ETV Bharat / business

ಜಿಯೋ-ಫೇಸ್​ಬುಕ್​​ನ ಪ್ರಾಯೋಗಿಕ ವಹಿವಾಟು​ ಶುರು​: ಹೇಗಿರಲಿದೆ ವಾಟ್ಸ್​ಆ್ಯಪ್ ಖರೀದಿ?

author img

By

Published : Apr 29, 2020, 6:43 PM IST

Updated : Apr 29, 2020, 7:11 PM IST

ರಿಲಾಯನ್ಸ್ ಇಂಡಸ್ಟ್ರೀಸ್​ನ ಜಿಯೋ ಲಿಮಿಟೆಡ್​ನಲ್ಲಿ ಫೇಸ್​ಬುಕ್ 43,574 ಕೋಟಿ ರೂ. ಹೂಡಿಕೆ ಮಾಡಿತ್ತು. ಫೇಸ್​ಬುಕ್ ಒಡೆತನದ ವಾಟ್ಸ್​ಆ್ಯಪ್​ ಅಪ್ಲಿಕೇಷನ್​ನಲ್ಲಿ ತನ್ನ ಜಿಯೋಮಾರ್ಟ್​ನ ಇ-ಕಾಮರ್ಸ್ ಸಮರ್ಪಕವಾಗಿ ಬಳಸಿಕೊಳ್ಳಲು ಅಮೆರಿಕದ ದೈತ್ಯ ಕಂಪನಿಯೊಂದಿಗೆ ಹೂಡಿಕೆ ಒಪ್ಪಂದವನ್ನು ರಿಲಾಯನ್ಸ್​ ಮುಖ್ಯಸ್ಥ ಮುಖೇಶ್ ಅಂಬಾನಿ ಮಾಡಿಕೊಂಡಿದ್ದರು.

Indian e-tailers
ಇ-ಕಾಮರ್ಸ್

ನವದೆಹಲಿ: ರಿಲಾಯನ್ಸ್​ ಜಿಯೋ-ಫೇಸ್​ಬುಕ್​ ಒಡಂಬಡಿಕೆಯ 43,574 ಕೋಟಿ ರೂ. ಮಹತ್ವಾಕಾಂಕ್ಷಿಯ ವಾಟ್ಸ್​ಆ್ಯಪ್​ ಆಧಾರಿತ ಜಿಯೋಮಾರ್ಟ್​ ವಹಿವಾಟು ಪ್ರಾಯೋಗಿಕವಾಗಿ ಆರಂಭವಾಗಿದೆ.

ರಿಲಾಯನ್ಸ್ ಇಂಡಸ್ಟ್ರೀಸ್​ನ ಜಿಯೋ ಲಿಮಿಟೆಡ್​ನಲ್ಲಿ ಫೇಸ್​ಬುಕ್ 43,574 ಕೋಟಿ ರೂ. ಹೂಡಿಕೆ ಮಾಡಿತ್ತು. ಫೇಸ್​ಬುಕ್ ಒಡೆತನದ ವಾಟ್ಸ್​ಆ್ಯಪ್​ ಅಪ್ಲಿಕೇಷನ್​ನಲ್ಲಿ ತನ್ನ ಜಿಯೋಮಾರ್ಟ್​ನ ಇ-ಕಾಮರ್ಸ್ ಸಮರ್ಪಕವಾಗಿ ಬಳಸಿಕೊಳ್ಳಲು ಅಮೆರಿಕದ ದೈತ್ಯ ಕಂಪನಿಯೊಂದಿಗೆ ಹೂಡಿಕೆ ಒಪ್ಪಂದವನ್ನು ಮುಖೇಶ್ ಅಂಬಾನಿ ಮಾಡಿಕೊಂಡಿದ್ದರು.

ಕಿರಾಣಿ ಅಂಗಡಿಗಳ ಇ- ಕಾಮರ್ಸ್​ಗೆ ವ್ಯಾಪಾರ ಒಕ್ಕೂಟ ಸಾಥ್

ಭಾರತದ ಇ-ಕಾಮರ್ಸ್ ವಿಶಾಲವಾದ ಮಾರುಕಟ್ಟೆಯಾಗಿದ್ದು, ಡಿಜಿಟಲೀಕರಣಕ್ಕೆ ಅನುಕೂಲಕರವಾದ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಸಾಕಷ್ಟು ಸ್ಪರ್ಧಾತ್ಮಕವಾಗಿರುವ ದೇಶಿ ಇ-ಕಾಮರ್ಸ್​ ವಲಯ, ರಿಲಾಯನ್ಸ್ ಸೇರಿದಂತೆ ಯಾವುದೇ ಸಂಸ್ಥೆಗಳು ಸ್ಥಳೀಯ ಕಾನೂನು, ನಿಯಮ ಮತ್ತು ನಿಬಂಧನೆಗಳ ಅನುಸರಣೆ ಮೂಲಕ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.

