ETV Bharat / business

100 ಲಕ್ಷ ಕೋಟಿ ರೂ. ಮೂಲಸೌಕರ್ಯ ಹೂಡಿಕೆ ಅವಕಾಶಗಳ ಆನ್​ಲೈನ್​ ಡ್ಯಾಶ್​​​ಬೋರ್ಡ್​ಗೆ ಚಾಲನೆ!

ಕೇಂದ್ರ ಮತ್ತು ರಾಜ್ಯಗಳ ಯೋಜನೆಗಳ ಅನುಷ್ಠಾನಕ್ಕೆ ಪ್ರಮುಖ ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ಸಾಮಾನ್ಯ ಮತ್ತು ವಲಯವಾರು ಸುಧಾರಣೆಗಳ ಬಗ್ಗೆ ಟಾಸ್ಕ್​ಫೋರ್ಸ್ (ಕಾರ್ಯಪಡೆ) ಸಿದ್ಧಪಡಿಸಿದ ಮಾಹಿತಿ ಇದರಲ್ಲಿ ಇರುತ್ತದೆ. ದೇಶದ ಮೂಲಸೌಕರ್ಯ ಯೋಜನೆಗಳಲ್ಲಿ ಪಾಲುದಾರರಿಗೆ ಹೂಡುವವರಿಗೆ ನೆರವಾಗಲಿದೆ.

ನಿರ್ಮಲಾ ಸೀತಾರಾಮನ್
author img

By

Published : Aug 10, 2020, 9:43 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ರಾಷ್ಟ್ರೀಯ ಇನ್​ಫ್ರಾಸ್ಟ್ರಕ್ಚರ್ ಪೈಪ್​ಲೈನ್​ (ಎನ್​ಐಪಿ) ಸಂಬಂಧಿತ ಆನ್​ಲೈನ್​ ಡ್ಯಾಶ್​​ಬೋರ್ಡ್​​ಗೆ ಚಾಲನೆ ನೀಡಿದರು.

ಕೇಂದ್ರ ಮತ್ತು ರಾಜ್ಯಗಳ ಯೋಜನೆಗಳ ಅನುಷ್ಠಾನಕ್ಕೆ ಪ್ರಮುಖ ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ಸಾಮಾನ್ಯ ಮತ್ತು ವಲಯವಾರು ಸುಧಾರಣೆಗಳ ಬಗ್ಗೆ ಟಾಸ್ಕ್​ಫೋರ್ಸ್ (ಕಾರ್ಯಪಡೆ) ಸಿದ್ಧಪಡಿಸಿದ ಮಾಹಿತಿ ಇದರಲ್ಲಿರುತ್ತದೆ. ದೇಶದ ಮೂಲಸೌಕರ್ಯ ಯೋಜನೆಗಳಲ್ಲಿ ಪಾಲುದಾರರಿಗೆ ಹೂಡುವವರಿಗೆ ನೆರವಾಗಲಿದೆ.

2019-2020ರ ಬಜೆಟ್ ಭಾಷಣದಲ್ಲಿ ಸೀತಾರಾಮನ್ ಅವರು ಮುಂದಿನ 5 ವರ್ಷಗಳಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ 100 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು.

2019-25ರ ಹಣಕಾಸು ವರ್ಷದ ಅವಧಿಯಲ್ಲಿ ದೇಶದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್​ಗೆ ತಲುಪುವಂತೆ ಮಾಡಲು, 111 ಲಕ್ಷ ಕೋಟಿ ರೂ.ಗೂ ಅಧಿಕ ಹಣ ಮೂಲಸೌಕರ್ಯದಲ್ಲಿ ಹೂಡಿಕೆಗೆ ಟಾಸ್ಕ್​ಫೋರ್ಸ್​ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

ಆನ್‌ಲೈನ್ ಡ್ಯಾಶ್‌ಬೋರ್ಡ್, ಇಂಡಿಯಾ ಇನ್ವೆಸ್ಟ್‌ಮೆಂಟ್ ಗ್ರಿಡ್​​ನಲ್ಲಿ (ಐಐಜಿ) ಆಯೋಜಿಸಲಾಗುತ್ತಿದೆ. ಐಐಜಿ, ಸಂವಾದಾತ್ಮಕ ಮತ್ತು ಕ್ರಿಯಾತ್ಮಕ ಆನ್‌ಲೈನ್ ಪ್ಲಾಟ್​​ಫಾರ್ಮ್​ ಆಗಿದ್ದು, ದೇಶದಲ್ಲಿ ನವೀಕರಿಸಿದ ಮತ್ತು ನೈಜ ಸಮಯದ ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎನ್‌ಐಪಿ 'ಆತ್ಮನಿರ್ಭಾರ ಭಾರತ' ದೃಷ್ಟಿಕೋನಕ್ಕೆ ಉತ್ತೇಜನ ನೀಡಲಿದೆ. ಐಐಜಿಯಲ್ಲಿ ಎನ್ಐಪಿ ಯೋಜನೆಗಳ ಲಭ್ಯತೆಯು ನವೀಕರಿಸಿದ ಪ್ರಾಜೆಕ್ಟ್ ಮಾಹಿತಿಗೆ ಸುಲಭವಾಗಿ ಪ್ರವೇಶಿಸಿ ಖಚಿತಪಡಿಸಿಕೊಳ್ಳಬಹುದು. ಪಿಪಿಪಿ ಯೋಜನೆಗಳಿಗೆ ಹೂಡಿಕೆದಾರರನ್ನು ಆಕರ್ಷಿಸುತ್ತದೆ ಎಂದು ಸೀತಾರಾಮನ್ ವಿಡಿಯೋ ಕಾನ್ಫರೆನ್ಸಿಂಗ್​ನಲ್ಲಿ ಹೇಳಿದರು.

ಒಟ್ಟು 111 ಲಕ್ಷ ಕೋಟಿ ರೂ. ನಿರೀಕ್ಷಿತ ಬಂಡವಾಳ ವೆಚ್ಚದಲ್ಲಿ 44 ಲಕ್ಷ ಕೋಟಿ ರೂ. (40 ಪ್ರತಿಶತ) ಯೋಜನೆಗಳು ಜಾರಿಯಲ್ಲಿವೆ. 33 ಲಕ್ಷ ಕೋಟಿ ರೂ. (ಶೇ 30ರಷ್ಟು) ಯೋಜನೆಗಳು ಪರಿಕಲ್ಪನಾ ಹಂತದಲ್ಲಿವೆ, 22 ಲಕ್ಷ ರೂ. ಕೋಟಿ (ಶೇ 20ರಷ್ಟು) ಅಭಿವೃದ್ಧಿಯ ಹಂತದಲ್ಲಿದೆ (ಡಿಪಿಆರ್ ಸಿದ್ಧವಾಗಿದ್ದು, ಹೂಡಿಕೆ ಸೆಳೆಯಲು ಸಾಧ್ಯವಾಗಿಲ್ಲ) ಮತ್ತು 11 ಲಕ್ಷ ಕೋಟಿ ರೂ. ಬಾಕಿ ಯೋಜನೆಗಳಾಗಿ ವರ್ಗೀಕರಿಸಲಾಗಿಲ್ಲ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.