ETV Bharat / business

ಜಾಗತಿಕ ಆರ್ಥಿಕತೆಗೆ ಕೊರೊನಾದಿಂದ ದೊಡ್ಡ ಕಂಟಕ... ಆದ್ರೆ, ಭಾರತ, ಚೀನಾ ಸೇಫ್

author img

By

Published : Mar 31, 2020, 6:51 PM IST

ಕೊರೊನಾ ತಂದಿರುವ ಸಮಾಧಾನಕರ ಸಂಗತಿ ಎಂದರೇ ಭಾರತ ಮತ್ತು ಚೀನಾ ಹೊರತುಪಡಿಸಿ ಅಭಿವೃದ್ಧಿ ಹೊಂದುತ್ತಿರುವ ಇತರ ರಾಷ್ಟ್ರಗಳನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಲಿದೆ. ಇದರಲ್ಲಿ ಮೂರನೇ ಎರಡರಷ್ಟು ಜನರಿದ್ದು, ಕೊರೊನಾ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ವಿಶ್ವ ಸಂಸ್ಥೆ ಈ ದೇಶಗಳಿಗೆ 2.5 ಟ್ರಿಲಿಯನ್​ ಡಾಲರ್​ (₹ 187 ಲಕ್ಷ ಕೋಟಿ) ಪ್ಯಾಕೇಜ್​ಗೆ ಕರೆ ನೀಡಿದೆ.

economy
ಆರ್ಥಿಕತೆ

ನ್ಯೂಯಾರ್ಕ್​: ಕೊರೊನಾ ವೈರಸ್​ ಉಂಟುಮಾಡಿರುವ ಪರಿಣಾಮದಿಂದಾಗಿ ಜಾಗತಿಕ ಆದಾಯದಲ್ಲಿ ಲಕ್ಷಾಂತರ ಕೋಟಿ ಡಾಲರ್​ ನಷ್ಟವಾಗಲಿದೆ ಎಂದು ವಿಶ್ವ ಸಂಸ್ಥೆಯ ವಹಿವಾಟು ವರದಿ ತಿಳಿಸಿದೆ.

ಸಮಾಧಾನಕರ ಸಂಗತಿ ಎಂದರೇ ಭಾರತ ಮತ್ತು ಚೀನಾ ಹೊರತುಪಡಿಸಿ ಅಭಿವೃದ್ಧಿ ಹೊಂದುತ್ತಿರುವ ಇತರ ರಾಷ್ಟ್ರಗಳನ್ನು ಮತ್ತಷ್ಟು ಸಂಕಷ್ಟಕ್ಕೆ ಈಡುಮಾಡಲಿದೆ. ಇದರಲ್ಲಿ ಮೂರನೇ ಎರಡರಷ್ಟು ಜನರಿದ್ದು, ಕೊರೊನಾ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ವಿಶ್ವ ಸಂಸ್ಥೆ ಈ ದೇಶಗಳಿಗೆ 2.5 ಟ್ರಿಲಿಯನ್​ ಡಾಲರ್​ (₹ 187 ಲಕ್ಷ ಕೋಟಿ) ಪ್ಯಾಕೇಜ್​ಗೆ ಕರೆ ನೀಡಿದೆ.

ಕೊರೊನಾ ವೈರಸ್ ಪರಿಣಾಮವಾಗಿ ಸರಕು ಮತ್ತು ಶ್ರೀಮಂತಿಕೆ ಹೊದಿರುವ ರಫ್ತು ಮಾಡುವ ರಾಷ್ಟ್ರಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ 2ರಿಂದ 3 ಟ್ರಿಲಿಯನ್​ ಡಾಲರ್​ ( 150- 225 ಲಕ್ಷ ಕೋಟಿ ರೂ.) ಹೂಡಿಕೆ ತುಟ್ಟಿಯಾಗಲಿದೆ ಎಂದು ವಿಶ್ವ ಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ ವಿಶ್ವೇಷಿಸಿದೆ.

ಅಭಿವೃದ್ಧಿ ಹೊಂದಿದ ಆರ್ಥಿಕತೆಗಳು ಹಾಗೂ ಚೀನಾ ಬೃಹತ್ ಸರ್ಕಾರಿ ಪ್ಯಾಕೇಜ್​ಗಳನ್ನು ಒಗ್ಗೂಡಿಸಿವೆ. ಜಿ-20 ರಾಷ್ಟ್ರಗಳಿಗೂ 5 ಟ್ರಿಲಿಯನ್​ ಡಾಲರ್​ (375 ಲಕ್ಷ ಕೋಟಿ ರೂ.) ಆರ್ಥಿಕ ಸಹಕಾರ ನೀಡಲಿವೆ ಎಂದು ಯುಎನ್​ಸಿಟಿಎಡಿ ವರದಿ ತಿಳಿಸಿದೆ.

ಇದೊಂದು ಹಠಾತ್​ ಸಂಭವಿಸಿದ ಬಿಕ್ಕಟ್ಟಾಗಿದೆ. ಇದು ಆರ್ಥಿಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಉಂಟಾದ ಆಘಾತ ಕಡಿಮೆ ಮಾಡಬಲ್ಲದು. ವಿಶ್ವವು ಈ ವರ್ಷ ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿದೆ. ಜಾಗತಿಕ ಆದಾಯದಲ್ಲಿ ಲಕ್ಷಾಂತರ ಕೋಟಿ ನಷ್ಟವಾಗಲಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಮಾರಕವಾಗಲಿದೆ. ಭಾರತ ಮತ್ತು ಚೀನಾ ಇದಕ್ಕೆ ಹೊರತಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಭಾರತ ಮತ್ತು ಚೀನಾ ಜಾಗತಿಕ ಆರ್ಥಿಕ ಹಿಂಜರಿತದಿಂದ ಹೊರತಾಗಿರಲಿವೆ ಕಾರಣ ಏಕೆ ಎಂಬುದಕ್ಕೆ ವಿವರಣೆಯು ವರದಿಯಲ್ಲಿ ಒಳಗೊಂಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.