ನವದೆಹಲಿ: ಕಳೆದ ವರ್ಷ ಸಾಂಕ್ರಾಮಿಕ ರೋಗದ ಆರಂಭದಲ್ಲಿ ಜಿಡಿಪಿ ಬೆಳವಣಿಗೆಯಲ್ಲಿ ಅತಿದೊಡ್ಡ ಸಂಕೋಚನ ಅನುಭವಿಸಿದರೂ, ಜಿ -20 ರಾಷ್ಟ್ರಗಳಲ್ಲಿ ಆಯ್ದ ಕೆಲವು ಆರ್ಥಿಕತೆಗಳಿಗೆ ಸೇರ್ಪಡೆಗೊಳ್ಳಲು ಭಾರತದ ಆರ್ಥಿಕತೆಯು ವರ್ಷದ ಉಳಿದ ಆರು ತಿಂಗಳಲ್ಲಿ ತೀವ್ರ ತಿರುವು ಪಡೆದುಕೊಂಡಿದೆ. ಹಿಂದಿನ ವರ್ಷದ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ ಎಂಬುದನ್ನು ಹಣಕಾಸು ಸಚಿವಾಲಯದ ದತ್ತಾಂಶ ಮಾಹಿತಿಯಿಂದ ತಿಳಿದು ಬಂದಿದೆ.
2021ರ ಮೇ ತಿಂಗಳ ತನ್ನ ಮಾಸಿಕ ಆರ್ಥಿಕ ವರದಿಯಲ್ಲಿ ಸಚಿವಾಲಯವು ವಿ - ಆಕಾರದ ಚೇತರಿಕೆ ಎಂದು ವಿವರಿಸಿದ್ದು, ಆರ್ಥಿಕ ಕುಸಿತದ ಅವಧಿ, 2020ರ ಮಾರ್ಚ್ನಲ್ಲಿ ರಾಷ್ಟ್ರವ್ಯಾಪಿ ಕಠಿಣ ಲಾಕ್‌ಡೌನ್ ಹೇರಿದ ಕಾರಣ ಅಲ್ಪಾವಧಿಯದ್ದಾಗಿದೆ.
ರಾಷ್ಟ್ರೀಯ ಸಾಂಖ್ಯಿಕ ಸಂಘಟನೆ (ಎನ್‌ಎಸ್‌ಒ) ಬಿಡುಗಡೆ ಮಾಡಿದ ದೇಶದ ಆರ್ಥಿಕ ಬೆಳವಣಿಗೆಯ ತಾತ್ಕಾಲಿಕ ಅಂದಾಜಿನ ಪ್ರಕಾರ, ಭಾರತದ ಜಿಡಿಪಿ ಶೇ 7.3ರಷ್ಟು ಸಂಕುಚಿತಗೊಂಡಿದೆ. ಇದು ಶೇ 8ರಷ್ಟು ಯೋಜಿತ ಸಂಕೋಚನದ ಎರಡನೇ ಮುಂಗಡ ಅಂದಾಜಿಗಿಂತ ಸುಧಾರಣೆಯಾಗಿದೆ ಎಂದಿದೆ.
ಓದಿ: 'Hi' ಎಂದು ಟೈಪ್ ಮಾಡಿ WhatsApp ಮೆಸೇಜ್ ಮಾಡಿದ್ರೆ ಕ್ಷಣದಲ್ಲೇ ಜಿಯೋ ರೀಚಾರ್ಜ್: ಯಾವುದೀ ನಂಬರ್?
2020 -21ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಭಾರತದ ಆರ್ಥಿಕತೆಯಲ್ಲಿ ಸ್ಥಿರವಾದ ವಿ - ಆಕಾರದ ಚೇತರಿಕೆಯೇ ಇದಕ್ಕೆ ಕಾರಣ ಎಂದು ಸಚಿವಾಲಯ ತನ್ನ ವರದಿಯಲ್ಲಿ ತಿಳಿಸಿದೆ. 2020-21ರ ವಾರ್ಷಿಕ ಅರ್ಧದಾರಿಯಲ್ಲೇ ಸ್ಪಷ್ಟವಾಗಿ ಕಂಡು ಬರುವ ವಿ - ಆಕಾರದ ಚೇತರಿಕೆ ಭಾರತೀಯ ಆರ್ಥಿಕತೆಯ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ಪ್ರತಿಬಿಂಬಿಸುತ್ತದೆ ಎಂದು 2020ರ ನವೆಂಬರ್ ಮಾಸಿಕ ವರದಿಯಲ್ಲಿ ಸಚಿವಾಲಯ ಹೇಳಿದೆ.
ಕಳೆದ ವರ್ಷ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತದ ಜಿಡಿಪಿ ಶೇ 24.4ರಷ್ಟು ಕುಗ್ಗಿತು. ಇದು ಜಿ 20 ರಾಷ್ಟ್ರಗಳಲ್ಲಿ ತೀವ್ರ ಕುಸಿತವಾಗಿದೆ. ಇದು ಎಂಟು ಮುಂದುವರಿದ ಮತ್ತು 11 ಪ್ರಮುಖ ಉದಯೋನ್ಮುಖ ಆರ್ಥಿಕತೆಗಳ ಒಂದು ತಂಡವಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಪ್ರಾರಂಭವಾದ ಹಂತ-ಹಂತದ ಅನ್‌ಲಾಕ್ ಪ್ರಕ್ರಿಯೆಯೊಂದಿಗೆ, ಆರ್ಥಿಕತೆಯು ವೇಗವನ್ನು ಪಡೆದುಕೊಂಡಿತು.
ಜಿಡಿಪಿ ಬೆಳವಣಿಗೆಯ ದರದಲ್ಲಿನ ಕುಸಿತವು ಮೈನಸ್ ಶೇ 24.4 ರಿಂದ ಮೈನಸ್ ಶೇ 7.3ಕ್ಕೆ ಇಳಿದಿದೆ. ಕಳೆದ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಸಂಚಿತ ಕುಸಿತ ಮೈನಸ್ ಶೇ15.9ರಷ್ಟು. ಆದರೆ, ಆರ್ಥಿಕತೆಯು ಅಂತಿಮವಾಗಿ ಮುಕ್ಕಾಲು ಭಾಗದ ಆರ್ಥಿಕ ಹಿಂಜರಿತದಿಂದ ಹೊರಬಂದು ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್ ಅವಧಿ) ಅರ್ಧದಷ್ಟು ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ.
ಭಾರತದ ಹಬ್ಬದ ಋತುವಿನ ಬೇಡಿಕೆಯು ಈ ಅವಧಿಯಲ್ಲಿ ಸರಕು ಮತ್ತು ಸೇವೆಗಳ ಬಳಕೆ ಹೆಚ್ಚಿಸಲು ಕಾರಣವಾಯಿತು.