ನವದೆಹಲಿ: ಆರ್ಥಿಕ ಕುಸಿತದ ಪರಿಣಾಮ ಡಿಸೆಂಬರ್ನಲ್ಲಿಯೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡುಬಂದಿದೆ.
ಟಿವಿಎಸ್ ಮೋಟಾರ್ ಕಂಪೆನಿಯ ವಾಹನಗಳ ಮಾರಾಟ ಕಳೆದ ವರ್ಷದಲ್ಲಿ ಶೇ 25ರಷ್ಟು ಕುಸಿತ ಕಂಡಿದೆ. 2018ರ ಡಿಸೆಂಬರ್ನಲ್ಲಿ 2,71,395 ವಾಹನಗಳು ಮಾರಾಟ ಮಾಡಿದ್ದ ಸಂಸ್ಥೆ 2019ರ ಡಿಸೆಂಬರ್ ತಿಂಗಳಲ್ಲಿ 2,31,571 ವಾಹನ ಮಾರಾಟ ಮಾಡಿದೆ.
ಕಂಪೆನಿಯು ಟಿವಿಎಸ್ ಅಪಾಚೆ ಆರ್ಟಿಆರ್ ಶ್ರೇಣಿ, ಟಿವಿಎಸ್ ಜುಪಿಟರ್ ಕ್ಲಾಸಿಕ್ ಮತ್ತು ಟಿವಿಎಸ್ ಎಕ್ಸ್ಎಲ್ ಸರಣಿಯ 2020ರ ಬಿಎಸ್-4 ವಾಹನಗಳನ್ನು ಉತ್ಪಾದಿಸಿ, ಮಾರುಕಟ್ಟೆಗೆ ಪೂರೈಸುತ್ತಿದೆ.
ಬಜಾಜ್ ಶೇ 12ರಷ್ಟು ಕುಸಿತ
ಬಜಾಜ್ ಆಟೋ ಇಂಡಿಯಾ ಕೂಡ ಶೇ 12ರಷ್ಟು ಕುಸಿತ ಕಂಡಿದ್ದು, 2019ರ ಎಪ್ರಿಲ್- ಡಿಸೆಂಬರ್ ಅವಧಿಯಲ್ಲಿ 19,65,547 ಯೂನಿಟ್ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,28,421 ಯೂನಿಟ್ಗಳನ್ನು ಮಾರಾಟ ಮಾಡಿತ್ತು. ಒಟ್ಟಾರೆ ದೇಶಿ ದ್ವಿಚಕ್ರ ಆಟೋಮೊಬೈಲ್ ಉದ್ಯಮ 2019ರಲ್ಲಿ ಶೇ 3ರಷ್ಟು ಕುಸಿತ ದಾಖಲಿಸಿದೆ.