ETV Bharat / business

ಜಿಡಿಪಿ ಕುಸಿದು ಬ್ಯಾಂಕ್​ಗಳು ಸಂಕಷ್ಟದಲ್ಲಿವೆ, ಇದು ಅಭಿವೃದ್ಧಿಯೋ ನಾಶವೋ?: ನಮೋ ಸರ್ಕಾರಕ್ಕೆ ರಾಗಾ ಪ್ರಶ್ನೆ

ಬ್ಯಾಂಕ್​ಗಳು ತೊಂದರೆಯಲ್ಲಿವೆ. ಜಿಡಿಪಿಯೂ ಸಂಕಷ್ಟ ದಲ್ಲಿದೆ. ಹಣದುಬ್ಬರವು ಎಂದಿಗೂ ಹೆಚ್ಚಿರಲಿಲ್ಲ. ನಿರುದ್ಯೋಗವೂ ಹೀಗೆ ಆಗಿರಲಿಲ್ಲ. ಸಾರ್ವಜನಿಕರ ಸ್ಥೈರ್ಯ ಕುಸಿಯುತ್ತಿದೆ. ಸಾಮಾಜಿಕ ನ್ಯಾಯವನ್ನು ನಿತ್ಯವೂ ಪುಡಿಮಾಡಲಾಗುತ್ತಿದೆ. ಅಭಿವೃದ್ಧಿಯೋ ಅಥವಾ ವಿನಾಶವೋ ಎಂದು ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

author img

By

Published : Nov 18, 2020, 3:48 PM IST

Rahul Gandhi
ರಾಹುಲ್​ ಗಾಂಧಿ

ನವದೆಹಲಿ: ಹೆಚ್ಚುತ್ತಿರುವ ಸರಕುಗಳ ಬೆಲೆ ಮತ್ತು ನಿರುದ್ಯೋಗ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, 'ಇದು ಅಭಿವೃದ್ಧಿಯೋ ಅಥವಾ ವಿನಾಶವೋ' ಎಂದು ಪ್ರಶ್ನಿಸಿದ್ದಾರೆ.

ಬ್ಯಾಂಕ್​ಗಳು ತೊಂದರೆಯಲ್ಲಿವೆ. ಜಿಡಿಪಿಯೂ ಸಂಕಷ್ಟ ದಲ್ಲಿದೆ. ಹಣದುಬ್ಬರವು ಎಂದಿಗೂ ಹೆಚ್ಚಿರಲಿಲ್ಲ. ನಿರುದ್ಯೋಗವೂ ಹೀಗೆ ಆಗಿರಲಿಲ್ಲ. ಸಾರ್ವಜನಿಕರ ಸ್ಥೈರ್ಯ ಕುಸಿಯುತ್ತಿದೆ. ಸಾಮಾಜಿಕ ನ್ಯಾಯವನ್ನು ಪ್ರತಿದಿನವೂ ಪುಡಿಮಾಡಲಾಗುತ್ತಿದೆ. ಅಭಿವೃದ್ಧಿಯೋ ಅಥವಾ ವಿನಾಶವೋ ಎಂದು ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

ಹಣಕಾಸೇತರ ಸಂಸ್ಥೆಗಳ ನಗದು ಬಿಕ್ಕಟ್ಟು, ಯೆಸ್ ಬ್ಯಾಂಕ್ ಮತ್ತು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್​ಗಳ (ಪಿಎಂಸಿ) ಠೇವಣಿ ವ್ಯಾಜ್ಯದ ಬಳಿಕ ನಿನ್ನೆ ಲಕ್ಷ್ಮಿ ವಿಲಾಸ್​ ಬ್ಯಾಂಕ್​ನ ಆಡಳಿತ ಮಂಡಳಿ ವಜಾಗೊಳಿಸಿ ಠೇವಣಿ ಹಿಂತೆಗೆತದ ಮೇಲೆ ಕೇಂದ್ರ ನಿರ್ಬಂಧ ಹೇರಿತ್ತು. ಆಹಾರ ಪದಾರ್ಥಗಳ ಚಿಲ್ಲರೆ ಹಣದುಬ್ಬರ ಆರು ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ. ಈ ಎಲ್ಲ ಬೆಳವಣಿಗೆಗಳನ್ನು ಗುರಿಯಾಗಿಸಿ ಕೊಂಡು ಕಾಂಗ್ರೆಸ್​ ಟ್ವೀಟ್ ದಾಳಿ ನಡೆಸಿದೆ.

ಕ್ಷೀಣಿಸುತ್ತಿರುವ ಜಿಡಿಪಿ ಮತ್ತು ಆರ್ಥಿಕತೆಯ ಸ್ಥಿತಿ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಗಾಂಧಿ, ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ತನ್ನ ನೀತಿಗಳಿಂದ ಮೋದಿ ಸರ್ಕಾರ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.