ಮುಂಬೈ: ಕಳೆದ ನಾಲ್ಕು ಸೆಷನ್‌ಗಳಲ್ಲಿ ಹೂಡಿಕೆದಾರರು 2.93 ಲಕ್ಷ ಕೋಟಿ ರೂ. ಸಂಪತ್ತು ವೃದ್ಧಿಸಿಕೊಂಡು ಶ್ರೀಮಂತರಾಗಿದ್ದಾರೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಬುಧವಾರ 403.29 ಅಂಕ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 46,666.46 ಅಂಕಗಳ ಮಟ್ಟಕ್ಕೆ ತಲುಪಿದೆ.
ಬಿಎಸ್‌ಇ ಮಾನದಂಡವು ನಾಲ್ಕು ವಹಿವಾಟುಗಳ ಅವಧಿಯಲ್ಲಿ 706.58 ಅಂಕ ಗಳಿಸಿದೆ. ಬಿಎಸ್‌ಇ ಪಟ್ಟಿ ಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳವು ನಾಲ್ಕು ದಿನಗಳಲ್ಲಿ 2,93,826.28 ಕೋಟಿ ರೂ.ಗೆ ತಲುಪಿ 1,85,13,978.81 ಕೋಟಿ ರೂ. ಸೇರ್ಪಡೆಯಾಗಿದೆ.
ಭಾರತೀಯ ಮಾರುಕಟ್ಟೆಗಳು ನಿತ್ಯದ ಗರಿಷ್ಠ ಮಟ್ಟ ದಾಖಲಿಸುತ್ತಿವೆ. ಅಮೆರಿಕದಲ್ಲಿನ ಪ್ರಚೋದಕ ಕ್ರಮಗಳ ನಿರೀಕ್ಷೆ, ಪರಿಣಾಮಕಾರಿ ಲಸಿಕೆ ಒದಗಿಸುವ ಭರವಸೆ ಮತ್ತು ಸಕಾರಾತ್ಮಕ ವಿತ್ತೀಯ ನೀತಿ ಘೋಷಿಸುವ ಫೆಡ್ ಸಭೆಯು ಜಗತ್ತಿನಾದ್ಯಂತ ಮಾರುಕಟ್ಟೆ ಮನೋಭಾವವನ್ನು ಪ್ರೇರೇಪಿಸುತ್ತಿವೆ.
ಕೊರೊನಾ ಸಂಕಷ್ಟದಲ್ಲೂ 26 ಲಕ್ಷ ಜನರಿಗೆ ಉದ್ಯೋಗ ಕೊಟ್ಟ ಸಿಎಂ ಯೋಗಿ ಸರ್ಕಾರ
ದೇಶೀಯ ಮಾರುಕಟ್ಟೆಯಲ್ಲಿ ಎಲ್ಲಾ ಕ್ಷೇತ್ರಗಳು ಉತ್ತಮ ವೇಗ ಕಂಡುಕೊಳ್ಳುತ್ತಿವೆ. ಬೇಡಿಕೆ ಪುನರುಜ್ಜೀವನದ ಭರವಸೆಯಲ್ಲಿ ರಿಯಾಲ್ಟಿ ವಿಭಾಗ ಉತ್ತಮ ಮುನ್ನಡೆ ಕಂಡಿದೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.
ಬುಧವಾರದ ವಹಿವಾಟಿನಂದು ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಹೆಚ್‌ಡಿಎಫ್‌ಸಿ, ಒಎನ್‌ಜಿಸಿ, ಟೈಟಾನ್, ಭಾರತಿ ಏರ್‌ಟೆಲ್, ಏಷ್ಯನ್ ಪೇಂಟ್ಸ್, ಟಿಸಿಎಸ್ ಮತ್ತು ಮಹೀಂದ್ರಾ & ಮಹೀಂದ್ರಾ ಶೇ. 3.11ರಷ್ಟು ಲಾಭ ಗಳಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಐಸಿಐಸಿಐ ಬ್ಯಾಂಕ್, ಎನ್‌ಟಿಪಿಸಿ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಟೆಕ್ ಮಹೀಂದ್ರಾ ಮಂದಗತಿಯಲ್ಲಿ ಸಾಗಿ ಶೇ. 1.09ರಷ್ಟು ಕುಸಿತ ಕಂಡಿವೆ.
ಬಿಎಸ್‌ಇ ವಿಭಾಗದಲ್ಲಿ ರಿಯಾಲ್ಟಿ ಶೇ. 5.03ರಷ್ಟು ಏರಿಕೆ ಕಂಡಿದೆ. ಇದರ ನಂತರದ ಗ್ರಾಹಕ ಬಾಳಕೆ ವಸ್ತುಗಳು ಶೇ. 2.39ರಷ್ಟು, ಟೆಲಿಕಾಂ ಶೇ. 1.75ರಷ್ಟು, ಲೋಹ ಶೇ. 1.75ರಷ್ಟು, ಗ್ರಾಹಕರ ವಿವೇಚನೆ ಸರಕು ಮತ್ತು ಸೇವೆಗಳು ಶೇ. 1.42ರಷ್ಟು ಮತ್ತು ಬಂಡವಾಳ ಸರಕುಗಳು ಶೇ. 1.39ರಷ್ಟು ಏರಿಕೆ ದಾಖಲಿಸಿವೆ.