ETV Bharat / business

ಗೃಹ, ವಾಹನ ಸಾಲದ ಬಡ್ಡಿ ಇನ್ನಷ್ಟು ಅಗ್ಗ... 'ಶೇ 7ರಷ್ಟು ಜಿಡಿಪಿ ವೃದ್ಧಿ'- RBI ಗವರ್ನರ್​ - ರೆಪೊ ದರ

ಕೊರೊನಾ ವೈರಸ್​ನಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ರಿಸರ್ವ್ ಬ್ಯಾಂಕ್ ಹೆಚ್ಚಿನ ಗಮನ ವಹಿಸುತ್ತಿದೆ. ಹೀಗಾಗಿ, ರಿವರ್ಸ್ ರೆಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಲಾಗಿದ್ದು, ಶೇ 4ರಿಂದ ಶೇ.3.75ಕ್ಕೆ ಇಳಿಕೆ ಮಾಡಲಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು.

RBI Governor Shaktikanta Das
ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್
author img

By

Published : Apr 17, 2020, 4:10 PM IST

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ರಿವರ್ಸ್​ ರೆಪೊ ದರ (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಪ್ರಕಟಿಸಿದ್ದು, ಹಿಂದಿನ ದರದಲ್ಲಿ 25 ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ 3.75ಕ್ಕೆ ನಿಗದಿ ಪಡಿಸಿದೆ.

ಕೊರೊನಾ ವೈರಸ್​ನಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ರಿಸರ್ವ್ ಬ್ಯಾಂಕ್ ಹೆಚ್ಚಿನ ಗಮನ ವಹಿಸುತ್ತಿದೆ. ಹೀಗಾಗಿ, ರಿವರ್ಸ್ ರೆಪೋ ದರ 25 ಬೇಸಿಸ್ ಪಾಯಿಂಟ್ ಇಳಿಕೆ ಮಾಡಲಾಗಿದ್ದು, ಶೇ 4ರಿಂದ ಶೇ.3.75ಕ್ಕೆ ಇಳಿಕೆ ಮಾಡಲಾಗಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿತ್ತೀಯ ನೀತಿ ಪರಾಮರ್ಶೆ (ಎಂಸಿಪಿ) ಸಭೆಯ ಬಳಿಕ ಹೇಳಿದರು.

ಭಾರತದ ಆರ್ಥಿಕ ಪುನಶ್ಚೇತನಕ್ಕಾಗಿ ಆರ್​ಬಿಐ ಹಲವು ಯೋಜನೆ ರೂಪಿಸುತ್ತಿದೆ. 2021- 22ರ ಅವಧಿಯಲ್ಲಿ ದೇಶದ ಜಿಡಿಪಿ ಶೇ 7.4ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಗವರ್ನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್​ಬಿಐ, ಆರ್ಥಿಕತೆಯ ಉತ್ಪಾದಕ ಕ್ಷೇತ್ರಗಳಿಗೆ ಸಾಲ ನೀಡಲು ಬ್ಯಾಂಕ್​ಗಳನ್ನು ಉತ್ತೇಜಿಸುತ್ತದೆ. ಈ ಕ್ರಮಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ 50,000 ಕೋಟಿ ರೂ. ಉದ್ದೇಶಿತ ದೀರ್ಘಕಾಲೀನ ರೆಪೊ ಕಾರ್ಯಾಚರಣೆ (ಟಿಎಲ್‌ಟಿಆರ್‌ಒ) ಮೂಲಕ ಒದಗಿಸುತ್ತಿದೆ ಎಂದರು.

ಮಾರ್ಚ್​ 27ರಂದು 75 ಮೂಲಾಂಶಗಳಷ್ಟು ರೆಪೊ ದರವನ್ನು ಎಂಸಿಪಿ ಅನ್ವಯ ಕಡಿತ ಮಾಡಲಾಗಿತ್ತು. ಇದಕ್ಕೂ ಮೊದಲು ಶೇ 5.15ರಷ್ಟಿದ್ದ ರೆಪೊ ದರ ಶೇ.4.4ಕ್ಕೆ ಇಳಿಕೆ ಮಾಡಿತ್ತು. ಆರ್​ಬಿಐನ ಇಂದಿನ ಪರಿಷ್ಕೃತ ದರದಿಂದ ಗೃಹ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ. ಇದರ ಪ್ರಯೋಜನ ಗೃಹ ಮತ್ತು ವಾಹನ ಸಾಲಗಾರರಿಗೆ ಸಿಗಲಿದೆ. ರೆಪೊ ದರ ಕಡಿತ ಮಾಡಿರುವುದರಿಂದ ಆರ್‌ಬಿಐಯಿಂದ ಬ್ಯಾಂಕ್​ಗಳಿಗೆ ಸಿಗಬೇಕಾಗಿರುವ ಸಾಲದ ಮೇಲಿನ ಬಡ್ಡಿಯೂ ಇಳಿಕೆಯಾಗಿ ಹಣದ ಹರಿವು ಹೆಚ್ಚಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.