ಮುಂಬೈ: ಆರ್ಬಿಐನ ಆಂತರಿಕ ಸಮಿತಿಯು ಕೇಂದ್ರ ಬ್ಯಾಂಕಿನ ಡಿಜಿಟಲ್ ಕರೆನ್ಸಿ ಮಾದರಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಶೀಘ್ರದಲ್ಲೇ ತನ್ನ ನಿರ್ಧಾರವನ್ನು ಹೊರತರಲಿದೆ ಎಂದು ಡೆಪ್ಯುಟಿ ಗವರ್ನರ್ ಬಿ ಪಿ ಕನುಂಗೊ ಹೇಳಿದ್ದಾರೆ.
ಕೇಂದ್ರೀಯ ಬ್ಯಾಂಕ್ ಬಿಟ್‌ಕಾಯಿನ್ ನಂತಹ ಕ್ರಿಪ್ಟೋಕರೆನ್ಸಿಗಳ ಚಲಾವಣೆಯಿಂದಾಗಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಧಿಕೃತ ಡಿಜಿಟಲ್ ಕರೆನ್ಸಿಯೊಂದಿಗೆ ಹೊರಬರುವ ಉದ್ದೇಶವನ್ನು ಆರ್‌ಬಿಐ ಈ ಹಿಂದೆಯೇ ಘೋಷಿಸಿತ್ತು ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಸರ್ಕಾರ ಕಳೆದ ವಾರ ಮುಂದಾಯಿತು.
ಡಿಜಿಟಲ್ ಕರೆನ್ಸಿಗೆ ಸಂಬಂಧಿಸಿದಂತೆ, ನಾವು ಈಗಾಗಲೇ ನಮ್ಮ ದಾಖಲೆ ಅನ್ನು ಬಿಡುಗಡೆ ಮಾಡಿದ್ದೇವೆ. ಆರ್ಬಿಐನಲ್ಲಿ ಡಿಜಿಟಲ್ ಕರೆನ್ಸಿ ಪ್ರಗತಿಯಲ್ಲಿದೆ ಎಂದು ನಮ್ಮ ಡಿಜಿಟಲ್ ಪಾವತಿ ಡಾಕ್ಯುಮೆಂಟ್ ಹೇಳುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಮುಂದಿನ ವರ್ಷ ಕೇಂದ್ರ 12 ಲಕ್ಷ ಕೋಟಿ ರೂ. ಸಾಲ ಎತ್ತುತ್ತೆ: ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ
ಡಿಜಿಟಲ್ ಕರೆನ್ಸಿ ಹೊಂದುವ ಬಗ್ಗೆ ವಿತ್ತೀಯ ನೀತಿ ಸಮಿತಿಯು ಈ ಹಿಂದೆ ಮಾಡಿದ್ದ ಪ್ರಕಟಣೆಯನ್ನು ಮತ್ತೆ ಉಚ್ಚರಿಸಿದೆ. ನಾವು ಇನ್ನೂ ಒಂದು ಸಮಿತಿ ಹೊಂದಿದ್ದೇವೆ. ಅದು ಇನ್ನೂ ಮಂಡಳಿಯಲ್ಲಿದೆ. ವಾಸ್ತವವಾಗಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಮಾದರಿ ನಿರ್ಧರಿಸಲು ಆಂತರಿಕ ಸಮಿತಿಯು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬಗ್ಗೆ ನೀವು ಶೀಘ್ರದಲ್ಲೇ ರಿಸರ್ವ್ ಬ್ಯಾಂಕಿನಿಂದ ಒಂದು ನಿರ್ಧಾರ ಕೇಳುವಿರಿ ಎಂದು ಹೇಳಿದರು.
ಖಾಸಗಿ ಡಿಜಿಟಲ್ ಕರೆನ್ಸಿಗಳು (ಪಿಡಿಸಿ) / ವರ್ಚುವಲ್ ಕರೆನ್ಸಿ (ವಿಸಿ) / ಕ್ರಿಪ್ಟೋ ಕರೆನ್ಸಿಗಳು (ಸಿಸಿ) ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಗಳಿಸಿವೆ. ಭಾರತದಲ್ಲಿ ನಿಯಂತ್ರಕರು ಮತ್ತು ಸರ್ಕಾರಗಳು ಈ ಕರೆನ್ಸಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಅದೇನೇ ಇದ್ದರೂ, ಫಿಯೆಟ್ ಕರೆನ್ಸಿಯ ಡಿಜಿಟಲ್ ಆವೃತ್ತಿಯ ಅಗತ್ಯವಿದೆಯೇ? ಒಂದು ವೇಳೆ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬ ಬಗ್ಗೆ ಆರ್‌ಬಿಐ ತನ್ನ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ ಎಂದು ಕೇಂದ್ರ ಬ್ಯಾಂಕ್ ಜನವರಿಯಲ್ಲಿ ನೀಡಿದ್ದ ವರದಿಯಲ್ಲಿ ತಿಳಿಸಿತ್ತು.