ETV Bharat / business

'ಕೊರೊನಾ'ದಿಂದ ನಮ್ಮ ಆರ್ಥಿಕತೆ ಉಳಿಸಿಕೊಳ್ಳುತ್ತೇವೆ: RBI ಗವರ್ನರ್ ವಿಶ್ವಾಸ - ಆರ್​ಬಿಐ ಗವರ್ನರ್

ಹಣಕಾಸು ನೀತಿ ಸಮಿತಿಯ ( ಎಂಪಿಸಿ) ವಿತ್ತೀಯ ಪರಾಮರ್ಶೆ ಸಭೆಯು 2020ರ ಮಾರ್ಚ್ 31, ಏಪ್ರಿಲ್ 1 ಮತ್ತು 3ರಂದು ನಿಗದಿಪಡಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಇಂದಿಗೆ (ಸೋಮವಾರ) ಮುಂದೂಡಲಾಗಿತ್ತು. ಸಭೆಗೂ ಮುನ್ನ 'ಆರ್ಥಿಕ ಪುನಶ್ಚೇತನದ ಭರವಸೆ'ಯನ್ನು ಆರ್​ಬಿಐ ಗರ್ವನರ್​ ಶಕ್ತಿಕಾಂತ್ ದಾಸ್ ನೀಡಿದ್ದಾರೆ.

Shaktikanta Das
ಆರ್​ಬಿಐ ಗರ್ವನರ್​ ಶಕ್ತಿಕಾಂತ್ ದಾಸ್
author img

By

Published : Apr 13, 2020, 4:14 PM IST

ಮುಂಬೈ: ಕೋವಿಡ್ -19 ಸಾಂಕ್ರಾಮಿಕದ ದುಷ್ಪರಿಣಾಮಗಳನ್ನು ತಗ್ಗಿಸಲು ಎಲ್ಲ ವಿಧದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಬೆಳವಣಿಗೆ ಪುನಶ್ಚೇತನಗೊಳಿಸಲು ಮತ್ತು ಆರ್ಥಿಕತೆಯ ಸ್ಥಿರತೆ ಕಾಪಾಡಲು ಅಗತ್ಯವಾದ ಯಾವುದೇ ಕ್ರಮಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ತೆಗೆದುಕೊಳ್ಳುತ್ತದೆ ಎಂದು ಗವರ್ನರ್​ ಭರವಸೆ ನೀಡಿದ್ದಾರೆ.

ಮಾರ್ಚ್ 27ರಂದು ಆರ್‌ಬಿಐ ತನ್ನ ಪ್ರಮುಖ ಬಡ್ಡಿ ದರದಲ್ಲಿ 75 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿತ್ತು. ವೈರಸ್ ಹರಡುವಿಕೆಯಿಂದ ಉಂಟಾಗುವ ಆರ್ಥಿಕ ತೊಂದರೆಗಳನ್ನು ತಗ್ಗಿಸಲು. ದುರ್ಬಲ ವರ್ಗದವರಿಗೆ ನಗದು ವರ್ಗಾವಣೆ ಮತ್ತು ಆಹಾರದ ಭದ್ರತೆ ಸೇರಿದಂತೆ ಇತರ ಉತ್ತೇಜನ ಕ್ರಮಗಳಡಿ 1.70 ಲಕ್ಷ ಕೋಟಿ ರೂ. ಸಮಗ್ರ ಪ್ಯಾಕೇಜ್ ಅನ್ನು ಸರ್ಕಾರ ಘೋಷಿಸಿತ್ತು.

ವಿಶ್ವದಾದ್ಯಂತ ಕೋವಿಡ್ 19 ಸೋಂಕು ಹಬ್ಬುವಿಕೆ ತಡೆಯಲು ಲಾಕ್‌ಡೌನ್‌ ಘೋಷಿಸಿ ಸಾಮಾಜಿಕ ಅಂತಾರ ಕಾಪಾಡಿಕೊಳ್ಳಲಾಗುತ್ತಿದೆ. ಸ್ಥೂಲ ಆರ್ಥಿಕ ಕುಸಿತ ಎದುರಿಸಲು ಅನೇಕ ದೇಶಗಳಲ್ಲಿನ ಅಧಿಕಾರಿಗಳು ಮತ್ತು ಕೇಂದ್ರೀಯ ಬ್ಯಾಂಕ್​ಗಳು ಬಹು ಉದ್ದೇಶಿತ ನೀತಿಗಳನ್ನು ಜಾರಿಗೆ ತಂದಿವೆ ಎಂದು ಆರ್​ಬಿಐ ಗರ್ವನರ್​ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಪ್ರಸ್ತುತ ಹೆಚ್ಚುತ್ತಿರುವ ಸಂಭವನೀಯತೆಯು ಜಾಗತಿಕ ಆರ್ಥಿಕ ಹಿಂಜರಿತದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅನುಭವಿಸಿದ್ದಕ್ಕಿಂತ ಮುಂದಿನ ವಿತ್ತೀಯ ಬಿಕ್ಕಟ್ಟು ಇನ್ನಷ್ಟು ಗಂಭೀರವಾಗಬಹುದು. ಭಾರತದಲ್ಲಿಯೂ ಸಹ ಬೆಳವಣಿಗೆ ಈಗಾಗಲೇ ತೀವ್ರವಾಗಿ ಹದಗೆಟ್ಟಿದೆ ಎಂದರು.

ಹಣದುಬ್ಬರ ದೃಷ್ಟಿಯಿಂದ ಪರಿಸ್ಥಿತಿಯು ತೀವ್ರವಾಗಿ ಬದಲಾಗಿದೆ. ಬೇಡಿಕೆಯ ಸಾಮಾನ್ಯ ಹಂತಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಂಡರೆ ಬೇಸಿಗೆಯ ತಿಂಗಳಲ್ಲಿ ಆರಂಭದಲ್ಲಿ ಸಾಮಾನ್ಯ ಬದಲಾವಣೆ ಕಡಿಮೆ ಆಗಬಹುದು ಎಂದು ಅಂದಾಜಿಸಿದರು.

ದೇಶಿಯ ಒಟ್ಟು ಬೇಡಿಕೆಯ ದುರ್ಬಲತೆಯು ಮುಖ್ಯವಾಗಿ ಹಣದುಬ್ಬರಕ್ಕೆ ಎರವಾಗಬಹುದು. ಕೋವಿಡ್ -19 ಸಾಂಕ್ರಾಮಿಕವು ಅದೃಶ್ಯ ಹಂತಕನಾಗಿದೆ. ಅದು ಹರಡುವ ಮುನ್ನ ಹಾಗೂ ಅಮೂಲ್ಯವಾದ ಮಾನವ ಜೀವನ ಮತ್ತು ಸ್ಥೂಲ ಆರ್ಥಿಕತೆಯ ಮೇಲೆ ಹಾನಿ ಮಾಡುವ ಮೊದಲೇ ಅದನ್ನು ಮಟ್ಟಹಾಕಬೇಕು ಎಂದು ದಾಸ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.