ETV Bharat / business

2019 ರಲ್ಲಿ ಮರುಬಳಕೆ ಇಂಧನ ಘಟಕ ನಿರ್ಮಾಣ ವೆಚ್ಚ ಗಣನೀಯ ಇಳಿಕೆ - ಕಲ್ಲಿದ್ದಲು ಘಟಕ

ಸುಧಾರಿತ ಬಯೋ ಇಂಧನ, ಜಿಯೋಥರ್ಮಲ್ ಮತ್ತು ಹೈಡ್ರೊಪವರ್ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಸೋಲಾರ್ ಮತ್ತು ಪವನ ಶಕ್ತಿ ಘಟಕಗಳ ನಿರ್ಮಾಣ ವೆಚ್ಚ ಗಣನೀಯವಾಗಿ ತಗ್ಗುತ್ತಿದೆ. 2010 ರಿಂದ 19 ರ ಅವಧಿಯಲ್ಲಿ ಸೋಲಾರ್ ಫೋಟೊವೋಲ್ಟಾಯಿಕ್ ಕೋಶಗಳ ಬೆಲೆಗಳು ಶೇ 82 ರಷ್ಟು ಕಡಿಮೆಯಾಗಿದ್ದು ಉಲ್ಲೇಖನೀಯ. ಹಾಗೆಯೇ ಕಾನ್ಸಂಟ್ರೇಟಿಂಗ್ ಸೋಲಾರ್ ಪವರ್ ವೆಚ್ಚ ಶೇ 42 ರಷ್ಟು, ನದಿ ದಂಡೆಯ ಪವನ ಶಕ್ತಿ ಘಟಕಗಳ ವೆಚ್ಚ ಶೇ 40 ರಷ್ಟು ಹಾಗೂ ಇತರೆಡೆಯ ಪವನ ಶಕ್ತಿ ಘಟಕಗಳ ವೆಚ್ಚದಲ್ಲಿ ಶೇ 29 ರಷ್ಟು ಇಳಿಕೆಯಾಗಿದೆ.

Renewable Power Generation
Renewable Power Generation
author img

By

Published : Jun 11, 2020, 6:49 PM IST

ನೂತನವಾಗಿ ಅಳವಡಿಸಲಾದ ಮರುಬಳಕೆ ಇಂಧನ ಘಟಕಗಳು ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳಿಗಿಂತ ಅತಿ ಕಡಿಮೆ ದರದಲ್ಲಿ ಇಂಧನ ಉತ್ಪಾದಿಸುವ ಕ್ಷಮತೆಯನ್ನು ಹೊಂದಿವೆ. ಅಂತಾರಾಷ್ಟ್ರೀಯ ಮರುಬಳಕೆ ಇಂಧನ ಏಜೆನ್ಸಿಯು (International Renewable Energy Agency -IRENA) ಈ ಕುರಿತಾದ ಹೊಸ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಮರುಬಳಕೆ ಇಂಧನ ಉತ್ಪಾದನೆಯ ಖರ್ಚು ವೆಚ್ಚಗಳನ್ನು ಇದರಲ್ಲಿ ವಿಷದೀಕರಿಸಲಾಗಿದ್ದು, ಮರುಬಳಕೆ ಇಂಧನಗಳ ಕುರಿತು ಹೊಸ ದೃಷ್ಟಿಕೋನವನ್ನು ಮುಂದಿಟ್ಟಿದೆ.

2019 ರಲ್ಲಿ ಅಳವಡಿಸಲಾದ ಅರ್ಧಕ್ಕೂ ಹೆಚ್ಚು ಮರುಬಳಕೆ ಇಂಧನ ಉತ್ಪಾದನೆ ಘಟಕಗಳು ಕಲ್ಲಿದ್ದಲಿಗಿಂತ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡಿವೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೊಸ ಸೋಲಾರ್ ಮತ್ತು ಪವನ ಯಂತ್ರಗಳು ಕಲ್ಲಿದ್ದಲಿಗಿಂತ ಎಷ್ಟೋ ಪಟ್ಟು ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುತ್ತಿವೆ. ಹೀಗಾಗಿ ಮರುಬಳಕೆ ಇಂಧನ ಘಟಕಗಳು ಅತಿ ವೇಗದಲ್ಲಿ ಎಲ್ಲೆಡೆ ಸ್ಥಾಪನೆಯಾಗುತ್ತಿವೆ.

ಸುಧಾರಿತ ಬಯೋ ಇಂಧನ, ಜಿಯೋಥರ್ಮಲ್ ಮತ್ತು ಹೈಡ್ರೊಪವರ್ ತಂತ್ರಜ್ಞಾನಗಳ ಅಳವಡಿಕೆಯ ಮೂಲಕ ಸೋಲಾರ್ ಮತ್ತು ಪವನ ಶಕ್ತಿ ಘಟಕಗಳ ನಿರ್ಮಾಣ ವೆಚ್ಚ ಗಣನೀಯವಾಗಿ ತಗ್ಗುತ್ತಿದೆ. 2010 ರಿಂದ 19 ರ ಅವಧಿಯಲ್ಲಿ ಸೋಲಾರ್ ಫೋಟೊವೋಲ್ಟಾಯಿಕ್ ಕೋಶಗಳ ಬೆಲೆಗಳು ಶೇ 82 ರಷ್ಟು ಕಡಿಮೆಯಾಗಿದ್ದು ಉಲ್ಲೇಖನೀಯ. ಹಾಗೆಯೇ ಕಾನ್ಸಂಟ್ರೇಟಿಂಗ್ ಸೋಲಾರ್ ಪವರ್ ವೆಚ್ಚ ಶೇ 42 ರಷ್ಟು, ನದಿ ದಂಡೆಯ ಪವನ ಶಕ್ತಿ ಘಟಕಗಳ ವೆಚ್ಚ ಶೇ 40 ರಷ್ಟು ಹಾಗೂ ಇತರೆಡೆಯ ಪವನ ಶಕ್ತಿ ಘಟಕಗಳ ವೆಚ್ಚದಲ್ಲಿ ಶೇ 29 ರಷ್ಟು ಇಳಿಕೆಯಾಗಿದೆ.

