ETV Bharat / business

ಕೋವಿಡ್​ ಹೋರಾಟಕ್ಕೆ ಹಣ ಬಲ: 2ನೇ ಹಂತದ ಪ್ಯಾಕೇಜ್ ಪರಿಶೀಲಿಸಿದ ಮೋದಿ - ಭಾರತದ ಆರ್ಥಿಕತೆ

ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಲಾಕ್​ಡೌನ್​ನಿಂದಾಗಿ ಸಣ್ಣ ಉದ್ಯಮಗಳಿಂದ ಹಿಡಿದು ವಾಯುಯಾನದವರೆಗೂ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದರ ಕುರಿತು ಚರ್ಚಿಸಿದ್ದಾರೆ. 1.7 ಲಕ್ಷ ಕೋಟಿ ರೂ. ಮೊತ್ತದ ಮೊದಲ ಹಂತದ ಆರ್ಥಿಕ ಉತ್ತೇಜನ ಪ್ಯಾಕೇಜ್​ ನೀಡಿದ ಬಳಿಕ ಉದ್ಯಮಿಗಳಿಗೆ ಮತ್ತೊಂದು ಸುತ್ತಿನ ವಿತ್ತೀಯ ಬೆಂಬಲ ನೀಡಲು ಕೇಂದ್ರ ಮುಂದಾಗಿದೆ. ಈ ಬಗ್ಗೆಯೂ ಪ್ರಧಾನಿ ಪರಿಶೀಲನೆ ನಡೆಸಿದ್ದಾರೆ.

PM Modi- Nirmala Sitharaman
ಮೋದಿ- ನಿರ್ಮಲಾ ಸೀತಾರಾಮನ್
author img

By

Published : Apr 16, 2020, 8:46 PM IST

ನವದೆಹಲಿ: ಕೊರೋನಾ ವೈರಸ್ ಪ್ರಸರಣ ತಡೆಗೆ ದೇಶದಲ್ಲಿ ಹೇರಲಾಗಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಘೋಷಿಸಿದ ಬಳಿಕ ಎರಡನೇ ಪ್ಯಾಕೇಜ್ ಪ್ರಕಟಿಸಲು ಸಿದ್ಧವಾಗಿದೆ.

ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಕ್ಷೇತ್ರಗಳ ಚೇತರಿಕೆಗೆ ಎರಡನೇ ಪ್ಯಾಕೇಜ್​ನಲ್ಲಿನ ಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪರಿಶೀಲಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಅವರು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಲಾಕ್​ಡೌನ್​ನಿಂದಾಗಿ ಸಣ್ಣ ಉದ್ಯಮಗಳಿಂದ ಹಿಡಿದು ವಾಯುಯಾನದವರೆಗೂ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಕುರಿತು ಚರ್ಚಿಸಿದ್ದಾರೆ.

ಕೋವಿಡ್​-19 ಮತ್ತು ಅದರ ಪರಿಣಾಮವಾಗಿ ವಿಧಿಸಲಾಗಿರುವ ದಿಗ್ಬಂಧನದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಆಯಾಮಗಳಿಂದ ವಿಶ್ಲೇಷಿಸಿದ ರೇಟಿಗ್​ ಏಜೆನ್ಸಿಗಳು, ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ತೀವ್ರವಾಗಿ ಕಡಿಮೆಗೊಳಿಸಿವೆ. ಈ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸಭೆಯಲ್ಲಿ ಆರ್ಥಿಕತೆಯ ಸ್ಥಿತಿಗತಿಯ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭವಿಷ್ಯದ ಸವಾಲುಗಳನ್ನು ಎದುರಿಸಿ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡುವ ಬಗ್ಗೆ ಚರ್ಚಿಸಿದ್ದಾರೆ.

ವಿಶ್ವ ಬ್ಯಾಂಕಿನ ಇತ್ತೀಚಿನ ಅಂದಾಜಿನ ಪ್ರಕಾರ, ಭಾರತದ ಜಿಡಿಪಿ ಶೇ 1.5 ರಿಂದ 2.8ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಅಂತೆಯೇ, ಐಎಂಎಫ್ 2020ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 1.9ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಜಾಗತಿಕ ಆರ್ಥಿಕತೆಯು 1930ರ ಮಹಾ ಆರ್ಥಿಕ ಕುಸಿತದ ನಂತರದ ಭೀಕರ ವಿತ್ತೀಯ ಹಿಂಜರಿತದ ಮುಟ್ಟ ತಲುಪಿದೆ. ಹೀಗಾಗಿ, ಭಾರತದ ಆರ್ಥಿಕತೆಯು ಇದಕ್ಕೆ ಹೊರತಾಗಿಲ್ಲ.

ಸಾಂಕ್ರಾಮಿಕ ರೋಗ ಮತ್ತು ಅದು ತಂದಿಟ್ಟ ಪರಿಣಾಮವು ಎಂಎಸ್‌ಎಂಇ, ಆತಿಥ್ಯ, ನಾಗರಿಕ ವಿಮಾನಯಾನ, ಕೃಷಿ, ಕೈಗಾರಿಕೆ, ಆಟೋಮೊಬೈಲ್​ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೊಡತ ನೀಡಿದೆ.

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅತಾನು ಚಕ್ರವರ್ತಿ ನೇತೃತ್ವದ ತಜ್ಞರ ತಂಡ, ಪ್ರಸ್ತುತ ಕುಸಿದ ಆರ್ಥಿಕತೆಯನ್ನು ಮರಳಿ ಪ್ರಗತಿಯ ಹಾದಿಗೆ ತರಲು ಬೇಕಾದ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ. ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ಮಾತ್ರವಲ್ಲದೆ ಬಡವರು ಮತ್ತು ವಲಸಿಗರಿಗೆ ಪರಿಹಾರ ಹಾಗೂ ಕಲ್ಯಾಣ ಯೋಜನೆಗಳನ್ನು ರೂಪಿಸುವ ಹೊಣೆಯನ್ನು ಸಹ ಹೊತ್ತುಕೊಂಡಿದೆ.

ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ, ಬಡವರು, ರೈತರು ಮತ್ತು ದಿನಗೂಲಿ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.