ETV Bharat / business

ಅಮೆಜಾನ್: ​ಭಾರತದಲ್ಲಿ 11,400 ಕೋಟಿ ರೂ. ಹೂಡಿದ್ರೂ ಲಾಭ ಬಾರದೇ ಬೇಜಾರಾದ ಬೆಜೋಸ್​! - ಅಮೆಜಾನ್ ಆದಾಯ

ಅಮೆಜಾನ್ ಮಾರಾಟಗಾರರ ಸೇವೆಗಳು, ಅಮೆಜಾನ್ ಸಗಟು, ಅಮೆಜಾನ್ ಪೇ ಮತ್ತು ಅಮೆಜಾನ್ ಸಾರಿಗೆ ಸೇವೆಗಳ ನಷ್ಟದ ಪ್ರಮಾಣವು 2020ರ ಹಣಕಾಸು ವರ್ಷದಲ್ಲಿ 7,899 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಹಿಂದಿನ ವರ್ಷ 7,014.5 ಕೋಟಿ ರೂ.ಯಷ್ಟು ಇತ್ತು.

Amazon
ಅಮೆಜಾನ್
author img

By

Published : Dec 29, 2020, 7:52 PM IST

ನವದೆಹಲಿ: ಅಮೆರಿಕದ ಇ - ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಮಾರುಕಟ್ಟೆ, ಪಾವತಿ ಮತ್ತು ಸಗಟು ವ್ಯಾಪಾರ ಘಟಕಗಳಾದ್ಯಂತ 11,400 ಕೋಟಿ ರೂ. (ಸುಮಾರು 1.5 ಬಿಲಿಯನ್ ಡಾಲರ್) ಹಣವನ್ನು ಭಾರತದಲ್ಲಿ ಹೂಡಿಕೆ ಮಾಡಿದೆ.

ಅಮೆಜಾನ್‌ನ ಬಹುತೇಕ ವ್ಯಾಪಾರ ಘಟಕಗಳು ಈ ವರ್ಷದ ಹಣಕಾಸಿನ ಅವಧಿಯಲ್ಲಿ ನಷ್ಟವನ್ನು ದಾಖಲಿಸಿದ್ದರೂ ಭಾರತದಲ್ಲಿ ತನ್ನ ಹೂಡಿಕೆಯನ್ನು ಮುಂದುವರಿಸಿದೆ.

ಅಮೆಜಾನ್ ಮಾರಾಟಗಾರರ ಸೇವೆಗಳು, ಅಮೆಜಾನ್ ಸಗಟು, ಅಮೆಜಾನ್ ಪೇ ಮತ್ತು ಅಮೆಜಾನ್ ಸಾರಿಗೆ ಸೇವೆಗಳ ನಷ್ಟದ ಪ್ರಮಾಣವು 2020ರ ಹಣಕಾಸು ವರ್ಷದಲ್ಲಿ 7,899 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಹಿಂದಿನ ವರ್ಷ 7,014.5 ಕೋಟಿ ರೂ.ನಷ್ಟು ಇತ್ತು.

ಅಮೆಜಾನ್ ಸೆಲ್ಲರ್ ಸರ್ವೀಸಸ್, ಅಮೆಜಾನ್ ಸಗಟು, ಅಮೆಜಾನ್ ಪೇ ಮತ್ತು ಅಮೆಜಾನ್ ಸಾರಿಗೆ ಸೇವೆಗಳು ಈ ಹಣಕಾಸು ವರ್ಷದಲ್ಲಿ ಕ್ರಮವಾಗಿ 5,849.2 ಕೋಟಿ ರೂ., 133.2 ಕೋಟಿ ರೂ., 1,868.5 ಕೋಟಿ ಮತ್ತು 48.1 ಕೋಟಿ ರೂ. ನಷ್ಟ ಕಂಡಿವೆ.

