ETV Bharat / business

ದೇಶಿ ಉತ್ಪಾದನೆ ವೃದ್ಧಿಗೆ 10 ಕ್ಷೇತ್ರಗಳಲ್ಲಿ ₹2 ಲಕ್ಷ ಕೋಟಿ ಹೂಡಿಕೆಗೆ ಮೋದಿ ಕ್ಯಾಬಿನೆಟ್​ ಅಸ್ತು! - ಪಿಎಲ್​ಎ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಂಗೀಕಾರ

ಮುಂದಿನ ಐದು ವರ್ಷಗಳವರೆಗೆ ಆಯ್ದ ಪ್ರತಿ ವಲಯಕ್ಕೂ ಪ್ರತ್ಯೇಕ ಬಜೆಟ್ ಹಂಚಿಕೆಯೊಂದಿಗೆ ಪಿಎಲ್‌ಐ ಯೋಜನೆ ವಿಸ್ತರಿಸುವ ಪ್ರಸ್ತಾಪನೆಯನ್ನು ಅಂತಿಮಗೊಳಿಸುವ ಕಾರ್ಯ ನೀತಿ ಆಯೋಗ ವಹಿಸಿಕೊಂಡಿತ್ತು..

Prakash Javadekar
ಪ್ರಕಾಶ್ ಜಾವಡೇಕರ್​
author img

By

Published : Nov 11, 2020, 4:48 PM IST

ನವದೆಹಲಿ : ದೇಶೀಯ ಉತ್ಪಾದನೆಯ ಪ್ರಮಾಣ ಹೆಚ್ಚಿಸಲು 10 ಕ್ಷೇತ್ರಗಳಿಗೆ 2 ಲಕ್ಷ ಕೋಟಿ ರೂ. ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಂದಿನ ಐದು ವರ್ಷಗಳವರೆಗೆ 10 ಉತ್ಪಾದನಾ ಕ್ಷೇತ್ರಗಳಿಗೆ ₹ 2 ಲಕ್ಷ ಕೋಟಿ ಮೌಲ್ಯದ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.

ಈ ಕ್ರಮವು ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಯೋಜನೆಯು ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ. ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ರಫ್ತು ಹೆಚ್ಚಿಸುತ್ತದೆ ಎಂದು ಕ್ಯಾಬಿನೆಟ್​ ಬಳಿಕ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ.

ಉದ್ದೇಶಿತ ಪಿಎಲ್ಐ ಯೋಜನೆಯಡಿ ಬ್ಯಾಟರಿ ಸಂಗ್ರಹಣೆ, ಸೌರ ಪಿವಿ ಮಾಡ್ಯೂಲ್‌, ಎಲೆಕ್ಟ್ರಾನಿಕ್ಸ್ (ಲ್ಯಾಪ್‌ಟಾಪ್, ಸರ್ವರ್, ಐಒಟಿ ಸಾಧನಗಳು, ನಿರ್ದಿಷ್ಟ ಕಂಪ್ಯೂಟರ್ ಯಂತ್ರಾಂಶ), ಆಟೋಮೊಬೈಲ್ ಮತ್ತು ಆಟೋ ಘಟಕಗಳು, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು, ಜವಳಿ, ಆಹಾರ ಸಂಸ್ಕರಣೆ, ಉಕ್ಕು ಮತ್ತು ಬಿಳಿ ಸರಕುಗಳು (ಹವಾನಿಯಂತ್ರಣಗಳು ಮತ್ತು ಎಲ್ಇಡಿ) ಸೇರಿವೆ.

ಮುಂದಿನ ಐದು ವರ್ಷಗಳವರೆಗೆ ಆಯ್ದ ಪ್ರತಿ ವಲಯಕ್ಕೂ ಪ್ರತ್ಯೇಕ ಬಜೆಟ್ ಹಂಚಿಕೆಯೊಂದಿಗೆ ಪಿಎಲ್‌ಐ ಯೋಜನೆ ವಿಸ್ತರಿಸುವ ಪ್ರಸ್ತಾಪನೆಯನ್ನು ಅಂತಿಮಗೊಳಿಸುವ ಕಾರ್ಯ ನೀತಿ ಆಯೋಗ ವಹಿಸಿಕೊಂಡಿತ್ತು. ನಿಗದಿತ ಸರಕುಗಳ ಉತ್ಪಾದನೆ ಮತ್ತು ರಫ್ತು ಉತ್ತೇಜಿಸಲು 2015ರ ಏಪ್ರಿಲ್‌ನಲ್ಲಿ ಪರಿಚಯಿಸಲಾದ ಭಾರತದಿಂದ ವ್ಯಾಪಾರದ ಸರಕು ರಫ್ತು ಯೋಜನೆ (ಎಂಇಐಎಸ್), ಹಿಂತೆಗೆದು ಕೊಳ್ಳುವುದರಿಂದ ನಿರೀಕ್ಷಿತ ಉಳಿತಾಯದ ಆಧಾರದ ಮೇಲೆ ಖರ್ಚು ಇಲಾಖೆ ನೀಡಿದ ಸಲಹೆಗಳ ವ್ಯಾಪ್ತಿಯಲ್ಲಿ ಈ ಹಂಚಿಕೆ ಮಾಡಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.