ETV Bharat / business

ನಿಮ್ಮ ಕಾರು, ಬೈಕ್​ಗಳ ವಾರಸುದಾರರು ಯಾರೆಂಬುದನ್ನು ನೀವೇ ನಿರ್ಧರಿಸಿ... ಹೇಗೆ ಗೊತ್ತೇ? - ಸಾವಿನ ನಂತರ ಕಾರು ಮಾಲೀಕತ್ವ ವರ್ಗಾಯಿಸುವುದು

ವಾಹನ ಮಾಲೀಕತ್ವವನ್ನು ಮೃತ ವ್ಯಕ್ತಿಯ ಮೊದಲ ಕಾನೂನು ಉತ್ತರಾಧಿಕಾರಿಗೆ ಅಥವಾ ತಾನು ಇಚ್ಚಿಸಿದ ಹೆಸರಿಸಿನ ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ. ಆದರೂ ಈ ಪ್ರಕ್ರಿಯೆಯು ಅತ್ಯಂತ ತೊಡಕಿನಿಂದ ಕೂಡಿದೆ. ಏಕರೂಪ ಮತ್ತು ಬಹಳಷ್ಟು ಕಾಗದಪತ್ರಗಳ ಮೂಲಕ ಸಾಗುತ್ತದೆ. ಭಾವಿ ಒಡೆತನಕ್ಕೆ ಸಾಕಷ್ಟು ಸಮಯ ಹಾಗೂ ಖರ್ಚಿನ ಮೂಲವಾಗಿದೆ. ಇದನ್ನು ತಪ್ಪಿಸಲು ಕೇಂದ್ರ ಕೆಲವು ನಿಯಮಗಳಿಗೆ ತಿದ್ದುಪಡಿ ತರಲಿದೆ..

vehicle ownership
ವಾಹನ ಮಾಲೀಕತ್ವ
author img

By

Published : Nov 28, 2020, 7:51 PM IST

Updated : Nov 28, 2020, 9:54 PM IST

ನವದೆಹಲಿ : ವಾಹನಗಳ ಮಾಲೀಕತ್ವ ವರ್ಗಾವಣೆಯನ್ನು ಮತ್ತಷ್ಟು ಸರಳವಾಗಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ಕಾಯ್ದೆ 1989ರಲ್ಲಿ ಕೆಲ ತಿದ್ದುಪಡಿ ತರಲು ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದ ಕರಡು ಸೂಚಿಯನ್ನು ಸಹ ಕೇಂದ್ರ ಸಾರಿಗೆ ಸಚಿವಾಲಯ ಪ್ರಕಟಿಸಿದೆ.

ವಾಹನ ಮಾಲೀಕತ್ವವನ್ನು ಮೃತ ವ್ಯಕ್ತಿಯ ಮೊದಲ ಕಾನೂನು ಉತ್ತರಾಧಿಕಾರಿಗೆ ಅಥವಾ ತಾನು ಇಚ್ಚಿಸಿದ ಹೆಸರಿಸಿದ ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ. ಆದರೂ ಈ ಪ್ರಕ್ರಿಯೆಯು ಅತ್ಯಂತ ತೊಡಕಿನಿಂದ ಕೂಡಿದೆ.

ಏಕರೂಪ ಮತ್ತು ಬಹಳಷ್ಟು ಕಾಗದಪತ್ರಗಳ ಮೂಲಕ ಸಾಗುತ್ತದೆ. ಭಾವಿ ಒಡೆತನಕ್ಕೆ ಸಾಕಷ್ಟು ಸಮಯ ಹಾಗೂ ಖರ್ಚಿನ ಮೂಲವಾಗಿದೆ. ಇದನ್ನು ತಪ್ಪಿಸಲು ಕೇಂದ್ರ ಕೆಲವು ನಿಯಮಗಳಿಗೆ ತಿದ್ದುಪಡಿ ತರಲಿದೆ. ಅವು ಈ ಕೆಳಗಿನಂತಿವೆ.

