ETV Bharat / business

ಕರೆಂಟ್​ಗೆ ಶಾಕ್​ ಕೊಟ್ಟ ಎಲೆಕ್ಟ್ರಿಕ್​ ಪವರ್​​ ಬೇಡಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿತ! - ಭಾರತದಲ್ಲಿ ವಿದ್ಯುತ್ ಬೇಡಿಕೆ

ವಿದ್ಯುತ್ ಬೇಡಿಕೆ ಹೆಚ್ಚುತ್ತಲೇ ಇದೆ. ಭಾರತದಾದ್ಯಂತ ಮತ್ತೊಂದು ದಾಖಲೆಯ ಬೇಡಿಕೆಯಾದ 185.82 ಗಿಗಾವ್ಯಾಟ್​ ಬಂದಿದೆ. ಅಂದರೆ, 185.822 ಮೆಗಾವ್ಯಾಟ್ ಇಂದು ಬೆಳಗ್ಗೆ 9: 35 ಗಂಟೆಗೆ ಬಂದಿದೆ. ಇದು 2020ರ ಡಿಸೆಂಬರ್ 30ರ ಅಖಿಲ ಭಾರತ ಬೇಡಿಕೆಯಾಗಿದ್ದ 182.89 ಜಿಡಬ್ಲ್ಯು ದಾಖಲೆಯನ್ನು ದಾಟಿದೆ ಎಂದು ಸಹೈ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

Power
ಪವರ್
author img

By

Published : Jan 20, 2021, 1:55 PM IST

ನವದೆಹಲಿ: ಅಖಿಲ ಭಾರತ ವಿದ್ಯುತ್ ಬೇಡಿಕೆಯು ಬುಧವಾರ ಬೆಳಗ್ಗೆ ದಾಖಲೆಯ ಗರಿಷ್ಠ 185.82 ಗಿಗಾವ್ಯಾಟ್ (ಜಿಡಬ್ಲ್ಯೂ) ಮುಟ್ಟಿದೆ ಎಂದು ವಿದ್ಯುತ್ ಕಾರ್ಯದರ್ಶಿ ಎಸ್ ಎನ್ ಸಹೈ ತಿಳಿಸಿದ್ದಾರೆ.

ವಿದ್ಯುತ್ ಬೇಡಿಕೆ ಹೆಚ್ಚುತ್ತಲೇ ಇದೆ. ಭಾರತದಾದ್ಯಂತ ಮತ್ತೊಂದು ದಾಖಲೆಯ ಬೇಡಿಕೆಯಾದ 185.82 ಗಿಗಾವ್ಯಾಟ್​ ಬಂದಿದೆ. ಅಂದರೆ, 185.822 ಮೆಗಾವ್ಯಾಟ್ ಇಂದು ಬೆಳಗ್ಗೆ 9: 35 ಗಂಟೆಗೆ ಬಂದಿದೆ. ಇದು 2020ರ ಡಿಸೆಂಬರ್ 30ರ ಅಖಿಲ ಭಾರತ ಬೇಡಿಕೆಯಾಗಿದ್ದ 182.89 ಜಿಡಬ್ಲ್ಯು ದಾಖಲೆಯನ್ನು ದಾಟಿದೆ ಎಂದು ಸಹೈ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

2020ರ ಡಿಸೆಂಬರ್ 30ರಂದು ಅಖಿಲ ಭಾರತ ವಿದ್ಯುತ್ ಬೇಡಿಕೆ 182.89 ಜಿವ್ಯಾಟ್ ಮುಟ್ಟಿತ್ತು. ವಿದ್ಯುತ್ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ ವರ್ಷದ ಜನವರಿಯಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ (ಒಂದು ದಿನದಲ್ಲಿ ಅತಿ ಹೆಚ್ಚು ಪೂರೈಕೆ) 170.97 ಜಿಡಬ್ಲ್ಯು ಆಗಿತ್ತು.

ಇದನ್ನೂ ಓದಿ: ಎರಡೂವರೆ ತಿಂಗಳ ಕಣ್ಮರೆ ಬಳಿಕ ಆನ್​ಲೈನ್ ವಿಡಿಯೋದಲ್ಲಿ ಮೌನ ಮುರಿದ ಚೀನಾದ ಕುಬೇರ ಜಾಕ್ ಮಾ

ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಿನ ವಾಣಿಜ್ಯ ಮತ್ತು ಕೈಗಾರಿಕಾ ಬೇಡಿಕೆಗೆ ಕಾರಣವಾಗುತ್ತದೆ. ಇದು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಪ್ರಭಾವಿತವಾಗಿದೆ. ಕೋವಿಡ್​-19 ಹರಡುವುದನ್ನು ನಿಯಂತ್ರಿಸಲು ಸರ್ಕಾರವು 2020ರ ಮಾರ್ಚ್ 25ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸಿತ್ತು.

ಸಾಂಕ್ರಾಮಿಕ ರೋಗದಿಂದಾಗಿ ಗರಿಷ್ಠ ವಿದ್ಯುತ್ ಬೇಡಿಕೆ ಕಳೆದ ವರ್ಷ ಏಪ್ರಿಲ್​ನಿಂದ ಆಗಸ್ಟ್ ತನಕ ದಾಖಲಾದ ಋಣಾತ್ಮಕ ಬೆಳವಣಿಗೆ ಪೂರೈಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.