ETV Bharat / business

ಅಮೆರಿಕನ್ ಡಾಲರ್​​ ಮುಂದೆ 12 ಪೈಸೆ ಕುಸಿದ ರೂಪಾಯಿ

author img

By

Published : Oct 20, 2020, 4:56 PM IST

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ 12 ಪೈಸೆಗಳಷ್ಟು ಕುಸಿತ ಕಂಡಿದ್ದು, ಈಗ ಡಾಲರ್​​​ ಬೆಲೆ 73.49 ರೂಪಾಯಿಯಷ್ಟಾಗಿದೆ.

rupee against US dollar
ಅಮೆರಿಕನ್ ಡಾಲರ್​​ ಮುಂದೆ 12 ಪೈಸೆ ಕುಸಿದ ರೂಪಾಯಿ

ಮುಂಬೈ: ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿದಿದ್ದು, ಮಂಗಳವಾರ 12 ಪೈಸೆಗಳ ಇಳಿಕೆ ಕಂಡಿದೆ. ಇದರಿಂದಾಗಿ ಒಂದು ಡಾಲರ್​ನ ಬೆಲೆ 73.49 ರೂಪಾಯಿಯಷ್ಟಾಗಿದ್ದು, ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ.

ಅಂತರ್​ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್​ಗೆ 73.36 ರೂಪಾಯಿಯಂತೆ ಆರಂಭವಾಗಿದ್ದು, ಡಾಲರ್​ಗೆ 73.49 ರೂಪಾಯಿಯಂತೆ ಅಂತ್ಯಗೊಂಡಿದೆ. ಈ ವೇಳೆ ಸುಮಾರು 12 ಪೈಸೆ ಕುಸಿತ ಕಂಡಿದೆ. ಇದಕ್ಕೂ ಮೊದಲು ಡಾಲರ್​ಗೆ 73.37 ರೂಪಾಯಿಗಳಿಗೆ ಅಂತ್ಯವಾಗಿತ್ತು. ದಿನದ ಮಧ್ಯದಲ್ಲಿ ಡಾಲರ್​ ಬೆಲೆ ಗರಿಷ್ಠ 73.29 ರೂಪಾಯಿಗೆ ಮತ್ತು ಕನಿಷ್ಠ 73.53 ರೂಪಾಯಿಗೆ ತಲುಪಿತ್ತು.

ದೇಶೀಯ ಷೇರು ಮಾರುಕಟ್ಟೆ ಬಿಎಸ್‌ಇ ಸೆನ್ಸೆಕ್ಸ್ 183.13 ಪಾಯಿಂಟ್‌ಗಳ ಏರಿಕೆ ಕಂಡು 40,614.73ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 39.10 ಪಾಯಿಂಟ್ ಏರಿಕೆ ಕಂಡು 11,912.15 ಕ್ಕೆ ತಲುಪಿದೆ. ತಾತ್ಕಾಲಿಕ ವಿನಿಮಯ ದತ್ತಾಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 1,656.78 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದ್ದರು.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.42 ರಷ್ಟು ಕುಸಿದು 42.44 ಡಾಲರ್‌ಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.