ಸ್ಥಳೀಯ ಕಿರಾಣಿ ಮಳಿಗೆಗಳ ಆಧುನೀಕರಣಕ್ಕೆ ನೆರವಾಗುವ ಭಾರತೀಯ ಇ-ಕಾಮರ್ಸ್ ಕಂಪನಿಗಳ ಹಾಗೂ ನಿಯಮ ಮತ್ತು ನಿಬಂಧನೆಗಳನ್ನು ಸಿಎಐಟಿ ಬೆಂಬಲಿಸಲಿದೆ. ದೇಶದ 7 ಕೋಟಿ ವ್ಯಾಪಾರಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಒಕ್ಕೂಟಕ್ಕೆ, ಫೇಸ್​ಬುಕ್-ರಿಲಾಯನ್ಸ್ ಒಪ್ಪಂದ ಕುರಿತ ತನ್ನ ನಿಲುವಿನ ಬಗ್ಗೆ ಪಿಟಿಐ ಕಳುಹಿಸಿರುವ ಪ್ರಶ್ನೆಗಳಿಗೆ ಇ-ಮೇಲ್ ಮೂಲಕ ಪ್ರತಿಕ್ರಿಯೆ ನೀಡಿದೆ. 'ಇಲ್ಲಿನ ಮಾನದಂಡಗಳನ್ನು ಅನುಸರಿಸುವ ಯಾವುದೇ ಅಸ್ತಿತ್ವಕ್ಕೆ ಸಾಕಷ್ಟು ಅವಕಾಶಗಳಿವೆ' ಎಂದು ಹೇಳಿದೆ.

ಈ ಹಿಂದೆ ಅಮೆಜಾನ್ ನಂತಹ ವಿದೇಶಿ ಇ-ಕಾಮರ್ಸ್​ಗಳನ್ನು ಕಟುವಾಗಿ ವಿರೋಧಿಸಿದ ಸಿಎಐಟಿ, 'ಅಗ್ಗದ ರಿಯಾಯಿತಿಗಳನ್ನು ನೀಡಿ ಸಣ್ಣ ಉದ್ಯಮಗಳನ್ನು ಕೊಲ್ಲುತ್ತಿದೆ' ಎಂದು ಆರೋಪಿಸಿತ್ತು. ಇದು ಎಂದಿಗೂ ಇ-ಕಾಮರ್ಸ್ ವಹಿವಾಟು ವಿರೋಧಿಸಿಲ್ಲ. ಹೆಚ್ಚುವರಿ ವಹಿವಾಟಿಗಾಗಿ ಅದು ಆಯ್ದು ಕೊಳ್ಳುತ್ತಿದ ವ್ಯಾಪಾರ ಧೋರಣೆ ಬಗ್ಗೆ ಕಟುವಾಗಿ ವಿರೋಧ ವ್ಯಕ್ತಪಡಿಸಿತ್ತು ಎಂದು ಸ್ಪಷ್ಟನೆ ನೀಡಿದೆ.

ಜಿಯೋಮಾರ್ಟ್​ನ ವಾಟ್ಸ್​ಆ್ಯಪ್​​ ಪ್ರಾಯೋಗಿಕ ವಹಿವಾಟು ಶುರು:

ಈ ಎಲ್ಲ ಬೆಳವಣಿಗೆಗಳ ನಡುವೆ ರಿಲಯನ್ಸ್ ಜಿಯೋಮಾರ್ಟ್ ಈಗಾಗಲೇ ನವಿ ಮುಂಬೈ, ಥಾಣೆ ಮತ್ತು ಕಲ್ಯಾಣ್​ಗಳಲ್ಲಿ ಕಿರಾಣಿ ಆರ್ಡರ್​ಗಳಿಗೆ ಪ್ರಾಯೋಗಿಕವಾಗಿ ವಾಟ್ಸ್​ಆ್ಯಪ್​ನಲ್ಲಿ ಗ್ರಾಹಕರೊಂದಿಗೆ ಮಾತುಕತೆ ಆರಂಭಿಸಿದೆ. ಜಿಯೋಮಾರ್ಟ್​ ವೆಬ್ ಪುಟದಲ್ಲಿ ಮಳಿಗೆಯ ಆರ್ಡರ್ ಪರಿಶೀಲಿಸುತ್ತಾರೆ. ವಾಟ್ಸ್​ಆ್ಯಪ್​ನಲ್ಲಿ ರಿಟೇಲ್ ಸ್ಟೋರ್​ನೊಂದಿಗೆ ಸಂಪರ್ಕ ಪಡೆದ ನಂತರ ಗ್ರಾಹಕರು ಕಿರಾನಾ ಸ್ಟೋರ್​ಗಳಿಂದ ಆರ್ಡರ್ ಎತ್ತಿಕೊಳ್ಳುತ್ತಾರೆ.

Last Updated : Apr 29, 2020, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.