ಮುಂಬೈ: ಕೋವಿಡ್ 19 ಹಬ್ಬುವಿಕೆಯ ನಿಯಂತ್ರಣಕ್ಕೆ ವಿಧಿಸಲಾಗಿರುವ ಲಾಕ್ಡೌನ್ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಿವರ್ಸ್ ರೆಪೊ ದರದಲ್ಲಿ ಮತ್ತಷ್ಟು ಪರಿಷ್ಕರಣೆ ಮಾಡಿದ್ದರಿಂದ ವ್ಯವಸ್ಥೆಯಲ್ಲಿ ದ್ರವ್ಯತೆ ಹೆಚ್ಚಾಗುತ್ತದೆ ಮತ್ತು ಇದೊಂದು ಸಕಾರಾತ್ಮಕ ಕ್ರಮ ಎಂದು ಉದ್ಯಮಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೊರಡಿಸಿದ ಪ್ರಕಟಣೆಗಳು ದ್ರವ್ಯತೆ ಪ್ರಮಾಣ ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಸಾಲ ಪೂರೈಕೆಯನ್ನು ಸುಧಾರಿಸುತ್ತದೆ. ಸಣ್ಣ ಉದ್ಯಮ, ಎಂಎಸ್‌ಎಂಇ, ರೈತರು ಮತ್ತು ಬಡವರಿಗೆ ಸಹಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಇಂದಿನ ಪ್ರಕಟಣೆಗಳು ದ್ರವ್ಯತೆಯನ್ನು ಹೆಚ್ಚಿಸುತ್ತದೆ ಹಾಗೂ ಸಾಲದ ಪೂರೈಕೆಯನ್ನು ಸುಧಾರಿಸುತ್ತದೆ. ಈ ಕ್ರಮಗಳು ನಮ್ಮ ಸಣ್ಣ ಉದ್ಯಮಗಳು, ಎಂಎಸ್‌ಎಂಇ, ರೈತರು ಮತ್ತು ಬಡವರಿಗೆ ಸಹಾಯ ಮಾಡಲಿವೆ. ಇದು ಡಬ್ಲ್ಯುಎಂಎ ಮಿತಿಗಳನ್ನು ಹೆಚ್ಚಿಸುವ ಮೂಲಕ ಎಲ್ಲಾ ರಾಜ್ಯಗಳಿಗೂ ನೆರವಾಗುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
-
Today’s announcements by @RBI will greatly enhance liquidity and improve credit supply. These steps would help our small businesses, MSMEs, farmers and the poor. It will also help all states by increasing WMA limits.
— Narendra Modi (@narendramodi) April 17, 2020 " class="align-text-top noRightClick twitterSection" data="
">Today’s announcements by @RBI will greatly enhance liquidity and improve credit supply. These steps would help our small businesses, MSMEs, farmers and the poor. It will also help all states by increasing WMA limits.
— Narendra Modi (@narendramodi) April 17, 2020Today’s announcements by @RBI will greatly enhance liquidity and improve credit supply. These steps would help our small businesses, MSMEs, farmers and the poor. It will also help all states by increasing WMA limits.
— Narendra Modi (@narendramodi) April 17, 2020
ಹೆಚ್ಚುವರಿ ಪುನರ್ರಚನೆಯಿಲ್ಲದೇ ಒಂದು ವರ್ಷದವರೆಗೆ ವಿಳಂಬವಾದ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಸಾಲಗಳನ್ನು ವಿಸ್ತರಿಸಲು ಅವಕಾಶ ನೀಡುವ ಕ್ರಮವು ಡೆವಲಪರ್‌ಗಳಿಗೆ ಹೆಚ್ಚು ಅಗತ್ಯವಾದ ಪರಿಹಾರ ನೀಡಿದಂತಾಗಿದೆ ಎಂದು ಎಸ್ ರಹೇಜಾ ರಿಯಾಲ್ಟಿಯ ನಿರ್ದೇಶಕ ರಾಮ್ ರಹೇಜಾ ಹೇಳಿದರು.
