ಬೀಜಿಂಗ್: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‌ಸಿಇಪಿ) ವ್ಯಾಪಾರ ಒಪ್ಪಂದವು ಭಾರತದ ರಫ್ತಿಗೆ ಹಲವು ಅವಕಾಶಗಳನ್ನು ತೆರದಿಡಲಿದೆ ಎಂದು ಚೀನಾದ ಉಪ ವಾಣಿಜ್ಯ ಸಚಿವರು ಬುಧವಾರ ಹೇಳಿದ್ದಾರೆ ಎನ್ನಲಾಗುತ್ತಿದೆ.
ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ವಾಣಿಜ್ಯ ಸಚಿವ ವಾಂಗ್ ಶೌವೆನ್, ಆರ್‌ಸಿಇಪಿ ಒಪ್ಪಂದವು ತನ್ನ ಕೈಗಾರಿಕೆಗಳಿಗೆ ಹಾನಿಯಾಗಬಹುದೆಂಬ ಭಾರತದ ಕಳವಳವನ್ನು ಚೀನಾ ಅರ್ಥಮಾಡಿಕೊಂಡಿದೆ. ಆದರೆ, ಒಂದು ವೇಳೆ ಒಪ್ಪಂದಕ್ಕೆ ಭಾರತ ಮುಂದಾದರೆ ತನ್ನ ರಫ್ತು ಅವಕಾಶಗಳು ಹೆಚ್ಚಳವಾಗಲಿವೆ ಎಂದು ಹೇಳಿದರು.
ವಿಶ್ವದ ಅತಿದೊಡ್ಡ ವ್ಯಾಪಾರ ಒಪ್ಪಂದ ಸಹಿ ಬಗ್ಗೆ ಚೀನಾ ಸೇರಿ 14 ದೇಶಗಳು ಸೋಮವಾರ ಒಗ್ಗೂಡಿದ್ದವು. ಈ ಒಪ್ಪಂದವು ತನ್ನ ರೈತರ, ವ್ಯವಹಾರಗಳ, ಕಾರ್ಮಿಕರ ಮತ್ತು ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂಬ ಆತಂಕದ ನಡುವೆ ಭಾರತ ಕೊನೆಯ ಕ್ಷಣದಲ್ಲಿ ಹಿಂದಕ್ಕೆ ಸರಿಯಿತು.