ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆ ಇ-ಸಿಗರೇಟ್ ಉತ್ಪಾದನೆ, ತಯಾರಿಕೆ, ಆಮದು/ರಫ್ತು, ಸಾಗಣೆ, ಮಾರಾಟ, ಹಂಚಿಕೆ, ಸಂಗ್ರಹ ಮತ್ತು ಜಾಹೀರಾತಿನ ಮೇಲೆ ನಿಷೇಧ ಹೇರಿಕೆಗೆ ಅನುಮೋದನೆ ನೀಡಿದ್ದನ್ನು ತಂಬಾಕು ವ್ಯಾಪಾರಿಗಳು ಸ್ವಾಗತಿಸಿದ್ದಾರೆ.
ಭಾರತೀಯ ತಂಬಾಕು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಮಟುಪಲ್ಲಿ ಉಮಾಮಹೇಶ್ವರ ರಾವ್ ಕೇಂದ್ರದ ನಡೆಯನ್ನು ಸ್ವಾಗತಿಸಿದ್ದಾರೆ. ತಂಬಾಕು ಬೆಳೆಯುವ ರೈತರಿಗೆ ಇ-ಸಿಗರೇಟು ಉತ್ಪಾದನೆಯಿಂದ ಪ್ರಯೋಜನ ಪಡೆಯುವುದಿಲ್ಲ. ಇದು ಅಂತಿಮವಾಗಿ ದೇಶಕ್ಕೆ ನಷ್ಟವಾದಂತೆ ಎಂದರು.
ಭಾರತವು ವಿಶ್ವದಲ್ಲೇ ತಂಬಾಕು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ತಂಬಾಕು ಉತ್ಪಾದಿಸುವ ಪ್ರಮುಖ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ ಸೇರಿದಂತೆ ಇತರೆ 9 ರಾಜ್ಯಗಳಲ್ಲಿ ವಾಣಿಜ್ಯ ಬೆಳೆಯಾಗಿದೆ. ಭಾರತದಲ್ಲಿ ಇ-ಸಿಗರೇಟ್ ಮತ್ತು ವ್ಯಾಪಿಂಗ್ ಉತ್ಪನ್ನಗಳನ್ನು ನಿಷೇಧಿಸುವಂತೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸರ್ಕಾರಕ್ಕೆ ಮನವಿ ಮಾಡಿತ್ತು ಎಂದರು.