ವಾಷಿಂಗ್ಟನ್: ಮಹಾಮಾರಿ ಕೊರೊನಾ ವೈರಸ್ಗೆ ಇದುವರೆಗೂ ಅಮೆರಿಕದಲ್ಲಿ 50,000ಕ್ಕೂ ಅಧಿಕ ಜನ ಮೃತಪಟ್ಟು 8 ಲಕ್ಷಕ್ಕೂ ಹೆಚ್ಚು ನಾಗರಿಕರು ಸೋಂಕು ಪೀಡಿತರಾಗಿದ್ದರೆ. ಇದರ ನಡುವೆಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಂತ- ಹಂತವಾಗಿ ಆರ್ಥಿಕತೆಯನ್ನು ಪುನಃ ತೆರೆಯಲು ಒಲವು ತೋರಿದ್ದಾರೆ.
ಮೇ 1ರವರೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕ್ರಮಗಳ ಪರಿಣಾಮವಾಗಿ ದೇಶದ 330 ದಶಲಕ್ಷ ಜನರಲ್ಲಿ 95 ಪ್ರತಿಶತಕ್ಕೂ ಅಧಿಕ ನಾಗರಿಕರು ಮನೆಯಲ್ಲಿಯೇ ಇರುತ್ತಾರೆ. ಮೇ 1ರ ಗುರುವಾರ ಮೀರಿ ವಿಸ್ತರಿಸಬಹುದೆಂದು ಟ್ರಂಪ್ ಸೂಚಿಸಿದ್ದಾರೆ. ಇದರ ಮಧ್ಯೆ ಸುರಕ್ಷಿತವಾದ ಆರ್ಥಿಕತೆ ಚಟುವಟಿಕೆಗಳನ್ನು ಕ್ರಮೇಣ ತೆರೆಯುವ ಅಗತ್ಯವನ್ನು ಸಹ ಬಲವಂತವಾಗಿ ಪ್ರತಿಪಾದಿಸಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ 26 ದಶಲಕ್ಷಕ್ಕೂ ಅಧಿಕ ಅಮೆರಿಕನ್ನರು ನಿರುದ್ಯೋಗ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಅಂದಾಜಿನ ಅನ್ವಯ, ಈ ಸಂಖ್ಯೆ ಶೀಘ್ರದಲ್ಲೇ 40 ಮಿಲಿಯನ್ ದಾಟಲಿದೆ ಎಂದು ಎಚ್ಚರಿಸಿದೆ.
ವಿಶ್ವ ಬ್ಯಾಂಕ್ (ಯುಎನ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), 2020ರಲ್ಲಿ ಅಮೆರಿಕ ನಕಾರಾತ್ಮಕ ಆರ್ಥಿಕ ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿವೆ.
ಅಮೆರಿಕ ತನ್ನ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ನಾಗರಿಕರು ಜಾಗರೂಕತೆ ವಹಿಸಬೇಕು. ನಾವು ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಉತ್ತಮವಾದ ನೈರ್ಮಲ್ಯದ ಅಭ್ಯಾಸ, ಸಾಮಾಜಿಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಸ್ವಯಂಪ್ರೇರಿತವಾಗಿ ಮುಖಗವಸು ಧರಿಸಬೇಕು ಎಂದು ಹೇಳಿದ್ದಾರೆ.
ನಮ್ಮ ಆರ್ಥಿಕತೆಯ ಸುರಕ್ಷಿತೆ ಮತ್ತು ಹಂತ- ಹಂತವಾಗಿ ಪುನರಾರಂಭವು ತುಂಬಾ ರೋಮಾಂಚನಕಾರಿಯಾಗಿದೆ. ಇದರರ್ಥ ನಾವು ನಮ್ಮ ರಕ್ಷಕರನ್ನು ಯಾವುದೇ ರೀತಿಯಲ್ಲಿ ನಿರಾಸೆಗೊಳಿಸುತ್ತಿದ್ದೇವೆ ಎಂದಲ್ಲ. ನಮ್ಮ ದೇಶವನ್ನು ಮರಳಿ ಹಳೆಯ ಅಭಿವೃದ್ಧಿಯತ್ತ ಕರೆದೊಯ್ಯುವ ಕಾರ್ಯತಂತ್ರದ ಅತ್ಯಗತ್ಯ ಭಾಗವಾಗಿದೆ ಎಂದು ಟ್ರಂಪ್ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
23 ರಾಜ್ಯಗಳಲ್ಲಿ ಹೊಸ ಸೋಂಕಿತರ ಪ್ರಕರಣಗಳು ಕಡಿಮೆಯಾಗಿವೆ. ವಾರದಲ್ಲಿ ಗರಿಷ್ಠ ಪ್ರಕರಣಗಳ ಸಂಖ್ಯೆಯಲ್ಲಿ 40 ಪ್ರತಿಶತದಷ್ಟು ಹೊಸ ಪ್ರಕರಣಗಳಲ್ಲಿ ಕುಸಿತ ಕಂಡುಬಂದಿದೆ. ರೋಗಲಕ್ಷಣಗಳ ಕುಸಿತವನ್ನು 46 ರಾಜ್ಯಗಳು ವರದಿ ಮಾಡಿವೆ ಎಂದು ಹೇಳಿದರು.