ನವದೆಹಲಿ: ದೇಶದಲ್ಲಿ ಆಟೋಮೊಬೈಲ್ ಕೈಗಾರಿಕೆಗಳು ನಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಕಾರು ಕಂಪೆನಿಗಳು ಬೇಡಿಕೆಯನ್ನು ಉಳಿಸಿಕೊಳ್ಳಲು ದರಗಳನ್ನು ಕಡಿಮೆ ಮಾಡಿ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತಿವೆ.
ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ..! ನಿಮ್ಮಿಷ್ಟದ ಕಾರಿನ ಬೆಲೆ ಇಷ್ಟಿದೆ?
ಕೆಲ ದಿನಗಳ ಹಿಂದೆ ಭಾರತದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಹತ್ತು ಪ್ರಮುಖ ಕಾರುಗಳ ಬೆಲೆಯಲ್ಲಿ ಐದು ಸಾವಿರ ರೂ ಇಳಿಕೆ ಮಾಡಿತ್ತು. ಸದ್ಯ ವೋಕ್ಸ್ವೇಗನ್ ಕಂಪೆನಿ ಸಹ ಇದೇ ದಾರಿ ಅನುಸರಿಸಿದೆ.
ಗುಡ್ ನ್ಯೂಸ್..! ಬಲೇನೊ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ
ವೋಕ್ಸ್ವೇಗನ್ ಟಿಗುವಾನ್ ಕಾರಿಗೆ ದೊಡ್ಡ ಪ್ರಮಾಣದಲ್ಲಿ ಡಿಸ್ಕೌಂಟ್ ನೀಡಲಾಗಿದ್ದು, ಬರೋಬ್ಬರಿ ₹4.50 ಲಕ್ಷ ರಿಯಾಯತಿ ಘೋಷಿಸಲಾಗಿದೆ.
ವೋಕ್ಸ್ವೇಗನ್ ಪೊಲೋ ಡಿಸೆಲ್ ಕಾರುಗಳಿಗೆ ₹1.16 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಿದೆ. ಸದ್ಯ ಈ ಕಾರಿನ ಬೆಲೆ ₹5.75 ಲಕ್ಷ ರೂ ದಿಂದ ಆರಂಭವಾಗುತ್ತದೆ.
ವೋಕ್ಸ್ವೇಗನ್ ವೆಂಟೋ ಕಾರಿನ ಬೆಲೆ ₹9.99 ಲಕ್ಷ ಇದ್ದು, ಸುಮಾರು 90,000ದಷ್ಟು ಡಿಸ್ಕೌಂಟ್ ಪ್ರಕಟಿಸಿದೆ.
ವೋಕ್ಸ್ವೇಗನ್ ಅಮಿಯೋ ಕಾರುಗಳಿಗೆ ₹1.31 ಲಕ್ಷ ಕಡಿತ ಮಾಡಿ ಸಂಸ್ಥೆ ಘೋಷಣೆ ಮಾಡಿದೆ. ಸದ್ಯ ಈ ಕಾರಿಗೆ ₹5.29 ಬೆಲೆ ಇದೆ.