ನವದೆಹಲಿ : ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಕೊರೊನಿಲ್’ ಮತ್ತು ‘ಸ್ವಸಾರಿ’ ಎಂಬ ಎರಡು ಔಷಧಿಗಳ ಕುರಿತು ಜಾಹೀರಾತು ನಿಲ್ಲಿಸಿ ಹಾಗೂ ಈ ಬಗ್ಗೆ ವಿವರಣೆ ನೀಡುವಂತೆ ಆಯುಷ್ ಸಚಿವಾಲಯ ಆದೇಶಿಸಿದೆ.
ಈ ತಕ್ಷಣವೇ ಕೊರೊನಿಲ್’ ಮತ್ತು ‘ಸ್ವಸಾರಿ’ ಸಂಬಂಧ ಜಾಹೀರಾತು ನಿಲ್ಲಿಸಿ. ಈ ಬಗ್ಗೆ ಕೂಲಂಕಷ ಪರಿಶೀಲಿಸುವವರೆಗೆ ಪ್ರಚಾರ ಮಾಡಕೂಡದು. ಔಷಧಿಗಳ ಸಂಯೋಜನೆ, ಅದರ ಸಂಶೋಧನೆಯ ಫಲಿತಾಂಶಗಳು, ಸಂಶೋಧನೆ ನಡೆಸಿದ ಆಸ್ಪತ್ರೆಗಳು, ಕಂಪನಿಯು ಸಾಂಸ್ಥಿಕ ನೈತಿಕ ಸಮಿತಿಯಿಂದ ಕ್ಲಿಯರೆನ್ಸ್ ಹೊಂದಿದೆಯೇ ಮತ್ತು ನೋಂದಣಿ ಮಾಡಿಕೊಂಡಿದೆಯೇ ಎಂಬಂತಹ ವಿವರಗಳನ್ನು ಒದಗಿಸುವಂತೆ ಆಯುಷ್ ಸಚಿವಾಲಯ ಪತಂಜಲಿಗೆ ಕೇಳಿದೆ.
ಕೋವಿಡ್-19 ಚಿಕಿತ್ಸೆಗಾಗಿ ಹಕ್ಕುಸ್ವಾಮ್ಯ ಪಡೆಯುತ್ತಿರುವ ಆಯುರ್ವೇದ ಔಷಧಿಗಳ ಪರವಾನಗಿ ಮತ್ತು ಉತ್ಪನ್ನ ಅನುಮೋದನೆ ವಿವರಗಳನ್ನು ಒದಗಿಸುವಂತೆ ಉತ್ತರಾಖಂಡ್ ಸರ್ಕಾರದ ರಾಜ್ಯ ಪರವಾನಗಿ ಪ್ರಾಧಿಕಾರವನ್ನು ಸಚಿವಾಲಯ ಕೇಳಿದೆ.
-
Launch of first and foremost evidence-based ayurvedic medicine for Covid-19#Patanjali #आयुर्वेदविजय_कोरोनिल_श्वासारि @yogrishiramdev @Ach_Balkrishna pic.twitter.com/Lt5Nm0kiJC
— Patanjali Yogpeeth, Haridwar (@pyptharidwar) June 23, 2020 " class="align-text-top noRightClick twitterSection" data="
">Launch of first and foremost evidence-based ayurvedic medicine for Covid-19#Patanjali #आयुर्वेदविजय_कोरोनिल_श्वासारि @yogrishiramdev @Ach_Balkrishna pic.twitter.com/Lt5Nm0kiJC
— Patanjali Yogpeeth, Haridwar (@pyptharidwar) June 23, 2020Launch of first and foremost evidence-based ayurvedic medicine for Covid-19#Patanjali #आयुर्वेदविजय_कोरोनिल_श्वासारि @yogrishiramdev @Ach_Balkrishna pic.twitter.com/Lt5Nm0kiJC
— Patanjali Yogpeeth, Haridwar (@pyptharidwar) June 23, 2020
ಕೋವಿಡ್-19 ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿದ ಆಯುರ್ವೇದ ಔಷಧಿಗಳ ಬಗ್ಗೆ ಪತಂಜಲಿ ಆಯುರ್ವೇದದ ಪ್ರಕಟಣೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವಾಲಯವು "ಹೇಳಿಕೆಯು ವೈಜ್ಞಾನಿಕ ಅಧ್ಯಯನದ ಹಕ್ಕು ಮತ್ತು ವಿವರಗಳು ಸಚಿವಾಲಯಕ್ಕೆ ತಿಳಿದಿಲ್ಲ" ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವವೇ ಕೋವಿಡ್ ಲಸಿಕೆಗೆ ಎದುರು ನೋಡುತ್ತಿದೆ. ಇದೇ ವೇಳೆಯಲ್ಲಿ ಪತಂಜಲಿ ಸಂಶೋಧನಾ ಸಂಸ್ಥೆ ಹಾಗೂ ಎನ್‌ಐಎಂಎಸ್ ಸಂಸ್ಥೆಗಳು ಜಂಟಿಯಾಗಿ ಪ್ರಥಮ ಆಯುರ್ವೇದಿಕ್ ಔಷಧ ಸಿದ್ಧಪಡಿಸಿವೆ. ಈ ಔಷಧಿಗಳು ದೀರ್ಘ ಸಂಶೋಧನೆಯಿಂದ ಪ್ರಾಯೋಗಿಕವಾಗಿ ತಯಾರಾಗಿವೆ 3-7 ದಿನಗಳಲ್ಲಿ ಸೋಂಕಿತರು ಗುಣಮುಖರಾಗುತ್ತಾರೆ ಎಂದು ರಾಮ್‌ದೇವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.