ವಾಷಿಂಗ್ಟನ್: ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಿಂದ ಹತ್ತಿ ಮತ್ತು ಟೊಮೆಟೊ ಉತ್ಪನ್ನಗಳನ್ನು ನಿಷೇಧಿಸುವುದಾಗಿ ಅಮೆರಿಕ ಪ್ರಕಟಿಸಿದೆ.
ಅಮೆರಿಕದ ಎಲ್ಲಾ ಬಂದರುಗಳಲ್ಲಿ ಜನವರಿ 13ರಿಂದ ಈ ನಿಷೇಧ ಜಾರಿಗೆ ಬರಲಿದೆ. ಅಮೆರಿಕ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಅನ್ವಯ, ಚೀನಾದ ಕ್ಸಿನ್‌ಜಿಯಾಂಗ್ ಉಯಿಘರ್ ಪ್ರದೇಶದಲ್ಲಿ ಉತ್ಪಾದಿಸುವ ಹತ್ತಿ ಮತ್ತು ಟೊಮೆಟೊ ಉತ್ಪನ್ನಗಳನ್ನು ನಿರ್ಬಂಧಿಸುತ್ತದೆ ಎಂದು ಏಜೆನ್ಸಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೆಲ ಸ್ನೇಹಿತರ ಲಾಭಕ್ಕಾಗಿ ಮೋದಿ ಸರ್ಕಾರದಿಂದ ರೈತರ ನಾಶ: ರಾಹುಲ್ ಗಾಂಧಿ
ಉಡುಪು, ಜವಳಿ, ಟೊಮೆಟೊ ಬೀಜ, ಟೊಮೆಟೊ ಸಾಸ್, ಹತ್ತಿ ಮತ್ತು ಟೊಮೆಟೊಗಳಿಂದ ತಯಾರಿಸಿದ ಇತರ ಸರಕುಗಳನ್ನು ನಿಷೇಧಿಸಲಾಗಿದೆ.
ನ್ಯಾಯಯುತ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಯ ಸರಕುಗಳನ್ನು ಆಮದು ಮಾಡಿಕೊಳ್ಳಲು ಚೀನಾ ಸರ್ಕಾರವು ಆಧುನಿಕ ಗುಲಾಮಗಿರಿಯನ್ನು ಬಳಸಿಕೊಳ್ಳುವುದನ್ನು ಅಮೆರಿಕ ಸಹಿಸುವುದಿಲ್ಲ ಎಂದು ಸಿಬಿಪಿ ಕಾಯ್ದೆ ಕಮಿಷನರ್ ಮಾರ್ಕ್ ಎ. ಮೊರ್ಗಾನ್ ತಿಳಿಸಿದ್ದಾರೆ.
ಬಲವಂತದ ಶ್ರಮವನ್ನು ಬಳಸಿಕೊಂಡು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಮಾನವ ಹಕ್ಕುಗಳನ್ನು ಗೌರವಿಸುವ ಅಮೆರಿಕನ್ ವ್ಯವಹಾರಗಳಿಗೆ ನೋವುಂಟು ಮಾಡುತ್ತದೆ. ಅನುಮಾನಾಸ್ಪದ ಗ್ರಾಹಕರನ್ನು ಅನೈತಿಕ ಖರೀದಿಗಳಿಗೆ ಒಡ್ಡುತ್ತದೆ ಎಂದು ಅವರು ಸ್ಪಷ್ಪನೆ ನೀಡಿದ್ದಾರೆ.