ನವದೆಹಲಿ: ಭಾರತದ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ತುರ್ತು ಪ್ರತಿಕ್ರಿಯಾ ಹಾಗೂ ಆರೋಗ್ಯ ವ್ಯವಸ್ಥೆಯ ವಿನಿಯೋಗಕ್ಕೆ 15,000 ಕೋಟಿ ರೂ. ತುರ್ತು ಪ್ಯಾಕೇಜ್ಗೆ ಬುಧವಾರ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಈ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸಂಪುಟ ಮಂಜೂರು ಮಾಡಿರುವ ಹಣವನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ತ್ವರಿತ ಕೋವಿಡ್ 19 ತುರ್ತು ಪ್ರಕ್ರಿಯೆಗೆ 7,774 ಕೋಟಿ ಒದಗಿಸಲಾಗುವುದು. ಉಳಿಕೆಯ ಅನುದಾನವನ್ನು ಮುಂದಿನ ನಾಲ್ಕು ವರ್ಷಗಳ ಅವಧಿಯ ಮಧ್ಯಮ ಅವಧಿಯ ಬೆಂಬಲಕ್ಕೆ ಮೀಸಲಿಡಲಾಗಿದೆ ಎಂದರು.
ಸೋಂಕು ನಿರ್ಣಯ ಹಾಗೂ ಕೋವಿಡ್- 19 ಮೀಸಲಾದ ಚಿಕಿತ್ಸಾ ಸೌಲಭ್ಯಗಳ ಅಭಿವೃದ್ಧಿ, ಸೋಂಕು ಪೀಡಿತರ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣ ಮತ್ತು ಔಷಧಗಳ ಖರೀದಿಯ ಭವಿಷ್ಯದ ರೋಗ ತಡೆಗಟ್ಟುವಿಕೆ ಮತ್ತು ಸನ್ನದ್ಧತೆಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ಪ್ರಯೋಗಾಲಯಗಳ ಸ್ಥಾಪನೆ ಮತ್ತು ಕಣ್ಗಾವಲು ಚಟುವಟಿಕೆಗಳನ್ನು ಉತ್ತೇಜಿಸುವುದು. ಜೈವಿಕ ಭದ್ರತಾ ಸಿದ್ಧತೆ, ಸಾಂಕ್ರಾಮಿಕ ಸಂಶೋಧನೆ ಮತ್ತು ಸಮುದಾಯಗಳನ್ನು ಪೂರ್ವಭಾವಿಯಾಗಿ ತೊಡಗಿಸಿಕೊಳ್ಳಲು ಮತ್ತು ಅಪಾಯ ಸಂವಹನ ಚಟುವಟಿಕೆಗಳಿಗೆ ಸಹ ಈ ಮೊತ್ತೆ ನೆರವಾಗಲಿದೆ ಎಂದು ಹೇಳಿದರು.
ಕ್ಯಾರೆಂಟೈನ್, ಪ್ರತ್ಯೇಕತೆ, ಪರೀಕ್ಷೆ, ಚಿಕಿತ್ಸೆ, ರೋಗ ನಿವಾರಣೆ, ಸಾಮಾಜಿಕ ಅಂತರ, ವಿವರವಾದ ಮಾರ್ಗಸೂಚಿಗಳು, ಪ್ರೋಟೋಕಾಲ್ಗಳು ಮತ್ತು ಸಲಹೆಗಳನ್ನು ನೀಡಲಾಗಿದೆ. ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಸೂಕ್ತವಾದ ತಂತ್ರಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.