  • * ನಿಯಮ 47- ಮೋಟಾರು ವಾಹನಗಳ ನೋಂದಣಿಗೆ ಅರ್ಜಿ: ಇದರಡಿ ಹೆಚ್ಚುವರಿ ಷರತ್ತು ಸೇರಿಸಲು ಪ್ರಸ್ತಾಪಿಸಲಾಗಿದೆ. ಸಾವಿನ ಬಳಿಕದ ಕಾನೂನು ಬದ್ಧ ವರ್ಗಾವಣೆಯ ಅನುಕೂಲತೆಗಾಗಿ ಮೂಲ ಮಾಲೀಕ ಸೂಚಿಸಿದ ನಾಮಿನಿಯ ಗುರುತಿನ ಪುರಾವೆ ಒದಗಿಸುವುದು.
  • * ನಿಯಮ 55- ಮಾಲೀಕತ್ವದ ವರ್ಗಾವಣೆ : ಉಪ-ನಿಯಮ (2) ರಲ್ಲಿ ಹೆಚ್ಚುವರಿ ಷರತ್ತು ಸೇರಿಸಲು ಪ್ರಸ್ತಾಪಿಸಲಾಗಿದೆ. ನಾಮಿನಿಯ ಯಾವುದಾದರೂ ಗುರುತಿನ ಪುರಾವೆ ಇದ್ದರೆ ಅವರನ್ನು ಕಾನೂನುಬದ್ಧ ಉತ್ತರಾಧಿಕಾರಿಯಾಗಿ ನಾಮನಿರ್ದೇಶನ ಮಾಡಲು ಅನುವು ಮಾಡಿಕೊಡುತ್ತದೆ.
  • *ನಿಯಮ 56 - ಸಾವಿನ ವೇಳೆ ಮಾಲೀಕತ್ವದ ವರ್ಗಾವಣೆ : ನೋಂದಾಯಿತ ಮಾಲೀಕರಿಂದ ಯಾವುದೇ ನಾಮಿನಿಯನ್ನು ನಿರ್ದಿಷ್ಟಪಡಿಸದಿದ್ದಲ್ಲಿ ಆ ವಾಹನವನ್ನು ಕಾನೂನುಬದ್ಧವಾಗಿ ಒಡೆತನ ವರ್ಗಾಯಿಸುವ ಪ್ರಕ್ರಿಯೆಗೆ ಸಂಬಂಧ ಉಪ-ನಿಯಮ (2)ರಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಹೆಚ್ಚುವರಿ ಷರತ್ತು ಸಹ ಸೇರಿಸಬಹುದು. ನಾಮಿನಿಯ ಯಾವುದಾರೂ ಗುರುತಿನ ಪುರಾವೆ ಇದ್ದರೆ ಮಾಲೀಕರನ್ನು ನಾಮಿನಿಯನ್ನಾಗಿ ನಾಮನಿರ್ದೇಶನ ಮಾಡಲು ನೆರವಾಗುತ್ತೆ.
  • ನೂತನ ಉಪ-ನಿಯಮಡಿ ನಾಮಿನಿಯನ್ನು ಈಗಾಗಲೇ ಸೂಚಿಸಿದ್ದಲ್ಲಿ ವಾಹನವನ್ನು ನಾಮಿನಿಯ ಹೆಸರಿನಲ್ಲಿ ವರ್ಗಾಯಿಸಲಾಗುತ್ತದೆ. ನೋಂದಾಯಿಸುವ ಪ್ರಾಧಿಕಾರಕ್ಕೆ ತಿಳಿಸಲು, ನಾಮಿನಿಯು ಪೋರ್ಟಲ್‌ನಲ್ಲಿ ಮೂಲಕ ಮಾಲೀಕನ ಮರಣ ಪ್ರಮಾಣಪತ್ರ ಅಪ್‌ಲೋಡ್ ಮಾಡಬೇಕಾಗುತ್ತದೆ. ಅದೇ ಪೋರ್ಟಲ್ ಮೂಲಕ ತನ್ನ ಹೆಸರಿನಲ್ಲಿ ಹೊಸ ನೋಂದಣಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕು. ನಾಮಿನಿ ಆಧಾರ್ ದೃಢೀಕರಣ ಆಯ್ದುಕೊಂಡರೆ ಅದು ಫೇಸ್​ಲೆಸ್​ ಆಗಿರುತ್ತದೆ.
  • ಆಕಸ್ಮಿಕ ಸಂದರ್ಭದಲ್ಲಿಯೂ ನಾಮಿನಿಯ ಬದಲಾವಣೆಯ ಸಾಧ್ಯತೆಯನ್ನು ಸಹ ಪ್ರಸ್ತಾಪಿಸಲಾಗಿದೆ. ಉದಾ: ವಿಚ್ಛೇದನ, ಆಸ್ತಿ ವಿಭಜನೆ, ಮಾರಾಟವಿಲ್ಲದೆ ಸ್ವತ್ತುಗಳ ವರ್ಗಾವಣೆ ತಿರಸ್ಕಾರದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್​ಒಪಿ) ನಂತಹ ನಾಮನಿರ್ದೇಶನ ಮೂಲಕ ಮಾಲೀಕರು ಇದನ್ನು ಆಯ್ದುಕೊಳ್ಳಬಹುದು.
