ETV Bharat / business

'ನೀವು ಕ್ರಿಸ್ತನ ಎರಡನೇ ಅವತಾರಿ' ಅಂತಾ ಭಾವಿಸಿದ್ರಾ? ಕೇಂದ್ರ ಸರ್ಕಾರ ಟೀಕಿಸಿದ ರಾಜನ್​..!

ಎಲ್ಲ ವಿಮರ್ಶಕರನ್ನು ಕರೆದು ದಯವಿಟ್ಟು ಸರ್ಕಾರವನ್ನು ಟೀಕಿಸಬೇಡಿ ಎಂದು ಹೇಳುವುದು ಸರ್ಕಾರಕ್ಕೆ ಕೆಟ್ಟದು ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬರೂ ನಿಮ್ಮನ್ನು ಹೊಗಳುವುದು ಮತ್ತು ನೀವು ಕ್ರಿಸ್ತನ ಎರಡನೇ ಅವತಾರಿ ಎಂದು ಹೇಳುವುದು ಒಳ್ಳೆಯದೆಂದು ನೀವು ಭಾವಿಸಿರಬಹುದು. ಆದರೆ, ಅದು ನಿಮ್ಮ ಸರ್ಕಾರದೊಳಗೆ ಅಗತ್ಯವಾದ ಅರಿವನ್ನು ಉಂಟುಮಾಡುವುದಿಲ್ಲ ಎಂದರು.

ಸಾಂದರ್ಭಿಕ ಚಿತ್ರ
author img

By

Published : Oct 24, 2019, 10:27 PM IST

ಲಂಡನ್​: ಭಾರತೀಯ ರಿಸರ್ವ್​ ಬ್ಯಾಂಕ್​ನ (ಆರ್​ಬಿಐ) ಮಾಜಿ ಗವರ್ನರ್​ ರಘುರಾಮ್ ರಾಜನ್​ ಅವರು ಮೋದಿ ಸರ್ಕಾರದ ಆಡಳಿತ ವೈಖರಿಯನ್ನು ಮತ್ತೆ ವಿರೋಧಿಸಿದ್ದಾರೆ. ಈ ಸರ್ಕಾರ ಟೀಕೆಗಳನ್ನು ವಿರೋಧಿಸುತ್ತಿದೆ. ನಮಗಾಗಿ ಹೊಸ ಮಾದರಿಯನ್ನು ಆವಿಷ್ಕರಿಸೋಣ. ಅದು ನಮ್ಮ ಶಕ್ತಿ ಮತ್ತು ನಮ್ಮ ಪ್ರಜಾಪ್ರಭುತ್ವ ಅವಲಂಬಿಸಿದೆ ಎನ್ನುವ ಮೂಲಕ ಆಂತರಿಕ ಪ್ರಜಾಪ್ರಭುತ್ವದ ಪಾಠ ಮಾಡಿದ್ದಾರೆ .

ಲಂಡನ್​ನ ಕಿಂಗ್ಸ್​ ಕಾಲೇಜಿನಲ್ಲಿ ಮಾತನಾಡಿದ ಅವರು, ಭಾರತದಲ್ಲಿನ ಸರ್ಕಾರವು ತಜ್ಞರ ಸಲಹೆಯಿಂದ ಪ್ರಯೋಜನ ಪಡೆಯುತ್ತದೆ. ಆದರೆ, ಅವರಿಂದ ಟೀಕೆಗಳನ್ನು ನಿಗ್ರಹಿಸುವುದು ಸರ್ಕಾರದ ಕೆಟ್ಟ ಪ್ರವೃತ್ತಿಯಾಗಿದೆ. ಟೀಕೆಗಳನ್ನು ನಿಗ್ರಹಿಸುವುದು ಎಂದರೆ ನೀವು ಬೇರೆಯವರ ಪ್ರತಿಕ್ರಿಯೆಯನ್ನು ಕೇಳುವುದಿಲ್ಲ ಎಂದರ್ಥ. ನೀವು ಪ್ರತಿಕ್ರಿಯೆಯನ್ನು ಕೇಳದಿದ್ದರೆ ಸರಿಯಾದ ಸಮಯದಲ್ಲಿ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಎಲ್ಲ ವಿಮರ್ಶಕರನ್ನು ಕರೆದು ದಯವಿಟ್ಟು ಸರ್ಕಾರವನ್ನು ಟೀಕಿಸಬೇಡಿ ಎಂದು ಹೇಳುವುದು ಸರ್ಕಾರಕ್ಕೆ ಕೆಟ್ಟದು ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬರೂ ನಿಮ್ಮನ್ನು ಹೊಗಳುವುದು ಮತ್ತು ನೀವು ಕ್ರಿಸ್ತನ ಎರಡನೇ ಅವತಾರಿ ಎಂದು ಹೇಳುವುದು ಒಳ್ಳೆಯದೆಂದು ನೀವು ಭಾವಿಸಿರಬಹುದು. ಆದರೆ, ಅದು ನಿಮ್ಮ ಸರ್ಕಾರದೊಳಗೆ ಅಗತ್ಯವಾದ ಅರಿವು ಉಂಟುಮಾಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಭಾರತದಲ್ಲಿ ಸಾಕಷ್ಟು ಅರ್ಥಶಾಸ್ತ್ರಜ್ಞರು ಮತ್ತು ಬುದ್ಧಿವಂತರು ಸರ್ಕಾರಕ್ಕೆ ಸಲಹೆ ನೀಡಬಹುದು. ಆದರೆ, ಸರ್ಕಾರವು ಆ ಸಲಹೆಯನ್ನು ತೆಗೆದುಕೊಂಡು ಉದ್ದೇಶಯುಕ್ತವಾಗಿ ಅವುಗಳ ಮೇಲೆ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ನಮ್ಮಲ್ಲಿ ಹೆಚ್ಚು ಕೇಂದ್ರೀಕೃತ ಶೈಲಿಯಲ್ಲಿ ಆಡಳಿತ ನಡೆಸುವ ಒಂದು ನಿರ್ದಿಷ್ಟ ಸರ್ಕಾರವಿದೆ. ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಸರ್ಕಾರ ರಾಜಕೀಯ ಇಚ್ಛಾಶಕ್ತಿಯ ಹೊರತಾಗಿಯೂ ನಿರ್ಧಾರ ತೆಗೆದುಕೊಳ್ಳುವುದು ಸ್ವಲ್ಪ ಮಟ್ಟಿಗೆ ಪಾರ್ಶ್ವವಾಯುವಿಗೆ ಒಳಗಾದಂತೆ ಕಾಣುತ್ತದೆ ಎಂದು ಕೇದ್ರದ ನಡೆಯನ್ನು ರಾಜನ್​ ಟೀಕಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.