ETV Bharat / business

ಲಾಕ್​ಡೌನ್​ ಬಾಧಿತ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ: ರಾಜ್ಯದ ಜಿಡಿಪಿ ಶೇ 6.4% ಕುಸಿತ- ಇಂಡಿಯಾ ರೇಟಿಂಗ್ಸ್ - ಕೋವಿಡ್ 19

ಕರ್ನಾಟಕದ ವೃದ್ಧಿ ದರ ಶೇ 6.4ರಷ್ಟು ಇಳಿಕೆಯಾಗಲಿ. ಕೊರೊನಾ ಪ್ರೇರೇಪಿತ ಲಾಕ್‌ಡೌನ್‌ನಿಂದ ಹೆಚ್ಚು ನಷ್ಟಕ್ಕೆ ಒಳಗಾದ ಐದು ರಾಜ್ಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಜಾರ್ಖಂಡ್‌, ತಮಿಳುನಾಡು, ಕೇರಳ ಮತ್ತು ಒಡಿಶಾ ಬಳಿಕದ ಸ್ಥಾನದಲ್ಲಿವೆ ಎಂಬುದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್ ರಿಸರ್ಚ್ ವರದಿಯಿಂದ ತಿಳಿದುಬಂದಿದೆ.

GDP
ಜಿಡಿಪಿ
author img

By

Published : Jun 30, 2020, 5:19 AM IST

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ರಾಜ್ಯಗಳ ಒಟ್ಟು ಆಂತರಿಕ ಉತ್ಪನ್ನವು (ಜಿಎಸ್‌ಡಿಪಿ) ಶೇ 1.4 ರಿಂದ ಶೇ 14.3ರ ತನಕ ಕುಸಿಯಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್ ರಿಸರ್ಚ್‌ ತನ್ನ ವರದಿಯಲ್ಲಿ ಅಂದಾಜಿಸಿದೆ.

ಆರ್ಥಿಕ ಚಟುವಟಿಕೆಗಳ ಮೇಲೆ ಕೋವಿಡ್‌ ಬೀರಿರುವ ವ್ಯತಿರಿಕ್ತ ಪರಿಣಾಮಗಳಿಂದ ರಾಜ್ಯಗಳ ಆರ್ಥಿಕ ಬೆಳವಣಿಗೆ ದರವು ಕುಸಿತಕ್ಕೆ ಒಳಗಾಗಲಿದೆ. ಕರ್ನಾಟಕದ ವೃದ್ಧಿ ದರ ಶೇ 6.4ರಷ್ಟು ಇಳಿಕೆಯಾಗಲಿ. ಕೊರೊನಾ ಪ್ರೇರೇಪಿತ ಲಾಕ್‌ಡೌನ್‌ನಿಂದ ಹೆಚ್ಚು ನಷ್ಟಕ್ಕೆ ಒಳಗಾದ ಐದು ರಾಜ್ಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಜಾರ್ಖಂಡ್‌, ತಮಿಳುನಾಡು, ಕೇರಳ ಮತ್ತು ಒಡಿಶಾ ಬಳಿಕದ ಸ್ಥಾನದಲ್ಲಿವೆ.

ಮಧ್ಯಪ್ರದೇಶ, ಪಂಜಾಬ್‌, ಬಿಹಾರ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಲಾಕ್‌ಡೌನ್‌ನಿಂದಾದ ನಷ್ಟ ಕಡಿಮೆ ಪ್ರಮಾಣದಲ್ಲಿ ಇದೆ. ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳ ಮೇಲಿನ ಲಾಕ್‌ಡೌನ್‌ ಪರಿಣಾಮ ಭಿನ್ನವಾಗಿರಲಿದೆ. ಕೃಷಿ ಚಟುವಟಿಕೆಗಳು ಹೆಚ್ಚು ಬಾಧಿತಗೊಂಡಿಲ್ಲ. ಕೃಷಿ ಚಟುವಟಿಕೆ ಹೆಚ್ಚಿಗೆ ಇರುವ ರಾಜ್ಯಗಳು, ಕೃಷಿ ಚಟುವಟಿಕೆ ಕಡಿಮೆ ಇರುವ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ನಷ್ಟಕ್ಕೆ ಗುರಿಯಾಗಲಿವೆ.

ಲಾಕ್‌ಡೌನ್‌ ಕಾರಣಕ್ಕೆ ಎಲ್ಲ ರಾಜ್ಯಗಳ ವರಮಾನ ಸಂಗ್ರಹವು ಕುಸಿತಗೊಂಡಿದೆ. ರಾಜ್ಯಗಳ ಒಟ್ಟಾರೆ ವರಮಾನದಲ್ಲಿ ಸ್ವಂತ ತೆರಿಗೆ ವರಮಾನವು (ಎಸ್‌ಒಟಿಆರ್‌) ಹೆಚ್ಚಿಗೆ ಇದ್ದರೆ ಅವುಗಳು ಹೆಚ್ಚು ಬಾಧಿತವಾಗಿರಲಿವೆ. ಮಹಾರಾಷ್ಟ್ರ, ಗುಜರಾತ್‌, ತಮಿಳನಾಡು, ಕೇರಳ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳು ಹೆಚ್ಚು ನಷ್ಟ ಕಾಣಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.