ನವದೆಹಲಿ: ತಂತ್ರಜ್ಞಾನ ದೈತ್ಯ ಆ್ಯಪಲ್ ಕಂಪನಿಯು ಕಳೆದ ಮಾರ್ಚ್ನಲ್ಲಿ ಆ್ಯಪಲ್ ಟಿವಿ+ (ಪ್ಲಸ್) ಮಾರುಕಟ್ಟೆಗೆ ಪರಿಚಯಿಸುವುದಾಗಿ ಘೋಷಿಸಿತ್ತು. ಅಂತೆಯೇ ಇಂದಿನಿಂದ ಆ್ಯಪಲ್ ಟಿವಿ ಪ್ಲಸ್ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ.
ಆ್ಯಪಲ್ ಟಿವಿ ಪ್ಲಸ್ ಚಂದಾದಾರರು ನೇಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಆಪಲ್ ಟಿವಿ ಜನಪ್ರಿಯ ಚಲನಚಿತ್ರಗಳು, ಪ್ರದರ್ಶನಗಳು ಮತ್ತು ಮೂಲ ಟಿವಿ ಕಾರ್ಯಕ್ರಮಗಳನ್ನು ಬಳಕೆದಾರ ಮುಂದಿಡಲಿದೆ.
ಈ ಸೇವೆಯು ಕೇವಲ ಆ್ಯಪಲ್ ಸಾಧನ ಬಳಕೆದಾರರಿಗೆ ಮಾತ್ರವೇ ಸೀಮಿತವಾಗಿಲ್ಲ. ಇದು ಕೆಲವು ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಬಳಕೆದಾರರಿಗೂ ಲಭ್ಯವಿದೆ. ಆಪಲ್ ಟಿವಿ ಬಳಕೆದಾರರಿಗೆ ನಾಟಕ, ಹಾರರ್, ಹಾಸ್ಯ ಸೇರಿದಂತೆ ಇತರ ಪ್ರಕಾರಗಳ ಕಾರ್ಯಕ್ರಮಗಳನ್ನು ನೋಡಬಹುದು.
ಆ್ಯಪಲ್ ಟಿವಿ+ ಮಾಸಿಕ 99 ರೂ.ಗೆ ಲಭ್ಯವಿದೆ. ಚಂದಾದಾರರಾಗುವ ಮೊದಲು ಬಳಕೆದಾರರಿಗೆ 7 ದಿನಗಳ ಪ್ರಾಯೋಗಿಕ ಉಚಿತ ಸೇವೆ ನೀಡಿಲಿದೆ. ಏಕಕಾಲದಲ್ಲಿ ಆರು ಬಳಕೆದಾರರು ಒಂದೇ ಆ್ಯಪಲ್ ಟಿವಿ+ ಅಪ್ಲಿಕೇಷನ್ ಬಳಸಬಹುದು. ಕುಟುಂಬಸ್ಥರು ಒಂದೇ ಚಂದಾದಾರಿಕೆ ಪಡೆಯಬಹುದು. ಯೋಜನೆಯು ಸ್ವಯಂಚಾಲಿತವಾಗಿ ನವೀಕೃತಗೊಳ್ಳುವ ವ್ಯವಸ್ಥೆ ಅಳವಡಿಸಲಾಗಿದೆ. ಹೊಸ ಐಫೋನ್, ಐಪ್ಯಾಡ್, ಐಪಾಡ್ ಟಚ್, ಮ್ಯಾಕ್ ಅಥವಾ ಆ್ಯಪಲ್ ಟಿವಿ+ ಬಳಕೆಗೆ ಒಂದು ವರ್ಷದ ಉಚಿತ ಸೇವೆ ಪಡೆಯಲಿದ್ದಾರೆ.
ಆ್ಯಪಲ್ ಸಾಧನಗಳಲ್ಲದೆ 2019ರ ಬಳಿಕ ಬಂದ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ, ಅಮೆಜಾನ್ ಫೈರ್ ಟಿವಿ ಬಳಕೆದಾರರಿಗೂ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಸೋನಿ, ಎಲ್ಜಿ ಮತ್ತು ವಿಜಿಯೊ ಸ್ಮಾರ್ಟ್ ಟಿವಿಗಳಲ್ಲಿ ಲಭ್ಯವಾಗಲಿದೆ.