ಉಪಕರಣಗಳಿಗೆ ಬಳಸುವ ಸೋಲಾರ್ ಪವರ್ ವಿದ್ಯುಚ್ಛಕ್ತಿ ಉತ್ಪಾದನಾ ಖರ್ಚು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ 13 ರಷ್ಟು ಕಡಿಮೆಯಾಗಿದೆ. ಅದರಂತೆ ನದಿದಂಡೆ ಹಾಗೂ ಇತರೆಡೆಯ ಪವನಶಕ್ತಿ ಘಟಕಗಳ ವಿದ್ಯುತ್ ಉತ್ಪಾದನಾ ವೆಚ್ಚಗಳು ಶೇ 9 ರಷ್ಟು ಕಡಿಮೆಯಾಗಿವೆ.

ಮರುಬಳಕೆ ಇಂಧನ ಘಟಕಗಳ ಕ್ಷೇತ್ರದಲ್ಲಿನ ಇತರ ಸಕಾರಾತ್ಮಕ ಬೆಳವಣಿಗೆಗಳು ಹೀಗಿವೆ:

1. 500 ಗೀಗಾ ವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಘಟಕವನ್ನು ಸೋಲಾರ್ ಮತ್ತು ಪವನ ಶಕ್ತಿಗೆ ಬದಲಾಯಿಸಿದಲ್ಲಿ ವಾರ್ಷಿಕವಾಗಿ 23 ಬಿಲಿಯನ್ ಯುಎಸ್​ ಡಾಲರ್​ನಷ್ಟು ಉಳಿತಾಯ ಮಾಡಬಹುದಾಗಿದೆ ಮತ್ತು ಇದು 940 ಬಿಲಿಯನ್ ಡಾಲರ್​ನಷ್ಟು ಸಂಪತ್ತು ಸೃಷ್ಟಿಗೆ ಕಾರಣವಾಗುತ್ತದೆ. ಅಂದರೆ ಈ ಪ್ರಮಾಣ ಜಾಗತಿಕ ವಾರ್ಷಿಕ ಜಿಡಿಪಿ ಶೇ 1 ರಷ್ಟಾಗುತ್ತದೆ.

2. ಅತಿ ದುಬಾರಿಯ ಕಲ್ಲಿದ್ದಲು ಇಂಧನ ಘಟಕಗಳನ್ನು ಮರುಬಳಕೆ ಇಂಧನ ಘಟಕಗಳನ್ನಾಗಿ ಬದಲಾಯಿಸಿದಲ್ಲಿ ಅದರಿಂದ ವಾರ್ಷಿಕ 1.8 ಗಿಗಾ ಟನ್​ಗಳಷ್ಟು ಕಾರ್ಬನ್ ಡೈಯಾಕ್ಸೈಡ್ ವಿಷಾನಿಲ ಬಿಡುಗಡೆಯಾಗುವುದನ್ನು ತಡೆಯಬಹುದು. ಇದು ಕಳೆದ ವರ್ಷದ ಜಾಗತಿಕ ಕಾರ್ಬನ್ ಡೈಯಾಕ್ಸೈಡ್ ಬಿಡುಗಡೆಯ ಶೇ 5 ರಷ್ಟಾಗುತ್ತದೆ.

3. 2021 ರ ವೇಳೆಗೆ ಈಗಿರುವ 1200 ಗಿಗಾವ್ಯಾಟ್ ಕಲ್ಲಿದ್ದಲು ಇಂಧನ ಘಟಕಗಳ ನಿರ್ವಹಣಾ ವೆಚ್ಚ ಹೊಸ ಸೋಲಾರ್ ಪಿವಿ ಘಟಕಗಳನ್ನು ಸ್ಥಾಪನೆ ಮಾಡುವುದಕ್ಕಿಂತ ಹೆಚ್ಚಾಗಲಿದೆ.

4. ಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಹಾಗೂ ಕಾರ್ಬನ್ ಡೈಯಾಕ್ಸೈಡ್ ಅನಿಲ ಬಿಡುಗಡೆ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಡಿಮೆ ವೆಚ್ಚದ ಮರುಬಳಕೆ ಇಂಧನ ಘಟಕಗಳನ್ನು ಸ್ಥಾಪನೆ ಮಾಡುವುದು ಅನಿವಾರ್ಯವಾಗಲಿದೆ.

5. ಕೋವಿಡ್​-19 ಬಿಕ್ಕಟ್ಟಿನ ಈ ಸಮಯದಲ್ಲಿ ಮರುಬಳಕೆ ಇಂಧನ ಘಟಕಗಳನ್ನು ಸ್ಥಾಪಿಸುವುದು ಅರ್ಥವ್ಯವಸ್ಥೆಗೆ ಬಲ ನೀಡಲು ಸಹಕಾರಿಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.