ETV Bharat / business

ಒಂದೇ ವರ್ಷದಲ್ಲಿ ಕೇಂದ್ರಕ್ಕೆ 37,946 ಕೋಟಿ ರೂ. ತೆರಿಗೆ ವಂಚನೆ -

ಪ್ರಸಕ್ತ ವಿತ್ತೀಯ ವರ್ಷದ ಏಪ್ರಿಲ್​ - ಜೂನ್​ ಅವಧಿಯಲ್ಲಿ ತೆರಿಗೆ ವಂಚಕರು ಬೊಕ್ಕಸಕ್ಕೆ ₹ 6,520 ಕೋಟಿಯಷ್ಟು ನಷ್ಟ ಉಂಟುಮಾಡಿದ್ದಾರೆ. 2018-19ರಲ್ಲಿ ₹ 1,289 ಕೋಟಿ ಮೌಲ್ಯದ ನಕಲಿ ಇನ್ ವಾಯ್ಸ್​ಗಳನ್ನು ಪತ್ತೆ ಮಾಡಲಾಗಿದೆ. ಅದೇ ರೀತಿ ಈ ವರ್ಷದ ಏಪ್ರಿಲ್​- ಜೂನ್​ ನಡುವೆ ₹ 2,805 ಕೋಟಿ ಮೊತ್ತದ ಫೇಕ್​ ಇನ್​ವಾಯ್ಸ್ ಲಭ್ಯವಾಗಿವೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ

ಸಾಂದರ್ಭಿಕ ಚಿತ್ರ
author img

By

Published : Jul 16, 2019, 11:21 PM IST

ನವದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆ 2018-19ನೇ ಸಾಲಿನ ಹಣಕಾಸು ವರ್ಷದಲ್ಲಿ 37,946 ಕೋಟಿ ರೂ. ಮೊತ್ತದ ತೆರಿಗೆ ವಂಚನೆ ಪತ್ತೆ ಹಚ್ಚಿದೆ.

ಪ್ರಸಕ್ತ ವಿತ್ತೀಯ ವರ್ಷದ ಏಪ್ರಿಲ್​- ಜೂನ್​ ಅವಧಿಯಲ್ಲಿ ತೆರಿಗೆ ವಂಚಕರು ಬೊಕ್ಕಸಕ್ಕೆ ₹ 6,520 ಕೋಟಿಯಷ್ಟು ನಷ್ಟ ಉಂಟುಮಾಡಿದ್ದಾರೆ. 2018-19ರಲ್ಲಿ ₹ 1,289 ಕೋಟಿ ಮೌಲ್ಯದ ನಕಲಿ ಇನ್ ವಾಯ್ಸ್​ಗಳನ್ನು ಪತ್ತೆ ಹಚ್ಚಲಾಗಿದೆ. ಅದೇ ರೀತಿ, ಈ ವರ್ಷದ ಏಪ್ರಿಲ್​ - ಜೂನ್​ ನಡುವೆ ₹ 2,805 ಕೋಟಿ ಮೊತ್ತದ ಫೇಕ್​ ಇನ್​ವಾಯ್ಸ್ ಲಭ್ಯವಾಗಿವೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಜಿಎಸ್​ಟಿ ಜಾರಿಯಾದ ವರ್ಷದಲ್ಲಿ ನಕಲಿ ಇನ್​ವಾಯ್ಸ್​ ಸಂಬಂಧಿಸಿದಂತೆ 5 ಪ್ರಕರಣಗಳು ದಾಖಲಾಗಿದೆ. ಇವುಗಳ ಮೊತ್ತ ₹ 12.67 ಕೋಟಿಯಷ್ಟಿದ್ದು, ಇಬ್ಬರನ್ನು ಬಂಧಿಸಲಾಗಿತ್ತು. 2018-19ರಲ್ಲಿ ₹ 11,251.23 ಕೋಟಿ ಮೊತ್ತದ ಫೇಕ್​ ಇನ್​ವಾಯ್ಸ್​ಗಳಿಂದ 1,620 ಪ್ರಕರಣಗಳನ್ನು ದಾಖಲಿಸಿಕೊಂಡು 15ರ ಜನರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

2019-20ರ ಆರ್ಥಿಕ ವರ್ಷದ ಏಪ್ರಿಲ್​- ಜೂನ್​ ಅವಧಿಯಲ್ಲಿ 666 ನಕಲಿ ಇನ್​ವಾಯ್ಸ್​ ಕೇಸಗಳು ದಾಖಲಾಗಿವೆ. ₹ 2,804.98 ಕೋಟಿ ಮೊತ್ತದ ವಂಚನೆಗೆ ಸಂಬಂಧಿಸಿದಂತೆ 41 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಠಾಕೂರ್ ಹೇಳಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.