಸಿಕ್ಕರೆ ಇನ್ನೋವಾ ಕ್ರಿಸ್ಟಾ ಮೇಲೆ 65,000 ರೂ. ಇದೆ. ಫಾರ್ಚೂನರ್ ಬಿಎಸ್ 6 ಮತ್ತು ನೂತನ ಅರ್ಬನ್ ಕ್ರೂಸರ್ನಲ್ಲಿ ಯಾವುದೇ ಯೋಜನೆ ಇಲ್ಲ.
ಟೊಯೋಟಾ ಮಾಸಿಕ ವೇತನ ಪಡೆಯುವ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಈ ಪ್ರಯೋಜನಗಳನ್ನು ನೀಡುತ್ತದೆ. ಸರ್ಕಾರಿ ನೌಕರರು ಸರ್ಕಾರ ಘೋಷಿಸಿದ ವಿಶೇಷ ಉತ್ಸವದ ಮುಂಗಡದಲ್ಲಿ 10,000 ರೂ. ತನಕ ಬಡ್ಡಿರಹಿತ ಮುಂಗಡ ಪಡೆಯಬಹುದು.