ETV Bharat / business

ಲಾಕ್​ಡೌನ್​ ವೇಳೆ ಸಾಲದ ಮೇಲಿನ ಬಡ್ಡಿ ಮನ್ನಾ: ಮತ್ತೆ ವಿಚಾರಣೆ ಮುಂದೂಡಿದ ಸುಪ್ರೀಂ - ಆರ್​ಬಿಐನ ಸಾಲ ನಿಷೇಧದ ಇತ್ತೀಚಿನ ಸುದ್ದಿ

ಲಾಕ್​ಡೌನ್​ ವೇಳೆ ಸಾಲಗಾರರು ಪಾವತಿಸದ ಇಎಂಐಗಳ ಮೇಲೆ ಬ್ಯಾಂಕ್​ಗಳು ವಿಧಿಸಿದ್ದ ಚಕ್ರ ಬಡ್ಡಿಯ ಸಂಬಂಧಿಸಿದ ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 18ರಂದು ಕೈಗೆತ್ತಿಕೊಳ್ಳಲಿದೆ ಎಂದು ನ್ಯಾಯಪೀಠ ತಿಳಿಸಿದೆ.

SC
ಎಸ್​ಸಿ
author img

By

Published : Nov 5, 2020, 3:40 PM IST

ನವದೆಹಲಿ: ಆರು ತಿಂಗಳ ಲಾಕ್​​ಡೌನ್​ ಅವಧಿಯಲ್ಲಿ ಸಾಲ ಮರುಪಾವತಿ ಅವಧಿ ವಿಸ್ತರಿಸುವ ಮತ್ತು ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ಮುಂದೂಡಿದೆ.

ಲಾಕ್​ಡೌನ್​ ವೇಳೆ ಆರ್‌ಬಿಐ ಸಾಲದ ನಿಷೇಧಾಜ್ಞೆ ಯೋಜನೆ ಪಡೆದ ಸಾಲಗಾರರು ಪಾವತಿಸದ ಇಎಂಐಗಳ ಮೇಲೆ ಬ್ಯಾಂಕ್​ಗಳು ವಿಧಿಸಿದ್ದ ಚಕ್ರ ಬಡ್ಡಿಯ ಸಂಬಂಧಿಸಿದ ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 18ರಂದು ಕೈಗೆತ್ತಿಕೊಳ್ಳಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗದ ಪರಿಹಾರವಾಗಿ ನೀಡಲಾಗುವ ಸಾಲ ನಿಷೇಧದ ಚಕ್ರ ಬಡ್ಡಿ ಮತ್ತು ಇತರ ಸೂಕ್ತ ನಿರ್ದೇಶನಗಳ ಮೇಲಿನ ಬಡ್ಡಿ ಮನ್ನಾ ಮಾಡಲು ಅರ್ಜಿದಾರರು ಕೋರಿದ್ದಾರೆ.

ಕೇಂದ್ರ ಸರ್ಕಾರ ಅಕ್ಟೋಬರ್ 25 ರಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 2020ರ ಮಾರ್ಚ್ 1ರಿಂದ ಆಗಸ್ಟ್ 31ರವರೆಗೆ ನಿರ್ದಿಷ್ಟ ಸಾಲ ಖಾತೆಗಳ ಸಾಲಗಾರ ಬಡ್ಡಿ ಮನ್ನಾ ಯೋಜನೆಯನ್ನು ಪಡೆಯಬಹುದು ಎಂದು ತಿಳಿಸಿತ್ತು.

ಈ ನಿರ್ಧಾರವನ್ನು ಹಣಕಾಸು ಸಚಿವಾಲಯ ಮತ್ತು ಅಕ್ಟೋಬರ್ 21ರಂದು ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅಫಿಡವಿಟ್​ನಲ್ಲಿ ಹೇಳಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.