ETV Bharat / business

ರೆಪೋ ಹಾಗೂ ರಿವರ್ಸ್​ ರೆಪೋ ದರದಲ್ಲಿ ಯಥಾಸ್ಥಿತಿ: ಆರ್​ಬಿಐ

ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಆರ್​ಬಿಐ ಕಾಯ್ದುಕೊಂಡಿದೆ.

RBI governor Shaktikanta Das
ಆರ್​ಬಿಐ ಗವರ್ನರ್ ಶಕ್ತಿಕಾಂತ್​ ​ ದಾಸ್​​
author img

By

Published : Aug 6, 2020, 1:01 PM IST

Updated : Aug 6, 2020, 1:40 PM IST

ಮುಂಬೈ: ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಆರ್​ಬಿಐ ಕಾಯ್ದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆಯಿದ್ದರೆ ದರಗಳಲ್ಲಿ ಬದಲಾವಣೆ ಮಾಡುವುದಾಗಿ ಆರ್​​​ಬಿಐ ಗವರ್ನರ್​ ಶಕ್ತಿಕಾಂತ್ ​ದಾಸ್​​ ಘೋಷಿಸಿದ್ದಾರೆ.

ವಿತ್ತೀಯ ನೀತಿ ಸಮಿತಿ ರೆಪೋ ದರವನ್ನು ಬದಲಾಯಿಸದಿರಲು ಸರ್ವಸಮ್ಮತವಾದ ನಿರ್ಧಾರ ತೆಗೆದುಕೊಂಡಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್​ ​ದಾಸ್​​ ಹೇಳಿದ್ದಾರೆ.

ಸದ್ಯ ರಿವರ್ಸ್​ ರೆಪೋ ದರ ಶೇಕಡಾ 3.35 ರಷ್ಟಿದ್ದು, ರೆಪೋ ದರ ಶೇಕಡಾ 4ರಷ್ಟಿದೆ. ಎರಡೂ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲದೇ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ಬ್ಯಾಂಕ್ ದರ ಹಾಗೂ ಎಂಎಸ್​ಎಲ್​ಆರ್ ದರ ಕೂಡಾ ಮೊದಲಿದ್ದ ಶೇಕಡಾ 4.25ರಲ್ಲೇ ಮುಂದುವರೆಯಲಿದೆ.

RBI repo rate
ಆರ್​ಬಿಐ ರೆಪೋ ರೇಟ್​

ಕೊರೊನಾ ನಂತರದಲ್ಲಿ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾ ಕೆಲವೊಂದು ನೀತಿಗಳನ್ನು ಜಾರಿಗೊಳಿಸಿತ್ತು. ಎರಡು ತಿಂಗಳಿಗೆ ನಡೆಯುವ ವಿತ್ತೀಯ ನೀತಿ ಸಮಿತಿ ಸಭೆ ಈ ಮೊದಲು ಮಾರ್ಚ್​ನಲ್ಲಿ ನಡೆದಿದ್ದು, ಆನಂತರ ಮೇ ತಿಂಗಳಲ್ಲಿ ನಡೆದಿತ್ತು. ಎರಡೂ ಸಭೆಗಳಲ್ಲಿ ರೆಪೋ ದರವನ್ನು 115 ಬೇಸಿಸ್ ಪಾಯಿಂಟ್​ಗಳಷ್ಟು ಇಳಿಕೆ ಮಾಡಿತ್ತು. ಇದರಿಂದಾಗಿ ಈ ವರ್ಷದ ಫೆಬ್ರವರಿಯಿಂದ 2019ರಿಂದ 250 ಬೇಸಿಸ್ ಪಾಯಿಂಟ್​ಗಳಷ್ಟು ರೆಪೋ ದರವನ್ನು ಕಡಿತಗೊಳಿಸಲಾಗಿದೆ.

ಆರ್​ಬಿಐನ ಶಕ್ತಿಕಾಂತ್ ದಾಸ್​ ಸುದ್ದಿಗೋಷ್ಠಿಯ ಇತರ ಅಂಶಗಳು..