ಆರ್ಥಿಕತೆಯನ್ನು ಕೋವಿಡ್- 19 ತಿದ್ದುಪಡಿ ಮಾಡುತ್ತಿರುವ ಸಮಯದಲ್ಲಿ ಇದು ಅವಶ್ಯಕತೆಯಾಗಿದೆ. ವಸತಿ ರಿಯಲ್ ಎಸ್ಟೇಟ್ ವಲಯದಲ್ಲಿನ ಒತ್ತಡವನ್ನು ನಿವಾರಿಸಲು ನೆರವಾಗಬೇಕೆಂದು ಸರ್ಕಾರದಿಂದ ಕೆಲವು ಪ್ರಚೋದಕ ಪ್ಯಾಕೇಜ್‌ಗಳಿಗಾಗಿ ನಾವು ಎದುರು ನೋಡುತ್ತಿದ್ದೇವೆ ಎಂದರು.
ನೈಟ್ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಮಾತನಾಡಿ, ಎನ್‌ಬಿಎಫ್‌ಸಿ, ಎಚ್‌ಎಫ್‌ಸಿ ಮತ್ತು ಎಂಎಫ್‌ಐಗಳಿಗೆ ದ್ರವ್ಯತೆ ಬೆಂಬಲಕ್ಕಾಗಿ ಕೈಗೊಂಡ ಕ್ರಮಗಳು ರಿಯಲ್ ಎಸ್ಟೇಟ್ ವಲಯಕ್ಕೆ ಅರ್ಥಪೂರ್ಣವಾದ ಸಹಾಯಸ್ತವಾಗಿದೆ ಎಂದರು.
ಆರ್‌ಬಿಐ ನಡಾವಳಿಗಳು ಎನ್‌ಬಿಎಫ್‌ಸಿ, ಎಚ್‌ಎಫ್‌ಸಿ, ಎಂಎಫ್‌ಐ, ಸಹಕಾರಿ ಬ್ಯಾಂಕ್ಗಳು ಮತ್ತು ಆರ್‌ಆರ್‌ಬಿಗಳಿಗೆ ಮಾತ್ರವಲ್ಲದೇ ಅವರ ಸಾಲಗಾರರ ನೆಲೆಗೂ ಸ್ವಾಗತಾರ್ಹ ತಕ್ಷಣದ ಪರಿಹಾರವಾಗಿದೆ ಎಂದು ಭಾರತದ ಕೆಪಿಎಂಜಿಯ ಹಣಕಾಸು ಸೇವೆಗಳ ಸಲಹೆಗಾರ ಸಂಜಯ್ ದೋಶಿ ಹೇಳಿದರು.
ರಿವರ್ಸ್ ರೆಪೊ ದರವನ್ನು ಶೇ 4 ರಿಂದ ಶೇ 3.75ಕ್ಕೆ ಪರಿಷ್ಕರಿಸುವುದರಿಂದ ಉಸಿರುಗಟ್ಟಿದಂತಹ ಆರ್ಥಿಕತೆಯಲ್ಲಿ ದ್ರವ್ಯತೆ ಪ್ರಮಾಣ ಹೆಚ್ಚಾಗುತ್ತದೆ. ಇಂದಿನ ಉದ್ದೇಶಿತ ದ್ರವ್ಯತೆ ವರ್ಗಾವಣೆ ಕ್ರಮಗಳು ಇಳುವರಿ ರೇಖೆಯನ್ನು ಸುಧಾರಿಸುವ ಮತ್ತು ಉದ್ಯಮಕ್ಕೆ ಹೆಚ್ಚಿನ ಹಣವನ್ನು ನಿಯೋಜಿಸಲು ಬ್ಯಾಂಕ್ಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಆರ್ಥಿಕ ಸ್ಥಿತಿಸ್ಥಾಪಕತ್ವದತ್ತ ಕಿಕ್ ಸ್ಟಾರ್ಟ್ನ ಹೆಜ್ಜೆಯಾಗಿದೆ ಎಂದು ಅಸ್ಸೋಚಾಂ ಅಧ್ಯಕ್ಷ ನಿರಂಜನ್ ಹಿರಾನಂದಾನಿ ಶ್ಲಾಘಿಸಿದರು.