  • ನಿಯಮ 57- ಸಾರ್ವಜನಿಕ ಹರಾಜಿನಲ್ಲಿ ವಾಹನ ಖರೀದಿಸಿದರೆ ಮಾಲೀಕತ್ವದ ವರ್ಗಾವಣೆ: ಮೋಟಾರು ವಾಹನಗಳ ನೋಂದಣಿಗೆ ಸಂಬಂಧ ಅರ್ಜಿಯ ಉಪ-ನಿಯಮ (1) ರಲ್ಲಿ ಹೆಚ್ಚುವರಿ ಷರತ್ತು ಸೇರಿಸಬಹುದು. ಅದರಲ್ಲಿ ನಾಮಿನಿಯ ಗುರುತಿನ ಪುರಾವೆ, ಯಾವುದಾದರೂ ಇದ್ದರೆ, ಸಾವಿನ ವೇಳೆ ಯಾರನ್ನಾದರೂ ವಾಹನದ ಕಾನೂನುಬದ್ಧ ಉತ್ತರಾಧಿಕಾರಿಯಾಗಿಸಲು ಸಹಾಯಕ ಆಗುತ್ತೆ.
  • ಫಾರ್ಮ್ 20, ಫಾರ್ಮ್ 23 ಎ, 24, 30, 31 ಮತ್ತು 32ರ ತಿದ್ದುಪಡಿ ಅನ್ನು ನಾಮಿನಿಯ ವಿವರ ಸೇರಿಸಲು ತಿದ್ದುಪಡಿ ಮತ್ತು ನಾಮಿನಿಯ ವಿವರ ನಮೂದಿಸಲು ನೋಂದಾಯಿತ ಮಾಲೀಕರಿಂದ ಘೋಷಣೆ ಸಹ ಪ್ರಸ್ತಾಪಿಸಲಾಗಿದೆ. ವಿಂಟೇಜ್ ಮೋಟಾರು ವಾಹನಗಳಿಗೆ ಸಂಬಂಧಿಸಿದ ಸಿಎಮ್‌ವಿಆರ್ 1989ರ ತಿದ್ದುಪಡಿ ಸಂಬಂಧ ಸಚಿವಾಲಯವು ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಕೋರಿದೆ. ಈ ಮೂಲಕ ವಿಂಟೇಜ್ ಮೋಟಾರು ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ಔಪಚಾರಿಕಗೊಳಿಸಲು ಸಚಿವಾಲಯ ಉದ್ದೇಶಿಸಿದೆ.
  • ಪಾರಂಪರಿಕ ಬಹು ಮೌಲ್ಯದ ವಾಹನಗಳ ನೋಂದಣಿ ಪ್ರಕ್ರಿಯೆ ನಿಯಂತ್ರಿಸಲು ಅಸ್ತಿತ್ವದಲ್ಲಿರುವ ಯಾವುದೇ ನಿಯಮಗಳು ಇಲ್ಲ. ಈ ನಿಯಮಗಳನ್ನು 1989ರ ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ 81ಎ, 81ಬಿ, 81ಸಿ, 81ಡಿ, 81ಇ, 81ಎಫ್, 81ಜಿ ಎಂದು ಉಪ-ನಿಯಮಗಳಾಗಿ ಸೇರಿಸಲು ಉದ್ದೇಶಿಸಲಾಗಿದೆ.
  • ಕರಡು ನಿಯಮಗಳು ವಿಂಟೇಜ್ ಮೋಟಾರು ವಾಹನಗಳನ್ನು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ (ವಾಣಿಜ್ಯೇತರ/ ಪರ್ಸನಲ್​) ಮತ್ತು ಮೊದಲ ನೋಂದಣಿ ದಿನಾಂಕದಿಂದ (ಆಮದು ವಾಹನ ಸೇರಿ) 50 ವರ್ಷಕ್ಕಿಂತ ಹಳೆಯದಾದ ಎಲ್ಲಾ ವಾಹನಗಳನ್ನು ವಿಂಟೇಜ್ ಮೋಟಾರ್ ವಾಹನಗಳೆಂದು ಪ್ರಸ್ತಾಪಿಸಲಾಗಿದೆ. ವ್ಯಾಖ್ಯಾನದಲ್ಲಿನ ಚಾಸಿಸ್ ಅಥವಾ ಬಾಡಿ ಶೆಲ್ ಮತ್ತು ಎಂಜಿನ್‌ನಲ್ಲಿನ ಮಾರ್ಪಾಡುಗಳನ್ನು ಕೂಲಂಕಷ ಪರೀಕ್ಷೆ ಮಾಡುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ.

Last Updated : Nov 28, 2020, 9:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.