  • ಸಾಲದ ಇಎಂಐ ಮರುಪಾವತಿಗೆ ಕಾಲಾವಕಾಶ ನೀಡುವ ಬಗ್ಗೆ ಆರ್​ಬಿಐ ಮಾತನಾಡಿಲ್ಲ.
  • ಇದರಿಂದಾಗಿ ಆಗಸ್ಟ್​ 31ಕ್ಕೆ ಲೋನ್​ ಮರೆಟೋರಿಯಂ ಅವಧಿ ಮುಕ್ತಾಯವಾಗುತ್ತದೆ.
  • ಬ್ಯಾಂಕ್​​ಗಳು ಕೂಡಾ ಕಾಲಾವಕಾಶ ಮುಂದುವರೆಸುವುದು ಬೇಡವೆಂದೇ ಹೇಳುತ್ತಿವೆ.
  • ರಿಸರ್ವ್​ ಬ್ಯಾಂಕ್​ನ ವಿತ್ತೀಯ ನೀತಿ ಸಮಿತಿ ಸಭೆ ಅಕ್ಟೋಬರ್​​ನಲ್ಲಿ ನಡೆಯಲಿದೆ.
  • ಚಿನ್ನಾಭರಣಗಳ ಮೇಲಿನ ಸಾಲದ ಮೌಲ್ಯವನ್ನು ಹೆಚ್ಚಿಸಿರುವ ರಿಸರ್ವ್​ ಬ್ಯಾಂಕ್​
  • ಸದ್ಯಕ್ಕೆ ಚಿನ್ನದ ಮೌಲ್ಯದ ಶೇ. 75ರಷ್ಟು ಮಾತ್ರ ಸಾಲ ಲಭ್ಯವಿತ್ತು.
  • ಇನ್ನು ಮುಂದೆ ಚಿನ್ನದ ಮೇಲೆ ಶೇ. 90ರಷ್ಟು ಸಾಲ ಸಿಗಲಿದೆ.
  • ಜಾಗತಿಕ ಆರ್ಥಿಕತೆ ಬಹಳ ದುರ್ಬಲವಾಗಿದೆ. ಆದರೂ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬೆಳವಣಿಗೆ ಗೋಚರಿಸುತ್ತಿದೆ.
  • ಚಿಲ್ಲರೆ ಹಣದುಬ್ಬರ ದರ ನಿಯಂತ್ರಣದಲ್ಲಿದೆ. ಇದು ದ್ವಿತೀಯಾರ್ಧದಲ್ಲಿ ಕಡಿಮೆಯಾಗಬಹುದು.
  • ದೇಶದ ಆರ್ಥಿಕತೆಯು ಈಗ ಮತ್ತೆ ಹಾದಿಗೆ ಮರಳುತ್ತಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಚೇತರಿಕೆ
  • ಆದರೂ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬೆಳವಣಿಗೆಯ ಪ್ರವೃತ್ತಿಯಿಂದ ಆಶಾಭಾವನೆ
  • ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಬ್ಯಾಂಕುಗಳಿಂದ ಹಣ ಪಡೆಯುವುದನ್ನು ಕಡಿಮೆ ಮಾಡಲಾಗಿದೆ.
  • ಎನ್​ಹೆಚ್​ಬಿ ಹಾಗೂ ನಬಾರ್ಡ್​ನಿಂದ ಹೆಚ್ಚುವರಿ 10 ಸಾವಿರ ಕೋಟಿ ಪಡೆಯಲಾಗಿದೆ.
  • ಅರ್ಹ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರಿಗೆ ಸಾಲ ಒದಗಿಸಲಾಗಿದೆ.
  • ಸ್ಟಾರ್ಟ್​ ಅಪ್​ಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ.
  • ಕುಟುಂಬಗಳನ್ನು ಆರ್ಥಿಕ ದುಸ್ಥಿತಿಯಿಂದ ಮೇಲೆತ್ತಲು ಚಿನ್ನದ ಮೇಲಿನ ಸಾಲ ಶೇಕಡಾ 90ಕ್ಕೆ ಹೆಚ್ಚಿಸಲಾಗಿದೆ.

Last Updated : Aug 6, 2020, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.