2019ರ ಹಣಕಾಸು ವರ್ಷದಲ್ಲಿ 71.1 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದ ಅಮೆಜಾನ್ ಇಂಟರ್‌ನೆಟ್ ಸರ್ವೀಸಸ್, 2020ರಲ್ಲಿ 20 ಲಕ್ಷ ರೂ. ನಷ್ಟದೊಂದಿಗೆ ರೆಡ್​ ಝೋನ್​ಗೆ ಜಾರಿದೆ ಎಂದು ದತ್ತಾಂಶಗಳು ತಿಳಿಸಿವೆ.

ಆನ್‌ಲೈನ್‌ನಲ್ಲಿ ಶಾಪಿಂಗಗನತ್ತ ಗ್ರಾಹಕರನ್ನು ಆಕರ್ಷಿಸಲು ಪ್ರಚಾರ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ನಿರ್ಮಿಸಲು ಅಮೆಜಾನ್ ಲಕ್ಷಾಂತರ ಡಾಲರ್‌ ಹೂಡಿಕೆ ಮಾಡುತ್ತಿದೆ. ಹೀಗಾಗಿ, ಹೆಚ್ಚಿದ ಖರ್ಚಿನಿಂದಾಗಿ ಅದರ ನಷ್ಟ ಏರಿಕೆಯಾಗಿದೆ.

ಇದನ್ನೂ ಓದಿ: ವೇಗದೂತ ಕೊರೊನಾ ರೂಪಾಂತರದ ಅವಾಂತರ: ಜಸ್ಟ್ 13 ನಿಮಿಷದಲ್ಲಿ ಕೋವಿಡ್​ ರಿಸಲ್ಟ್ ಔಟ್​!

ಅಮೆಜಾನ್ ಪೇ ನ ಒಟ್ಟು ವೆಚ್ಚ 2020ರ ವಿತ್ತೀಯ ವರ್ಷದಲ್ಲಿ ಶೇ 62ರಷ್ಟು ಏರಿಕೆಯಾಗಿ 3,234.8 ಕೋಟಿ ರೂ.ಗೆ ತಲುಪಿದೆ. ಆದರೆ, ಅಮೆಜಾನ್ ಸೆಲ್ಲರ್ ಸರ್ವೀಸಸ್ ತನ್ನ ಒಟ್ಟು ವೆಚ್ಚ ಶೇ 25ರಷ್ಟು ಏರಿಕೆಯಾಗಿ 16,877.1 ಕೋಟಿ ರೂ.ಗೆ ತಲುಪಿದೆ.

ನಾವು ದೀರ್ಘಾವಧಿಯ ದೃಷ್ಟಿಕೋನದಿಂದ ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. ಭಾರತದಲ್ಲಿ ಗ್ರಾಹಕರಿಗೆ ಇ-ಕಾಮರ್ಸ್ ಮತ್ತು ಇತರ ಡಿಜಿಟಲ್ ಉತ್ಪನ್ನಗಳ ಸುಲಭ ಮತ್ತು ಅನುಕೂಲತೆಯ ಅನುಮಾಡಿಕೊಡುತ್ತೇವೆ ಎಂದು ಅಮೆಜಾನ್ ಇಂಡಿಯಾ ವಕ್ತಾರರು ಹೇಳಿದ್ದಾರೆ.

ಈ ವರ್ಷದ ಜನವರಿಯಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಆನ್‌ಲೈನ್‌ ವೇದಿಕೆಗೆ ತರಲು ನೆರವಾಗುವ ಉದ್ದೇಶದಿಂದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಭಾರತದಲ್ಲಿ 1 ಬಿಲಿಯನ್ ಡಾಲರ್​ (7,000 ಕೋಟಿ ರೂ.) ಹೂಡಿಕೆ ಘೋಷಿಸಿದ್ದರು. ಈ ಹಿಂದೆ, ಭಾರತದಲ್ಲಿ 5.5 ಶತಕೋಟಿ ಡಾಲರ್ ಹೂಡಿಕೆ ಮಾಡಿಕೊಂಡಿತ್ತು. ಇದು ಅಮೆರಿಕ ಹೊರಗಿನ ಅಮೆಜಾನ್‌ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.