ನವದೆಹಲಿ: ಫ್ಲಿಪ್‌ಕಾರ್ಟ್ ತನ್ನ 'ಬಿಗ್ ಬಿಲಿಯನ್ ಡೇಸ್' ಮಾರಾಟ ಪ್ರಾರಂಭಿಸಿದ ಒಂದು ದಿನದ ಬಳಿಕ ಅಮೆಜಾನ್ ಇಂಡಿಯಾ ತನ್ನ 'ಗ್ರೇಟ್ ಇಂಡಿಯನ್ ಫೆಸ್ಟಿವಲ್' (ಜಿಐಎಫ್) ಅನ್ನು ಅಕ್ಟೋಬರ್ 17ರಿಂದ ಪ್ರಕಟಿಸಿದೆ.
ಅಮೆಜಾನ್ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ 16ರಿಂದ ಆರಂಭಿಕ ಪ್ರವೇಶ ಸಿಗಲಿದೆ. 6.5 ಲಕ್ಷಕ್ಕೂ ಅಧಿಕ ಮಾರಾಟಗಾರರು ಅಮೆಜಾನ್.ಇನ್‌ನಲ್ಲಿ ಕೋಟ್ಯಂತರ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಿದೆ. ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಂದ (ಎಸ್‌ಎಮ್‌ಬಿ) 4 ಕೋಟಿ ಉತ್ಪನ್ನಗಳು100 ನಗರಗಳಲ್ಲಿ 20,000ಕ್ಕೂ ಅಧಿಕ ಸ್ಥಳೀಯ ಅಂಗಡಿಗಳಿಂದ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಅಮೆಜಾನ್.ಇನ್ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಜತೆ ಶೇ 10ರಷ್ಟು ರಿಯಾಯಿತಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ, ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ಅಮೆಜಾನ್ ಪೇನಲ್ಲಿ 10,000 ರೂ. ಶಾಪಿಂಗ್ ರಿವಾರ್ಡ್ ದೊರೆಯಲಿವೆ.
ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಶಾಪಿಂಗ್ ಮಾಡಬಹುದು. ಎಂಎಸ್ಎಂಇ ಖರೀದಿದಾರರು ಅಮೆಜಾನ್ ಬಿಸಿನೆಸ್ನಲ್ಲಿ ವ್ಯಾಪಕ ಶ್ರೇಣಿಯ ವಾಣಿಜ್ಯ ಆಯ್ಕೆಯ ಮೇಲೆ ಬೃಹತ್ ರಿಯಾಯಿತಿಗಳು ನೀಡಲಿದೆ ಕಂಪನಿ ತಿಳಿಸಿದೆ.