ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2022ರ ಸೀಸನ್ಗೆ ಒಣ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಬುಧವಾರ ಅನುಮೋದನೆ ನೀಡಿದೆ.
2021ರಲ್ಲಿ ಒಂದು ಕ್ವಿಂಟಾಲ್ಗೆ 10,335 ರೂಪಾಯಿ ಇದ್ದ ಮಿಲ್ಲಿಂಗ್ ಕೊಪ್ರಾ ಒಣ ಕೊಬ್ಬರಿ ಬೆಲೆಯನ್ನು 10,590 ರೂಪಾಯಿಗೆ ಏರಿಕೆ ಮಾಡಲಾಗಿದೆ. ಬಾಲ್ ಕೊಪ್ರಾ ಒಣ ಕೊಬ್ಬರಿಗೆ ಒಂದು ಕ್ವಿಂಟಾಲ್ಗೆ 2021ರಲ್ಲಿ 10,600 ರೂಪಾಯಿ ಇದ್ದು, ಈಗ ಅದನ್ನು 11 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಈ ಕನಿಷ್ಠ ಬೆಂಬಲ ಬೆಲೆಯಿಂದ ಮಿಲ್ಲಿಂಗ್ ಕೋಪ್ರಾ ಒಣ ಕೊಬ್ಬರಿಗೆ ಶೇಕಡಾ 51.85ರಷ್ಟು ಲಾಭ ಮತ್ತು ಬಾಲ್ ಕೊಪ್ರಾ ಒಣ ಕೊಬ್ಬರಿಗೆ ಶೇಕಡಾ 57.73ರಷ್ಟು ಲಾಭ ರೈತರಿಗೆ ದೊರೆಯುತ್ತದೆ. ಈಗಿನ ಬೆಂಬಲ ಬೆಲೆ ಹೆಚ್ಚಳ 2018-19ರಲ್ಲಿ ಘೋಷಣೆ ಮಾಡಿದ ಎಂಎಸ್‌ಪಿ ನೀತಿಯನ್ನು ಆಧರಿಸಿದೆ ಎಂದು ಕೃಷಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಿನ ಎಂಎಸ್‌ಪಿ ಹೆಚ್ಚಳ ನಿರ್ಧಾರವು ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಶಿಫಾರಸುಗಳನ್ನು ಆಧರಿಸಿದ್ದು, ಇದು 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ಪ್ರಮುಖ ಕ್ರಮಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಮೊಬೈಲ್ ಕದ್ದ ಆರೋಪ.. ಮಂಗಳೂರಲ್ಲಿ ಮೀನುಗಾರನ ಉಲ್ಟಾ ತೂಗು ಹಾಕಿ ಅಮಾನವೀಯ ಶಿಕ್ಷೆ!